HomeGadag Newsಸಿಐಟಿಯುನಿಂದ ಮತ ಪ್ರದರ್ಶನ

ಸಿಐಟಿಯುನಿಂದ ಮತ ಪ್ರದರ್ಶನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರಕಾರಗಳ ಮೇಲೆ ಜನವಿರೋಧಿ ನವ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಲು ಒತ್ತಾಯ ಹೇರುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಯ ನೀತಿಗಳನ್ನು ಉಲ್ಲಂಘಿಸಿ ರಾಜ್ಯ ಸರಕಾರÀಕ್ಕೆ ನೀಡುತ್ತಿರುವ ಸರ್ವಾಧಿಕಾರಿ ಒತ್ತಡ ನೀಡುತ್ತಿರುವ ಕೇಂದ್ರದ ಮೋದಿ ನೇತೃತ್ವದ ಸರಕಾರದ ಕ್ರಮಗಳು ಖಂಡನೀಯವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಕೇಂದ್ರ ಸರಕಾರದ ಒಕ್ಕೂಟ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಕೇರಳದ ಎಡರಂಗ ಸರಕಾರದ ಜನಪರ ಆಡಳಿತ ಬೆಂಬಲಿಸಿ ಬುಧವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಸಿಐಟಿಯು ಗದಗ ಜಿಲ್ಲಾ ಸಮಿತಿ ನಡೆಸಿದ ಮತಪ್ರರ್ಶನದಲ್ಲಿ ಅವರು ಮಾತನಾಡಿದರು.

ಕೇರಳದ ಪಿನರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ತನ್ನ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಆರೋಗ್ಯ, ಶಿಕ್ಷಣ ಪಂಚಾಯತ ರಾಜ್ಯ ವಸತಿ ಸಾಮಾಜಿಕ ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದರೊಂದಿಗೆ ದೇಶದಲ್ಲಿ ನಂ.೧ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿÀದೆಯಲ್ಲದೆ ಭ್ರಷ್ಟಾಚಾರ ರಹಿತ ಸರಕಾರವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ಮುಖಂಡರಾದ ಶಾರದಾ ರೋಣದ, ಬಸವರಾಜ ಮಂತೂರ, ಮಾರುತಿ ಚಿಟಗಿ, ಯಶೋಧಾ ಬೆಟಗೇರಿ, ಸುಶೀಲಾ ಚಲವಾದಿ, ರುದ್ರಪ್ಪ ಕಂದಗಲ್ಲ, ಬಸವರಾಜ ಮೇವುಂಡಿ, ದೇವಪ್ಪ ಕಲ್ಮನಿ, ಗೀತಾ ಪಾಟೀಲ, ಗಂಗವ್ವ ದೇವರಡ್ಡಿ, ಲಕ್ಷ್ಮೀ ಗಾಯಕವಾಡ, ಮಂಗಲಾ ಪಟ್ಟಣಶೆಟ್ಟಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!