ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ನಮ್ಮ ಪಕ್ಷದ ಹೋರಾಟಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ನಮ್ಮ ಪಕ್ಷದ ಹೋರಾಟಕ್ಕೆ ನಾವು ಬದ್ಧ. ಯಡಿಯೂರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದನ್ನು ಅವರು ನೆನಪಿಸಿಕೊಳ್ಳಬೇಕು.
ಸಿದ್ದರಾಮಯ್ಯರನ್ನು ಮುಗಿಸಲು ಅವರ ಪಕ್ಷವೇ ಮುಂದಾಗಿದೆ, ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಈ ಹೋರಾಟದಲ್ಲಿ ನಮ್ಮ ಪಕ್ಷದ ಅಣತಿಯಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಿಬಿಐಗೆ ನೀಡಿದ್ದ ಮುಕ್ತ ಅಧಿಕಾರವನ್ನು ಸಂಪುಟ ವಾಪಸ್ ಪಡೆದಿದೆ. ಆ ಮೂಲಕ ಸಿಬಿಐಗೆ ಇವರು ನಿರ್ಬಂಧಿಸಿರಬಹುದು. ಆದರೆ ನ್ಯಾಯಾಂಗ ಇದೆ, ಅದನ್ನು ನಿರ್ಬಂಧಿಸಲಾಗಲ್ಲ, ಸಿಎಂ, ಡಿಸಿಎಂ ವಿರುದ್ಧ ಆರೋಪವಿದ್ದಾಗ ಈ ರೀತಿ ಮಾಡಿದ್ದು ತಪ್ಪು. ಯಾರು ಬೇಕಾದರೂ ಕೋರ್ಟ್ನಲ್ಲಿ ಪ್ರಶ್ನೆ ಮಾಡಬಹುದಾಗಿದೆ ಎಂದರು.



