Homecinemaಪಹಲ್ಗಾಮ್‌ ದಾಳಿ ಇಸ್ಲಾಂ ಒಪ್ಪಲ್ಲ, ನಾನು ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಬಾಲಿವುಡ್ ಖ್ಯಾತ ಗಾಯಕನ...

ಪಹಲ್ಗಾಮ್‌ ದಾಳಿ ಇಸ್ಲಾಂ ಒಪ್ಪಲ್ಲ, ನಾನು ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಬಾಲಿವುಡ್ ಖ್ಯಾತ ಗಾಯಕನ ಬೇಸರದ ನುಡಿ!

For Dai;y Updates Join Our whatsapp Group

Spread the love

ಪಹಲ್ಗಾಮ್‌ ಮೇಲಿನ ದಾಳಿ ಇಸ್ಲಾಂ ಎಂದಿಗೂ ಒಪ್ಪಲ್ಲ, ನಿಜಕ್ಕೂ ನಾನು ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ ಎಂದು ಬಾಲಿವುಡ್ ಖ್ಯಾತ ಗಾಯಕ ಸಲೀಂ ಮರ್ಚೆಂಟ್ ಬೇಸರ ಹೊರ ಹಾಕಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಹಿಂದೂ ಅನ್ನೋ ಕಾರಣಕ್ಕೆ ಈ ದಾಳಿಯಲ್ಲಿ ಅಮಾಯಕರ ಹತ್ಯೆಯಾಗಿದೆ. ಅಮಾಯಕರನ್ನೇ ಟಾರ್ಗೆಟ್ ಮಾಡಲಾಗಿದೆ. ಹತ್ಯೆ ಮಾಡಿದವರು ಮುಸ್ಲಿಂರೇ? ಖಂಡಿತಾ ಅಲ್ಲ. ಅವರು ಭಯೋತ್ಪಾದಕರು ಎಂದಿದ್ದಾರೆ. ಹತ್ಯೆಯನ್ನು ಇಸ್ಲಾಂ ಎಂದು ಒಪ್ಪುವುದಿಲ್ಲ. ಯಾವುದೇ ಧರ್ಮದಲ್ಲಿ ಹೀಗೆಲ್ಲಾ ಇಲ್ಲ. ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗುತ್ತಿದೆ. ಇಂತಹ ದಿನಗಳನ್ನು ನೋಡುವಂತೆ ಆಗಿದೆ.

ನನ್ನ ಹಿಂದೂ ಸಹೋದರ ಸಹೋದರಿಯರ ಮೇಲೆ ಅವರು ಕ್ರೂರವಾಗಿ ದಾಳಿ ಮಾಡಿದ್ದಾರೆ. ಅದು ಹಿಂದೂ ಆಗಿರೋದ್ದಕ್ಕೆ, ಇದು ಯಾವಾಗ ಅಂತ್ಯಗೊಳ್ಳುತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಕಳೆದ ಎರಡ್ಮೂರು ವರ್ಷದಿಂದ ಕಾಶ್ಮೀರ ಜನರು ಸಮಸ್ಯೆಗಳಿಂದ ಮುಕ್ತಿ ಪಡೆದು, ಸಹಜ ಜೀವನಕ್ಕೆ ಮರಳುತ್ತಿದ್ದರು. ಈ ದಾಳಿಯಿಂದ ಮತ್ತೆ ಅದೇ ರೀತಿ ಪರಿಸ್ಥಿತಿ ಎದುರಿಸುವಂತಾಗಿದೆ. ನನಗೆ ಯಾವ ರೀತಿಯಲ್ಲಿ ನೋವು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಬೇಕು ಅಂತ ಅರ್ಥವಾಗುತ್ತಿಲ್ಲ. ನಾನು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ, ತೀರಿಕೊಂಡಿರುವ ಆ ವ್ಯಕ್ತಿಗಳ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗಾಯಕ ಸಲೀಂ ಮಾತನಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!