HomeArt and Literatureಅಪ್ಪನಿಂದಲೇ ಈ ಬದುಕು

ಅಪ್ಪನಿಂದಲೇ ಈ ಬದುಕು

For Dai;y Updates Join Our whatsapp Group

Spread the love

ಜೂನ್ 15ರಂದು ವಿಶ್ವ ಅಪ್ಪಂದಿರ ದಿನ. ಈ ದಿನಾಚರಣೆಗೂ ಮುನ್ನ ಈ ದಿನದ ಅರ್ಥ ಮತ್ತು ತಂದೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಅಪ್ಪ-ಅಮ್ಮ ದೇವರ ಸಮಾನ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಂದೆಯ ಸ್ಥಾನ ಮತ್ತು ಅಪ್ಪ-ಅಮ್ಮನ ಪ್ರೀತಿ ಅತ್ಯಮೂಲ್ಯವಾದದ್ದು.

ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವರು ಅಪ್ಪ. ಅಂತಹ ತಂದೆ-ತಾಯಿಗಳನ್ನು ನಾವು ಯಾವಗಲೂ ಗೌರವದಿಂದ ಕಾಣಬೇಕು. ಅದು ನಮ್ಮ ಕರ್ತವ್ಯ ಕೂಡ. ಅಪ್ಪ ನೀ ದೇವರು. ಈ ಜಗವೆಲ್ಲಾ ನೀನೇ ಅಪ್ಪ. ಅಪ್ಪ ಎಂಬ ಎರಡಕ್ಷರದ ಪದ ಪವಿತ್ರವಾದ ಸಂಕೇತ. ಹೌದು, ಅಪ್ಪ-ಅಮ್ಮ ದೇವರ ಸ್ವರೂಪ. ನಾವು ದೇವರನ್ನು ಎಷ್ಟು ಭಯ-ಭಕ್ತಿಯಿಂದ, ಗೌರವದಿಂದ ಪೂಜಿಸಿ ಆರಾಧಿಸುತ್ತೇವೆಯೋ ಹಾಗೇಯೇ ಅಮ್ಮ-ಅಪ್ಪನನ್ನು ಭಯ ಭಕ್ತಿಯಿಂದ, ಗೌರವದಿಂದ ನೋಡಿಕೊಳ್ಳಬೇಕು.

ಅಪ್ಪ ಇಲ್ಲದ ಪ್ರಪಂಚವಿಲ್ಲ. ಎಲ್ಲಾ ಮಕ್ಕಳಿಗೂ ತಂದೆ-ತಾಯಿಯ ಆಶೀರ್ವಾದ ಬೇಕು. ಅವರಿಂದಲೇ ನಾವು. ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ. ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿಯೇ ತಾಯಿ. ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವೂ ಅಮ್ಮ-ಅಪ್ಪ. ಎಲ್ಲಾ ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಅಪ್ಪ ಮಗುವಿನ ತೋರು ಬೆರಳು ಹಿಡಿದು ತನ್ನ ಸುತ್ತ ಮುತ್ತ ಇಡೀ ಜಗತ್ತನೇ ತೋರಿಸುತ್ತಾರೆ.

ಅಪ್ಪ ಅಂದರೆ ಜಗತ್ತು, ಅಪ್ಪ ಅಂದರೆ ದೇವರು, ಅಪ್ಪ ಅಂದರೆ ಶಕ್ತಿ, ಅಪ್ಪ ಅಂದರೆ ಆಕಾಶ, ಅಪ್ಪ ಅಂದರೆ ಸ್ನೇಹಿತ, ಅಪ್ಪ ಅಂದರೆ ಪಪ್ರಂಚ, ಅಪ್ಪ ಅಂದರೆ ಪ್ರೀತಿ, ಅಪ್ಪ ಅಂದರೆ ಬೆಳಕು, ಅಪ್ಪ ಅಂದರೆ ಸಂತೋಷ ಹೀಗೆ ಎಷ್ಟು ಅರ್ಥಗಳಿವೆ… ಅಪ್ಪ ಮಕ್ಕಳನ್ನು ಬೈಯುವುದಕ್ಕೆ ಮುಖ್ಯ ಕಾರಣ ನಾವು ಮಾಡಿರುವ ತಪ್ಪನ್ನು ಮತ್ತೆ ಮಾಡಬಾರದು ಮತ್ತು ನಮಗೆ ಯಾವ ಕೆಡುಕೂ ಆಗಬಾರದು ಎಂದು. ಅವರು ನಮಗೆ ಎಷ್ಟೇ ಬೈದರೂ ಮನಸ್ಸಲಿ ಬೆಟ್ಚದಷ್ಟು ಪ್ರೀತಿ ಇರುತ್ತದೆ. ತನಗೆ ಎಷ್ಟೇ ಕಷ್ಟ, ನೋವು ಬಂದರೂ ತನ್ನ ಮಕ್ಕಳು, ತಮ್ಮ ಕುಟುಂಬ ಖುಷಿಯಾಗಿ, ಸಂತೋಷವಾಗಿ ಇರಬೇಕು ಎಂದು ಬಯಸುವರು ಅಪ್ಪ.

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಲು ಆಗದಿದ್ದರೂ ಕೈಲಾಗಿದ್ದನ್ನ ಕೊಡಿಸುವವರು ಅಪ್ಪ. ಬೇಡಿದಷ್ಟು ಕೊಡದೇ ಹೋದರೂ ಸಲ್ಪವಾದರೂ ಕೊಡಿಸುವರು ಅಪ್ಪ. ತನ್ನಿಂದ ಸಾಧಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಮಕ್ಕಳಿಂದ ಸಾಕಾರಗೊಳಿಸಲು ಪ್ರಯತ್ನ ಮಾಡುವರು ಅಪ್ಪ. ಎಷ್ಟೇ ಕಷ್ಟಗಳು, ನೋವುಗಳು ಬಂದರೂ ತನ್ನಲ್ಲಿಟ್ಟುಕೊಂಡು ಮಕ್ಕಳನ್ನು ಪ್ರೀತಿ ಮಾಡುವರು ಅಪ್ಪ. ಅಪ್ಪ ಯಾವಗಲೂ ತನ್ನ ದುಃಖಗಳನ್ನು ಮರೆತು ಮಕ್ಕಳ ಜೀವನ ಸಂತೋಷದ ಬಗ್ಗೆ ಯೋಚಿಸುತ್ತಾರೆ.

ಮಕ್ಕಳು ಸಂತೋಷವಾಗಿರುವುದನ್ನು ನೋಡಿ ಅವರು ಸಂತೋಷವಾಗಿರುತ್ತಾರೆ. ತಂದೆ-ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ನಮ್ಮ ತಂದೆ-ತಾಯಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು. ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ನಮ್ಮ ಜೀವನದ ಪ್ರತಿಯೊಂದು ಸಂತೋಷವನ್ನೂ ನಾವು ತಾಯಿ-ತಂದೆಗೇ ನೀಡಬೇಕು. ಅಪ್ಪ ಐ ಲವ್ ಯೂ…!

– ವಿ.ಎಂ.ಎಸ್.ಗೋಪಿ.

 ಲೇಖಕರು, ಬೆಂಗಳೂರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!