HomeKarnataka Newsಸಿದ್ದಗಂಗಾ ಮಠಕ್ಕೆ ನೀರಿನ ಬಿಲ್ ನೋಟಿಸ್ ವಾಪಸ್: ಸಚಿವ ಎಂ.ಬಿ.ಪಾಟೀಲ್

ಸಿದ್ದಗಂಗಾ ಮಠಕ್ಕೆ ನೀರಿನ ಬಿಲ್ ನೋಟಿಸ್ ವಾಪಸ್: ಸಚಿವ ಎಂ.ಬಿ.ಪಾಟೀಲ್

For Dai;y Updates Join Our whatsapp Group

Spread the love

ತುಮಕೂರು: ನೀರಾವರಿ ವಿದ್ಯುತ್​ ಬಿಲ್ ಪಾವತಿಸುವಂತೆ ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭವೃದ್ಧಿ ಮಂಡಳಿ ಪತ್ರ ಬರೆದಿದ್ದು, ಅದನ್ನು ಕಂಡ ಸಿದ್ದಗಂಗಾ ಮಠದ ಆಡಳಿತ ಮಂಡಳಿ ಶಾಕ್​ ನೀಡಿತ್ತು. ಇದೀಗ ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೀಡಿದ ನೋಟೀಸ್ ​ಅನ್ನು ವಾಪಸ್​ ಪಡೆಯಲಾಗುವುದು ಎಂದು  ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆ ನಮಗೆಲ್ಲರಿಗೂ ಗೊತ್ತು. ಈಗಾಗಲೇ ನಾನು ಕೆಐಎಡಿಬಿ ಸಿಇಒಗೆ ಹೇಳಿದ್ದೇನೆ. ಸಿದ್ದಗಂಗಾ ಮಠದ ಸ್ವಾಮೀಜಿ ಜೊತೆಗೂ ಮಾತನಾಡುತ್ತೇನೆ. ಕೆಐಎಡಿಬಿ ವ್ಯಾಪ್ತಿಗೆ ಬರುವ ಕೆರೆ ನೀರನ್ನು ಬಳಸಿಕೊಂಡರೂ ಪರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಿದ್ದಗಂಗಾ ಮಠಕ್ಕೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುತ್ತೇವೆ. ಸಿದ್ದಗಂಗಾ ಮಠದ ಮೇಲೆ ಅಪಾರವಾದ ಗೌರವ ಇದೆ. ನೀರು ಬಳಕೆಯಾಗದೆ ನೋಟಿಸ್ ನೀಡಿದ್ದರೆ ಅಧಿಕಾರಿಯನ್ನ ಅಮಾನತು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸಿದ್ದಗಂಗಾ ಮಠಕ್ಕೆ ಉಚಿತವಾಗಿ ನೀರನ್ನು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!