HomeCrime Newsಹಣದ ವಿಚಾರಕ್ಕೆ ಶುರುವಾದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯ..!

ಹಣದ ವಿಚಾರಕ್ಕೆ ಶುರುವಾದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯ..!

For Dai;y Updates Join Our whatsapp Group

Spread the love

ಹುಬ್ಬಳ್ಳಿ : ಹಣದ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿ  ನಗರದ ಗೋಪನಕೊಪ್ಪದ ಹರಿಜನಕೇರಿಯಲ್ಲಿ ನಡೆದಿದೆ.

ಹೌದು ಹಣದ ವಿಚಾರವಾಗಿ ಮಗ ತಂದೆಗೆ ಚಾಕುವಿನಿಂದ ಇರಿದಿದ್ದು, ಪ್ರಕರಣ ಸಂಬಂಧ ಆರೋಪಿ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ. ‌ಆನಂದ ಹೊಸಮನಿ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟವರು.

ಸಾಲ ತೀರಿಸಲು ₹3 ಲಕ್ಷ ಕೊಡಿಸುವಂತೆ ಆರೋಪಿ ಉಮೇಶ ತನ್ನ ತಾಯಿ ರೇಣುಕಾ ಹೊಸಮನಿ ಅವರನ್ನು ಪೀಡಿಸಿದ್ದಾನೆ. ಬಳಿಕ ತಂದೆಯೊಂದಿಗೂ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!