ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 6ರಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸಿ.ಸಿ. ರಸ್ತೆ ಭೂಮಿಪೂಜೆಯನ್ನು ನಗರಸಭೆ ಸದಸ್ಯರಾದ ಲಕ್ಷ್ಮವ್ವ ಮಾರುತೆಪ್ಪ ಭಜಂತ್ರಿ, ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಶರೀಫ ಬಿಳೆಯಲಿ, ಬಾಬು ನರಸಾಪೂರ, ಹುಸೇನ ನರಸಾಪೂರ, ಬಸವರಾಜ ಭಜಂತ್ರಿ, ಶಿವಾನಂದ ಭಜಂತ್ರಿ, ಲಕ್ಷ್ಮಣ ಮಾರುತೆಪ್ಪ ಭಜಂತ್ರಿ, ಹನಮಂತ ಗೋಕಾಕ, ಮುತ್ತಪ್ಪ ಭಜಂತ್ರಿ, ಕೆಂಚಪ್ಪ ಮ್ಯಾಗೇರಿ, ಬಾಲರಾಜ ಅರಬರ, ಕಾಶಿನಾಥ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಲಕ್ಷ್ಮಣ ವಡ್ಡರಕಲ್ಲ, ಮುತ್ತು ಬಿಳೆಯಲಿ, ಸಂತೋಷ ಬಣಕಾರ, ಜಂಗ್ಲೀಶ ಮಕನಾದಾರ, ಸೈಯದ್ ಮಕನಾದಾರ, ಖಾದರ ನರಗುಂದ ಮುಂತಾದವರು ಉಪಸ್ಥಿತರಿದ್ದರು.



