HomeBengaluru Newsವಾಲ್ಮೀಕಿ, ಮುಡಾ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೊಂದು ಹಗರಣ ಬೆಳಕಿಗೆ: ಸಹಕಾರ ಸಚಿವರ ಸಭೆಯಲ್ಲಿ ವಂಚನೆ!?

ವಾಲ್ಮೀಕಿ, ಮುಡಾ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೊಂದು ಹಗರಣ ಬೆಳಕಿಗೆ: ಸಹಕಾರ ಸಚಿವರ ಸಭೆಯಲ್ಲಿ ವಂಚನೆ!?

For Dai;y Updates Join Our whatsapp Group

Spread the love

ಬೆಂಗಳೂರು:- ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ.

ಎಸ್, ಸೊಸೈಟಿಯಲ್ಲಿ ಬರೋಬ್ಬರಿ 19.34 ಕೋಟಿ ರೂ, ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಸೊಸೈಟಿಯ ಪ್ರಭಾರಿ ಸಿಇಒ ಸೇರಿ 6 ಒಟ್ಟು ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಸಹಕಾರ ಸಚಿವ ಕೆಎನ್​ ರಾಜಣ್ಣ ಸಭೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. 2017ರಿಂದ 2023ರ ವರೆಗೆ ಸೊಸೈಟಿಯಲ್ಲಿ FD ರೂಪದಲ್ಲಿದ್ದ 19.34 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ.

ಸೊಸೈಟಿಯ ಪ್ರಭಾರ ಸಿಇಒ ಆಶಾಲತಾ ಪತಿ ಸೋಮಶೇಖರ್ ಸೇರಿ ಖಾಸಗಿಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ 101 FDಡಿ ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಿದ್ದಾರೆ. ಈ ಮೂಲಕ ಅಕ್ರಮ ಮುಚ್ಚಿಡಲು ನಕಲಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಹಕಾರ ಸಚಿವ ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ವಂಚನೆ ಬೆಳಕಿಗೆ ಬಂದಿದ್ದು, ಆಶಾಲತಾ ಅವರು ಸೊಸೈಟಿ ಹಣವನ್ನು BDCC, ಅಪೆಕ್ಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಪರಿಶೀಲನೆ ವೇಳೆ ಹಣ ವರ್ಗಾವಣೆ, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿ ಬೆಳಕಿಗೆ ಬಂದಿದೆ.

ಸದ್ಯ ಸೊಸೈಟಿಯ ಅಧ್ಯಕ್ಷ ರಾಜು ಎಂಬುವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!