ಶಿವಮೊಗ್ಗ: ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ನಾವು ಜೀವ ಉಳಿಸುವ ಕೆಲಸ ಮಾಡಿದ್ದೇವೆ.
ಇದನ್ನು ತನಿಖೆ ಮಾಡಲು ದುರುದ್ದೇಶದಿಂದ ಎಸ್‍ಐಟಿ ರಚನೆ ಮಾಡಲಾಗಿದೆ. ಜನರ ಗಮನ ಬೇರೆಡೆ ತಿರುಗಿಸಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ. ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ವಕ್ಫ್ ಬೋರ್ಡ್ ವಿರುದ್ಧ ಕಮಿಟಿ ರಚನೆ ವಿಚಾರವಾಗಿ, ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಕಮಿಟಿ ರಚನೆ ಮಾಡಿದ್ದೇವೆ. ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ಬಳಿಕ ವರದಿ ಕೊಡಲಿದೆ. ವರದಿಯನ್ನು ಪಡೆದ ನಂತರ ಮುಂದಿನ ಹೋರಾಟ ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.



