HomeEntertainmentಡಾ.ರಾಜ್‌ ಕುಮಾರ್‌ ಜೊತೆ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ನಿಧನ

ಡಾ.ರಾಜ್‌ ಕುಮಾರ್‌ ಜೊತೆ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ನಿಧನ

For Dai;y Updates Join Our whatsapp Group

Spread the love

ಡಾ.ರಾಜ್‌ ಕುಮಾರ್‌ ಜೊತೆ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ (87) ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚೆನ್ನೈನಲ್ಲಿ ವಾಸವಾಗಿದ್ದ ಪುಷ್ಪಲತಾ ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಪುಷ್ಪಲತಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಹಿರಿಯ ನಟಿ ಪುಷ್ಪಲತಾ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1958 ರಲ್ಲಿ ಸೆಂಗೊಟ್ಟೈ ಸಿಂಗಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು, 1961 ರಲ್ಲಿ ಬಿಡುಗಡೆಯಾದ ಕೊಂಗುನಾಟ್ಟು ತಂಗಂ ಚಿತ್ರದ ಮೂಲಕ ನಾಯಕಿಯಾದ್ರು.

ಪುಷ್ಪಲತಾ ಅವರು ಪೆದ್ದಕೊಡುಕು,  ಯುಗಪುರುಷುಡು, ಶ್ರೀ ರಾಮ ಪಟ್ಟಾಭಿಷೇಕಂ, ರಾಜಪುತ್ರ ರಹಸ್ಯಂ, ಮತ್ತು ಕೊಂಡವೀಟಿ ಸಿಂಗಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಎವಿಎಂ ನಿರ್ಮಿಸಿದ ರಾಮು ಚಿತ್ರದಲ್ಲಿ ಎನ್‌ಟಿಆರ್ ಜೊತೆ ಕೂಡ ಪುಷ್ಪಲತಾ ನಟಿಸಿದ್ರು.

ರಾಜ್​ಕುಮಾರ್ ಅವರ ಎರಡು ಕನಸು ಸಿನಿಮಾದಲ್ಲಿ ಪೋಷಕ ನಟಿಯಾಗಿ ಪುಷ್ಪಲತಾ ನಟಿಸಿದ್ರ. ಬಳಿಕ ಹೆಣ್ಣಿನ ಸೇಡು, ಒಲವೇ ಬದುಕು, ಜೀವನ ಜ್ಯೋತಿ ಚಿತ್ರಗಳನ್ನು ಕಾಣಿಸಿಕೊಂಡಿದ್ರು.

ಪುಷ್ಪಲತಾ 1964 ರಲ್ಲಿ ಲಕ್ಸ್ ಸೋಪ್ ಮಾಡೆಲ್ ಕೂಡ ಆಗಿದ್ರು. ಎರಡು ಚಿತ್ರಗಳ ನಿರ್ಮಾಪಕಿ ಮತ್ತು  ಭರತನಾಟ್ಯಂ ನರ್ತಕಿಯಾಗಿದ್ದರು. ಶ್ರೀ ಭಾರತಿ ನಿರ್ದೇಶಿಸಿದ ಮತ್ತು ಮುರಳಿ, ರಮ್ಯಾ ಮತ್ತು ಜೈಶಂಕರ್ ನಟಿಸಿದ ಪೂ ವಾಸಂ (1999) ಚಿತ್ರದಲ್ಲಿ ಪುಪ್ಪಲತಾ ಕೊನೆಯದಾಗಿ ನಟಿಸಿದ್ದರು. ಪುಷ್ಪಲತಾ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!