ತುಮಕೂರು: ಮಹಿಳೆಯ ಹೊಟ್ಟೆ ಭಾಗಕ್ಕೆ ಚುಚ್ಚಿ ಕೊಲ್ಲಲು ಯತ್ನಸಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಡ್ಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಭವ್ಯ ಎಂಬಾಕೆಯ ಮೇಲೆ ಕೊಲೆ ಯತ್ನ ಮಾಡಲಾಗಿದ್ದು, ರಾಮಚಾರಿ(30) ವ್ಯಕ್ತಿ ಆರೋಪಿಯಾಗಿದ್ದಾನೆ. ಅಕ್ಕಿರಾಂಪುರ ನಿವಾಸಿಯಾಗಿರುವ ರಾಮಚಾರಿ ಕಂಬಿ ಕೆಲಸ ಮಾಡಿಕೊಂಡಿದ್ದನು.
ಇನ್ನೂ ಗಾಯಾಳು ಭವ್ಯ ದೊಡ್ಡಬಳ್ಳಾಪುರದಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅನೈತಿಕ ಸಂಬಂಧ ವಿಚಾರವಾಗಿ ಕೊಲೆ ಯತ್ನ ಮಾಡಿರುವ ಶಂಕೆಯಾಗಿದೆ. ಗಾಯಗೊಂಡಿದ್ದ ಭವ್ಯಾ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿ ರಾಮಚಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



