Homecinemaಜ.24ಕ್ಕೆ `ಶಿವಯೋಗಿ ಶ್ರೀಸಿದ್ದರಾಮೇಶ್ವರ' ಚಿತ್ರ ತೆರೆಗೆ

ಜ.24ಕ್ಕೆ `ಶಿವಯೋಗಿ ಶ್ರೀಸಿದ್ದರಾಮೇಶ್ವರ’ ಚಿತ್ರ ತೆರೆಗೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಓಂಕಾರ ಮೂವೀಸ್ ಬೆಂಗಳೂರು, ಸುಜಾತಾ ರಾಜ್‌ಕುಮಾರ್ ಅರ್ಪಿಸುವ ಪುರುಷೋತ್ತಮ್ ಓಂಕಾರ್ ಸ್ವಾಮಿಯವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದಿರುವ `ಶಿವಯೋಗಿ ಶ್ರೀ ಸಿದ್ದರಾಮೇಶ್ವರ’ ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಠಿ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಜರುಗಿತು.

ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆಯಾದ ರಾವಣ ಕತ್ತಿಯವರು ಸಿದ್ದರಾಮೇಶ್ವರನಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಒಂದು ಪೌರಾಣಿಕ ಕಥೆಯನ್ನು ಈಗಿನ ಕಾಲದ ತಾಂತ್ರಿಕತೆಯೊಂದಿಗೆ ಸಿದ್ಧಪಡಿಸಲಾಗಿದ್ದು, ಸಿದ್ದರಾಮೇಶ್ವರ ಪವಾಡಗಳೊಂದಿಗೆ ಮನರಂಜನೆಯನ್ನು ಹೊಂದಿದೆ. ಈಗಿನ ಕಾಲದ ಜನರಿಗೆ ಶರಣರ ಸಂಗತಿಗಳನ್ನು ಮನರಂಜನಾತ್ಮಕವಾಗಿ ಮುಟ್ಟಿಸಲು ಎನ್.ಎಸ್. ರಾಜಕುಮಾರ್ ಅವರು ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು, ಸಹ ನಿರ್ಮಾಪಕರಾಗಿ ಜೆ.ಕೆ. ಸುನಿಲ್ ಕುಮಾರ್ ಕೈಜೋಡಿಸಿದ್ದಾರೆ.

ಈ ಚಿತ್ರದಲ್ಲಿ ಎರಡು ಹಾಡುಗಳು ಹಾಗೂ ನಾಲ್ಕು ವಚನಗಳಿದ್ದು, ಚಿತ್ರಕ್ಕೆ ಸಂಗೀತ ಸಂಯೋಜನೆ ರಾಜ್ ಭಾಸ್ಕರ್ ಮಾಡಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್, ಚಿತ್ರದ ಎಡಿಟಿಂಗ್ ಹಾಗೂ ಗ್ರಾಫಿಕ್ಸ್ ಕಾರ್ಯ ಆರ್. ಅನಿಲ್ ಕುಮಾರ್, ಪತ್ರಿಕಾಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ ಅವರದಿದೆ. ಮುಖ್ಯ ತಾರಾಗಣದಲ್ಲಿ ರಾವಣ ಕತ್ತಿ, ಗಣೇಶ್ ರಾವ್ ಕೇಸರಕರ್, ನಾಗೇಂದ್ರ ಅರಸು, ಬಸವರಾಜ್ ರಕ್ಷಾಗೌಡ, ಅನ್ನಪೂರ್ಣ, ಪ್ರಮೀಳಾ ಸುಬ್ರಹ್ಮಣ್ಯ, ಬಾಲಕ ಸಿದ್ದರಾಮನಾಗಿ ಮಾ.ಸಮರ್ಥ, ಬಸವರಾಜ ಮುಂತಾದವರು ಅಭಿನಯಿಸಿದ್ದಾರೆ.

ಈ ಚಿತ್ರವು ಜ. 24ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಮಾಹಿತಿ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!