ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನೀಡಲು ತಂದಿದ್ದ ಟ್ಯಾಬ್ ಗಳ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದು, ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಟ್ಯಾಬ್ ಕೊಟ್ಟಿದ್ದರು. ಜಯನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಗೋಡೌನ್ ನಲ್ಲಿ 62 ಟ್ಯಾಬ್ ಗಳನ್ನ ಕಳ್ಳತನ ಮಾಡಿದ್ದನು.
ಎರಡು ವರ್ಷಗಳ ಹಿಂದೆ ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸ ಬಿಟ್ಟಿದ್ದರು, ಕೀ ತಾನೇ ಇಟ್ಟುಕೊಂಡಿದ್ದ ಆರೋಪಿ, ಗೋಡೌನ್ ಕೀ ತೆಗೆದು ಟ್ಯಾಬ್ ಕದ್ದಿದ್ದನು. ಈ ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರೆದ ಪೊಲೀಸರು ಆರೋಪಿಯನ್ನು ಬಂಧಿಸಿ, 62 ಟ್ಯಾಬ್ ಗಳನ್ನ ವಶಕ್ಕೆ ಪಡೆದಿದ್ದಾರೆ.



