Homehubballiಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ವಿಡಿಯೋಗ್ರಾಫರ್ಸ್ ಮತ್ತು ಪೋಟೋಗ್ರಾಫರ್ಸ್ ಅಸೋಸಿಯೇಶನ್ ಜಂಟಿ ಸಹಯೋಗದೊಂದಿಗೆ ಬಾಯ್ & ಸೆಲ್ ಇಂರ‍್ಯಾಕ್ಷನ್ ಪ್ರೈವೆಟ್ ಲಿಮಿಟೆಡ್ ಇವರ ಸಹಭಾಗಿತ್ವದಲ್ಲಿ ಹುಬ್ಬಳ್ಳಿಯಲ್ಲಿ 7ನೇ ಬಾರಿ ರಾಷ್ಟ್ರಮಟ್ಟದ ಛಾಯಾಗ್ರಾಹಕರ ಛಾಯಾವಸ್ತು ಪ್ರದರ್ಶನ ಮತ್ತು `ಡಿಜಿ ಫೋಟೋ ಎಕ್ಸ್ಪೋ’ವನ್ನು ಜನವರಿ 25 ಮತ್ತು 26ರಂದು ನಗರದ ಗೋಕುಲ ರೋಡ್‌ನಲ್ಲಿರುವ ವಾಸವಿ ಮಹಲ್ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ಈ ಪ್ರದರ್ಶನದಲ್ಲಿ ಒಟ್ಟು ದೇಶದ ವಿವಿಧ ಪ್ರದೇಶಗಳಿಂದ ಬರುವ ವಿವಿಧ ಕಂಪನಿಗಳಿಂದ 70 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ವಿವಿಧ ರೀತಿಯ ಕ್ಯಾಮರಾಗಳು, ಅತ್ಯುತ್ತಮ ಛಾಯಾಚಿತ್ರಗಳು ಪ್ರದರ್ಶಿತವಾಗಲಿದ್ದು ಛಾಯಾಚಿತ್ರಗ್ರಾಹಕರಿಗೆ ಹೊಸ ತಂತ್ರಜ್ಞಾನದ ಪರಿಚಯವನ್ನು ಮಾಡಿಕೊಡಲಾಗುತ್ತಿದೆಯಲ್ಲದೇ ಇದು ಅವರಿಗೆ ಒಂದು ವಿಶೇಷ ಸಂದರ್ಭವಾಗಿದೆ ಎಂದು ತಿಳಿಸಿದರು.

ಈ ಎರಡು ದಿನಗಳ ಅವಧಿಯಲ್ಲಿ ಉತ್ತರಕರ್ನಾಟಕದ ಛಾಯಾಗ್ರಾಹಕರಿಗಾಗಿ ಉಚಿತ ಕಣ್ಣಿನ ತಪಾಸಣೆಯನ್ನು ಐ ಬಡ್ಡಿ ಕಣ್ಣಿನ ಆಸ್ಪತ್ರೆ ಹಾಗೂ ಆರೋಗ್ಯ ಶಿಬಿರವನ್ನು ಸುಶ್ರುತಾ ಆಯುರ್ವೆದಿಕ್ ಆಸ್ಪತ್ರೆ, ಉನ್ನತಿ ಡೈಗ್ನೋಸ್ಟಿಕ್ ಸ್ಕ್ಯಾನ್ ಸೆಂಟರ್ ಇವರಿಂದ ಹಮ್ಮಿಕೋಳ್ಳಲಾಗಿದೆ.

ಫೆಬ್ರವರಿ 25ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಸರಕಾರದ ಕಾರ್ಮಿಕ ಸಚೀವರಾದ ಸಂತೋಷ ಲಾಡ್ ಹಾಗೂ ಹುಬ್ಬಳ್ಳಿ ವಿಧಾನಸಭಾ ಸದಸ್ಯರಾದ ಅರವಿಂದ ಬೆಲ್ಲದ ಅವರು ಛಾಯಾ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆೆ. ಇದರ ಅದ್ಯಕ್ಷತೆಯನ್ನು ಹುಬ್ಬಳ್ಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಬಾಕಳೆ ವಹಿಸಲಿದ್ದಾರೆ.

ನಂತರ ನಡೆಯುವ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಹಿರಿಯ ಛಾಯಾಗ್ರಾಹಕರಾದ ನಾಗೇಂದ್ರಸಾ ಪೂಜಾರಿ, ಕೃಷ್ಣಾಸಾ ಪಟ್ಟಣ, ರವೀಂದ್ರ ಕಾಟೀಗರ, ಭರತ ದಲಬಂಜನ, ಕಿಶೋರ ಮಗಜಿ, ಪ್ರಭಾಕರ ಕಲಬುರ್ಗಿ, ಯಲ್ಲಪ್ಪ ಶಿಂಗ್ರಿ, ನಿಂಗಪ್ಪ ಉಗರಗೋಳ, ಅಶೋಕ ಬಡಿಗೇರ, ಉಮೇಶ ನಿಂಬಾಳಕರ, ಸಂತೋಷ ಖಿರೋಜಿ, ರವಿ ಕೋರ್ಪಡೆ, ರಾಜೇಶ ನಂದಿ, ಮಹಮ್ಮದಅಸ್ಲಂ ಖೋಜೆ, ಬಸವರಾಜ ಶೀಲವಂತ ಇವರಿಗೆ `ಉತ್ತರ ಕರ್ನಾಟಕ ಛಾಯಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಈ ಪ್ರದರ್ಶನ ಮತ್ತು ಕಾರ್ಯಾಗಾರದ ಪ್ರಯೋಜನವನ್ನು ಉತ್ತರಕರ್ನಾಟಕದ ಎಲ್ಲ ಛಾಯಾಚಿತ್ರಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹುಬ್ಬಳ್ಳಿ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಕಿರಣ ಬಾಕಳೆ ಮತ್ತು ಕರ್ನಾಟಕ ವಿಡಿಯೋಗ್ರಾಫರ್ಸ್ ಹಾಗೂ ಫೋಟೋಗ್ರಾಫರ್ಸ್ ಸಂಘದ ಅಧ್ಯಕ್ಷ ಬೆಂಜಮಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಿನೇಶ ದಾಬಡೆ, ರವೀಂದ್ರ ಕಾಟೀಗರ, ಅನಿಲ ತುರುಮರಿ, ಕೃಷ್ಣಪ್ಪ ಹುಲಿಬೇಲೆ ಹಾಗೂ ಸಂಘದ ಸದಸ್ಯರು ಹಾಜರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!