HomeIndia News9 ತಿಂಗಳ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್!

9 ತಿಂಗಳ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್!

For Dai;y Updates Join Our whatsapp Group

Spread the love

ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಅಂತೂ ಭೂಮಿಗೆ ಮರಳಿದ್ದಾರೆ. ಸ್ಪೇಸ್​ಎಕ್ಸ್ನ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮರಳಿದ್ದಾರೆ.

ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್‌ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು.

ನಿರಂತರ 17 ಗಂಟೆಗಳ ಪಯಣದ ಬಳಿಕ ಭಾರತೀಯ ಕಾಲಮಾನ, ಸರಿಯಾಗಿ ಇಂದು ನಸುಕಿನ 3.27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಸಾಗರದಲ್ಲಿ ಲ್ಯಾಂಡ್ ಆಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್‌ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!