HomeBengaluru Newsಇಂದಿನಿಂದ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ​ ಬಂದ್: ಇಲ್ಲಿದೆ ಬದಲಿ ಮಾರ್ಗ!

ಇಂದಿನಿಂದ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ​ ಬಂದ್: ಇಲ್ಲಿದೆ ಬದಲಿ ಮಾರ್ಗ!

For Dai;y Updates Join Our whatsapp Group

Spread the love

ಬೆಂಗಳೂರು: ಸಿಲ್ಕ್ ಬೋರ್ಡ್ ಜಂಕ್ಷನ್​ನಿಂದ ಹೆಚ್​ಎಸ್​ಆರ್ ಲೇಔಟ್ ಕಡೆಗೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ.

ಹೊರವರ್ತುಲ ರಸ್ತೆ (ಔಟರ್​ ರಿಂಗ್​ ರೋಡ್)​ನಲ್ಲಿ ಬಿಟಿಎಂ ಲೇಔಟ್ 29ನೇ ಮೈನ್ ಜಂಕ್ಷನ್ ಕಡೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಹೆಚ್ಎಸ್ಆರ್ ಲೇಔಟ್ ಕಡೆಗೆ ಮತ್ತು ಹೊಸೂರು ರಸ್ತೆಯಲ್ಲಿ ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮೀರಾ ಸ್ಕೂಲ್ ಬಳಿ ಹೊಸದಾಗಿ ನಿರ್ಮಾಣವಾಗಿರುವ ಫ್ಲೈಓವರ್ ಅಪ್ಪರ್ ರ್ಯಾಂಪ್ ಬಳಿ ನಿರ್ಭಂದಿಸಲಾಗಿದೆ. ಶನಿವಾರ (ಜು.20) ರಿಂದಲೇ ವಾಹನ ಸಂಚಾರ ಬಂದ್​ ಮಾಡಲಾಗಿದ್ದು, ಬದಲಿ ಮಾರ್ಗ ಇಲ್ಲಿದೆ

ಹೊರವರ್ತುಲ ರಸ್ತೆ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆ ಜಂಕ್ಷನ್ ಕಡೆಯಿಂದ ಬಂದು ಹೆಚ್ಎಸ್ಆರ್ ಲೇಔಟ್ ಮತ್ತು ಹೊಸೂರು ಮುಖ್ಯರಸ್ತೆಯ ಮೂಲಕ ರೂಪೇನ ಅಗ್ರಹಾರ ಬೊಮ್ಮನಹಳ್ಳಿ ಕಡೆ ಹೋಗುವ ವಾಹನಗಳು ಮೀರಾ ಸ್ಕೂಲ್ ಬಳಿ ಎಡಕ್ಕೆ ತಿರುಗಿ ಫೈ ಓವರ್ ಅಪ್ಪರ್ ರ್ಯಾಂಪ್ ಮೂಲಕ ಸಂಚರಿಸಿ ಮುಂದೆ ವೈ ಜಂಕ್ಷನ್​ನಲ್ಲಿ ಎಡ ಮತ್ತು ಬಲ ತಿರುವು ಪಡೆದು ಮುಖ್ಯರಸ್ತೆಗೆ ತಲುಪಬಹುದಾಗಿದೆ.

ಹೊರವರ್ತುಲ ರಸ್ತೆ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆ ಜಂಕ್ಷನ್ ಕಡೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ನಿಲ್ದಾಣಕ್ಕೆ ಬರುವ ಬಿಎಂಟಿಸಿ ಬಸ್​ಗಳು ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಸಿಲ್ಕ್ ಬೋರ್ಡ್ ಜಂಕ್ಷನ್​ನ ಫ್ಲೈ ಓವರ್ ಕೆಳಭಾಗದಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ತಲುಪಬೇಕು.

ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ವಾಹನಗಳು ಮಾತ್ರ ಎಡಭಾಗದ ಸರ್ವೀಸ್ ರಸ್ತೆ ಮೂಲಕ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್​ಗೆ ತಲುಪಬಹುದಾಗಿರುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!