HomeBengaluru Newsಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ ಗೆ ಬೆಂಕಿ ಇಟ್ಟ ಸವಾರ!

ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ ಗೆ ಬೆಂಕಿ ಇಟ್ಟ ಸವಾರ!

For Dai;y Updates Join Our whatsapp Group

Spread the love

ಬೆಂಗಳೂರು: ಯುವಕನೋರ್ವ ಪೊಲೀಸರ ಮೇಲಿನ ಕೋಪಕ್ಕೆ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಬೆಂಗಳೂರಿನ ವಿಧಾನಸೌಧ ಮುಂದೆಯೇ ಜರುಗಿದೆ.

ಪೃಥ್ವಿರಾಜ್ ಎಂಬಾತನಿಂದ ಕತ್ಯ ನಡೆದಿದ್ದು, ಚಳ್ಳಕೆರೆ ಮೂಲದವನು ಎನ್ನಲಾಗಿದೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಕಿ ಹಚ್ಚಲು ಕಾರಣವೇನು ಎನ್ನುವುದನ್ನು ನೋಡುವುದಾದರೆ!?

ಟ್ರೆಕ್ಕಿಂಗ್ ಹೋಗಿ ಪೃಥ್ವಿ ನಾಪತ್ತೆಯಾಗಿದ್ದ. ಹೀಗಾಗಿ ದೂರು ನೀಡಲು ಚಳ್ಳಕೆರೆ ಪೊಲೀಸ್ ಠಾಣೆಗೆ ಯುವಕನ ತಾಯಿ ಹೋಗಿದ್ದರು. ಆ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ. ಆ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಯುವಕ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ.

ವೈರಲ್ ಆಯ್ತು ಯುವಕನ ಹಳೆ ವಿಡಿಯೋ

ತಾಯಿಗೆ ಅವಾಚ್ಯ ಶಬ್ಧದಿಂದ ನಿಂದಿಸಿರುವುದನ್ನು ತೀವ್ರವಾಗಿ ಖಂಡಿಸಿದ ಪೃಥ್ವಿ ಇನ್ಸ್ಟಾಗ್ರಾಂ ಮೂಲಕ ವಿಡಿಯೋ ಒಂದನ್ನು ಮಾಡಿ ಹರಿ ಬಿಟ್ಟಿದ್ದನ್ನು. ಆ ವಿಡಿಯೋದಲ್ಲಿ ಆತ ನನಗೆ ನ್ಯಾಯ ಸಿಗದಿದ್ರೆ ನಾನು ಟೆರೆರಿಸ್ಟ್ ಆಗ್ತೀನಿ, ಇಡೀ ಬೆಂಗಳೂರು ಮ್ಯಾಪೇ ನನ್ನ ಹತ್ರ ಇದೆ. ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಮೆಟ್ರೋದಲ್ಲಿ 9 ವರ್ಷ ಕೆಲಸ‌ ಮಾಡೀದ್ದೀನಿ. ISRO, DRDO ಗೆ ಪವರ್ ಎಲ್ಲಿಂದ ಹೋಗತ್ತೆ ಅಂತಾನು ಗೊತ್ತು. ಎಲ್ಲಿ ಪಿನ್ ಇಟ್ರೇ, ಎಲ್ಲಿ ಬ್ಲಾಸ್ಟ್ ಮಾಡಬಹುದು ಅಂತಾ ನನಗೆ ಗೊತ್ತಿದೆ. ಎಲ್ಲಿ ಏನ್ ಬೇಕಾದ್ರೂ ಬ್ಲಾಸ್ಟ್ ಮಾಡಿ ಶಿವಾ ಅನ್ನಿಸ್ತೀನಿ ಎಂದು ಯುವಕ ವಿಡಿಯೋ ಮಾಡಿ ಹರಿಬಿಟ್ಟಿದ್ದ.

ವಿಧಾನಸೌಧವನ್ನು ಬ್ಲಾಸ್ಟ್ ಮಾಡ್ತೀನಿ

ನಾನು ಎಲೆಕ್ಟ್ರಿಕಲ್‌ ಇಂಜನೀಯರ್, 9 ವರ್ಷ ಕೆಲ್ಸಾ ಮಾಡಿದೀನಿ. ವಿಧಾನಸೌಧ, ರಾಜಭವನ ಸೇರಿ ಇಡೀ ಬೆಂಗಳೂರಿಗೆ ಪವರ್ ಎಲ್ಲಿಂದ ಬರುತ್ತೆ ಅಂತಾ ಗೊತ್ತು. ಎಲ್ಲಿ ಏನು ಬ್ಲ್ಯಾಸ್ಟ್ ಮಾಡ್ತೀನಿ ನನಗೆ ಗೊತ್ತು. ನನಗೆ ನ್ಯಾಯ ಕೊಡ್ಲಿಲ್ಲಾ ಅಂದ್ರೆ ನಾನು ಅದೇ ಕೆಲ್ಸ ಮಾಡೋದು. ನನ್ನನ್ನು ಕ್ರೈಂ ಮಾಡೋಕೆ ಪ್ರೊವೋಕ್ ಮಾಡಿದೀರಾ.

ನನ್ನನ್ನು ಗಲ್ಲಿಗೆ ಏರಸ್ತೀರಾ? ಏರ್ಸಿ ಇದೆಲ್ಲಾ ಆಗೋಕೆ 10-15 ವರ್ಷ ಜೈಲಲ್ಲಿ ಇಡ್ತೀರಾ. ಅದೂ ದೊಡ್ಡದಾಗಿ ಮಾಡಿದ್ರೆ VIP ಸೆಲ್ ನಲ್ಲಿ ಇಡ್ತೀರಾ. ನನಗೆ ನಮ್ಮ ಡಿ ಬಾಸ್ ಪಕ್ಕದ ಸೆಲ್ಲೇ ಕೊಡಿ. ಸ್ವಲ್ಪ ದಿವಸ ಆರಾಮಾಗಿ ನೋಡ್ಕೊಂಡು ಇರ್ತೀನಿ. ನನ್ನ ತಾಯಿ ಎದುರಿಗೇ ನನ್ನನ್ನು ನಾಯಿಗೆ ಹೊಡ್ದಂಗೆ ಹೊಡ್ದಿದಾರೆ. ನಾನು ಹೇಳಿದ್ದೇ ಮಾಡೋದು, ಮಾಡಿದ್ದೇ ಹೇಳೋದು ಎಂದು ವಿಡಿಯೋ ಮಾಡಿ ಯುವಕ ಹುಚ್ಚಾಟ ಮೆರೆದಿದ್ದಾನೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!