HomeEntertainment'ಯುಐ'ನಲ್ಲಿ 2040ರ ಕಥೆ ಹೇಳಿದ ಉಪೇಂದ್ರ! ಬಹುನಿರೀಕ್ಷಿತ ‘UI’ ಟ್ರೈಲರ್‌ ರಿಲೀಸ್‌

‘ಯುಐ’ನಲ್ಲಿ 2040ರ ಕಥೆ ಹೇಳಿದ ಉಪೇಂದ್ರ! ಬಹುನಿರೀಕ್ಷಿತ ‘UI’ ಟ್ರೈಲರ್‌ ರಿಲೀಸ್‌

For Dai;y Updates Join Our whatsapp Group

Spread the love

ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ‘ಯುಐ’ ಚಿತ್ರ ಯಾವಾಗ ಬಿಡುಗಡೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇದೇ ಡಿಸೆಂಬರ್‌ 20 ರಂದು  ದೇಶಾದ್ಯಂತ ತೆರೆ ಕಾಣಲಿದ್ದು, ಇದೀಗ ‘ಯುಐ’ ವಾರ್ನರ್‌ (ಟ್ರೈಲರ್‌) ರಿಲೀಸ್‌ ಆಗಿದೆ. ಉಪ್ಪಿ ಟ್ರೈಲರ್‌ನಲ್ಲಿ ಡಿಫರೆಂಟ್‌ ಗೆಟಪ್‌ ಮತ್ತು ಕಾನ್ಸೆಪ್ಟ್‌ನಲ್ಲಿ ಮಿಂಚಿದ್ದಾರೆ.

AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್‌ ಆಗಿ ಮೂಡಿ ಬಂದಿದೆ.  ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್‌) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್‌ ಆಗಿ ಉಪೇಂದ್ರ ಡೈಲಾಗ್‌ ಹೊಡೆದಿದ್ದಾರೆ.

ಗನ್‌ ಹಿಡಿದು ಜನಗಳ ಕಡೆ ಶೂಟ್‌ ಮಾಡುತ್ತ ಖಡಕ್‌ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ. ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ‘ಉಪ್ಪಿ 2’ ಬಳಿಕ ಉಪೇಂದ್ರ ಆಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ಇದಾಗಿದ್ದು,

ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಉಪೇಂದ್ರ ನಿರ್ದೇಶನದ ಸಿನಿಮಾಗಳು ಹಿಟ್ ಆಗಿವೆ. ತಮ್ಮ ನಿರ್ದೇಶನದಲ್ಲಿ ಸಿನಿಮಾದಲ್ಲಿ ಉಪ್ಪಿ ತಲೆಗೆ ಹುಳ ಬಿಡ್ತಾರೆ ಎಂಬ ಮಾತಿದೆ. ಒಟ್ಟಿನಲ್ಲಿ ಬಹುಕಾಲದ ನಂತರ ಇವರ ಸಿನಿಮಾ ಬರುತ್ತಿರೋದು ಅವರ ಅಭಿಮಾನಿಗಳಿಗೆ ದೊಡ್ಡ ಕುತೂಹಲ ಮೂಡಿಸಿದೆ.

 

 

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!