ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ನಟ ಉಪೇಂದ್ರ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಉಪೇಂದ್ರ ಪತ್ನಿ ಪ್ರಿಯಾಂಕಾ ಹಾಗೂ ಮಕ್ಕಳು ಸೇರಿ ಕುಟುಂಬ ಸಮೇತರಾಗಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಟ ರಜತ ಗಜವಾಹನೋತ್ಸವದಲ್ಲಿ ಭಾಗಿಯಾಗಿದ್ದಾರೆ. ರಥವನ್ನ ಎಳೆದು ಉಪೇಂದ್ರ ಕುಟುಂಬ ಹರಕೆ ತೀರಿಸಿದೆ. ಈ ವೇಳೆ, ಹಿರಿಯ ನಟಿ ತಾರಾ ವೇಣು ದಂಪತಿ ಕುಟುಂಬ ಸಮೇತರಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿದರು.
ಮಂಚಾಲಮ್ಮ ದೇವಿ ಹಾಗೂ ರಾಯರ ವೃಂದಾವನ ದರ್ಶನ ಪಡೆದರು. ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಉಪೇಂದ್ರ ಹಾಗೂ ತಾರಾ ಕುಟುಂಬಗಳ ಸದಸ್ಯರಿಗೆ ಆಶೀರ್ವಚನ ನೀಡಿ ಸನ್ಮಾನಿಸಿದರು. ಫಲಮಂತ್ರಾಕ್ಷತೆ, ಶೇಷವಸ್ತ್ರ ನೀಡಿ ಆಶೀರ್ವದಿಸಿದರು.



