HomeSports Newsಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿಯೂ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ ವರುಣ್ ಚಕ್ರವರ್ತಿ!

ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿಯೂ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ ವರುಣ್ ಚಕ್ರವರ್ತಿ!

For Dai;y Updates Join Our whatsapp Group

Spread the love

ಟಿ20 ಸರಣಿಗಳಲ್ಲಿ ಬ್ಯಾಕ್ ಟು ಬ್ಯಾಕ್ 5 ವಿಕೆಟ್ ಕಬಳಿಸಿ ವಿಶೇಷ ದಾಖಲೆಯೊಂದನ್ನು ಟೀಮ್ ಇಂಡಿಯಾ ಬೌಲರ್ ವರುಣ್ ಚಕ್ರವರ್ತಿ ನಿರ್ಮಿಸಿದ್ದಾರೆ. ಆದರೆ ಇದೇ ಹೊತ್ತಲ್ಲಿ ಇನ್ನೊಂದು ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದಾರೆ.

2024 ರಲ್ಲಿ ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾದ ವಿರುದ್ಧದ ಟಿ20 ಪಂದ್ಯದಲ್ಲಿ ವರುಣ್ 17 ರನ್​ಗೆ 5 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದೀಗ ರಾಜ್​ಕೋಟ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ವರುಣ್ 24 ರನ್​ ನೀಡಿ 5 ವಿಕೆಟ್ ಪಡೆದಿದ್ದಾರೆ. ಈ ಮ್ಯಾಚ್​ನಲ್ಲೂ ಭಾರತ ತಂಡ 26 ರನ್​ಗಳಿಂದ ಸೋಲನುಭವಿಸಿದೆ.

ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸೋತ ಪಂದ್ಯಗಳಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ ಅನಗತ್ಯ ದಾಖಲೆಯೊಂದು ವರುಣ್ ಚಕ್ರವರ್ತಿ ಪಾಲಾಗಿದೆ. ಇಲ್ಲಿ ವರುಣ್ ಅವರ ತಪ್ಪು ಏನೂ ಇಲ್ಲದಿದ್ದರೂ, ಟೀಮ್ ಇಂಡಿಯಾ ಸ್ಪಿನ್ನರ್​​ನ ಹೆಸರು ಅನಗತ್ಯ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದು ಮಾತ್ರ ವಿಪರ್ಯಾಸ ಎನ್ನಲಾಗಿದೆ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಸರಣಿಯು 2-1 ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ 4ನೇ ಮ್ಯಾಚ್ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!