HomeGadag Newsದಿಲೀಪ್‌ಕುಮಾರ ಧೋಕಾರಿಗೆ ಸನ್ಮಾನ

ದಿಲೀಪ್‌ಕುಮಾರ ಧೋಕಾರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರಮಣ ಮಾರ್ಗ (ಸ್ವಯಂ ಮಾರ್ಗ) ಅಳವಡಿಸಿಕೊಂಡು ದೀಕ್ಷೆ ಪಡೆಯಲಿರುವ ನಿಮಿತ್ತ ದಿಲೀಪ್‌ಕುಮಾರ ಜಿ.ಧೋಕಾ ಅವರನ್ನು ಗದಗ ನಗರದ ಅಬ್ಬಿಗೇರಿಯಲ್ಲಿರುವ ಶ್ರೀ ವರ್ಧಮಾನ ಸ್ಥಾನಿಕವಾಸಿ ಜೈನ್ ಸಂಘದ ಭವನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಎಂ.ಫಾರ್ಮ್ ಪದವಿ ಪಡೆದಿರುವ ದಿಲೀಪ್‌ಕುಮಾರ ಜಿ. ಧೋಕಾ ಅನೇಕ ಭಾಷೆಗಳ ಸಂಸ್ಕೃತಿಗಳಲ್ಲಿ ಮತ್ತು ಹಲವಾರು ಕಲೆಗಳಲ್ಲಿ ಆಸಕ್ತಿ ಹೊಂದಿದ್ದು, 35 ವರ್ಷಗಳಿಗಿಂತಲೂ ಹೆಚ್ಚು ಕಾಲ ಔಷಧೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಗಾಗಿ ಸ್ವ-ಇಚ್ಛೆಯಿಂದ ರಾಯಚೂರಿನಲ್ಲಿ ಜೂನ್ 11ರಂದು ಶ್ರಮಣ ಮಾರ್ಗ (ಸ್ವಯಂ ಮಾರ್ಗ) ಅಳವಡಿಸಿಕೊಂಡು ದೀಕ್ಷೆ ಪಡೆಯಲಿದ್ದಾರೆ. ಈ ನಿಮಿತ್ತ ಶ್ರೀಯುತರನ್ನು ಗದಗ ಎ.ಪಿ.ಎಂ.ಸಿ. ವಾಕಿಂಗ್ ಮಿತ್ರರ ಸಂಘದಿಂದ ಗೌರವಿಸಿ ಅವರ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಚನ್ನವೀರಪ್ಪ ಹುಣಸಿಕಟ್ಟಿ, ತಾತನಗೌಡ ಪಾಟೀಲ, ಮಧುಸೂದನ ಪುಣೇಕರ, ಸಂಜಯ ಬಾಗಮಾರ, ಸಿದ್ಧಣ್ಣ ಹಲವಾಗಲಿ, ಸಿದ್ಧಣ್ಣ ಮುನವಳ್ಳಿ, ಉಮೇಶ ನಾಲ್ವಾಡ, ಮಹಾಂತೇಶಗೌಡ ಪಾಟೀಲ, ಪ್ರಕಾಶ ಉಗಲಾಟದ, ಸುರೇಶ ರಡ್ಡೇರ, ಪಂಕಜ ಬಾಫಣಾ, ಜಯಂತಿಲಾಲ ಕವಾಡ, ಶಂಕ್ರಣ್ಣ ಶಿವನಗುತ್ತಿ, ರಾಜಣ್ಣ ಮಲ್ಲಾಡದ, ವಿಜಯಕುಮಾರ ಶಿವಪ್ಪಗೌಡ್ರ, ರಮೇಶ ಶಿಗ್ಲಿ, ಬಾಪುಗೌಡ ಸಂಕನಗೌಡ್ರ, ಅಶೋಕ ಪಾಟೀಲ, ನಾಗೇಶರಾವ್, ಅರವಿಂದ ಕಾಮತ, ಮುರಗೇಶ ಬಡ್ನಿ, ಚಂದ್ರಣ್ಣ ಸುರಕೋಡ, ಶರಣು ಗದಗ, ಮೌಲಾಲಿ ಮುಲ್ಲಾನವರ, ರೇಣುಕಾಪ್ರಸಾದ ಹಿರೇಮಠ, ವಿಶ್ವನಾಥ ಯಳಮಲಿ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!