ನವದೆಹಲಿ: ದೆಹಲಿಯ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಮೂವರು ಆಪ್ತ ಸಹಾಯಕಿಯರನ್ನು ದೆಹಲಿಯ ವಸಂತ್ ಕುಂಜ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶ್ವೇತಾ ಶರ್ಮಾ (ಅಸೋಸಿಯೇಟ್ ಡೀನ್), ಭಾವನಾ ಕಪಿಲ್ (ಕಾರ್ಯನಿರ್ವಾಹಕ ನಿರ್ದೇಶಕಿ) ಹಾಗೂ ಕಾಜಲ್ (ಹಿರಿಯ ಅಧ್ಯಾಪಕಿ) ಬಂದಿತರಾಗಿದ್ದಾರೆ. ಈ ಮೂವರು ಸ್ವಾಮೀಜಿ ನಿರ್ದೇಶನದ ಮೇಲೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹಾಕುತ್ತಿದ್ದರು. ಶಿಸ್ತು ಮತ್ತು ಸಮಯಪಾಲನೆ ನೆಪದಲ್ಲಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಅಪರಾಧ ಕೃತ್ಯಕ್ಕೆ ಪ್ರಚೋದನೆ, ದೂರುದಾರರಿಗೆ ಬೆದರಿಕೆ, ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



