HomeGadag Newsವಚನಗಳಿಂದ ಸಮಸ್ಯೆಗಳಿಗೆ ಸಮಾಧಾನ : ಆಯ್.ಕೆ. ಕಮ್ಮಾರ

ವಚನಗಳಿಂದ ಸಮಸ್ಯೆಗಳಿಗೆ ಸಮಾಧಾನ : ಆಯ್.ಕೆ. ಕಮ್ಮಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : 12ನೇ ಶತಮಾನದಲ್ಲಿ ನಡೆದ ಬಸವಾದಿ ಶರಣರ ಕ್ರಾಂತಿಕಾರಿ ನಡೆ ಮತ್ತು ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರು ತಿಳಿಸಿದ ಕಳಬೇಡ ಕೊಲಬೇಡ ಹುಸಿಯ ನಡಿಯಲು ಬೇಡ ಎಂಬ ವಚನದಲ್ಲಿನ ಸಪ್ತ ಸೂತ್ರಗಳನ್ನು ಪಾಲಿಸಿದರೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಲಾರವು. ಈಗಿರುವ ನಾನಾವಿಧದ ಸಮಸ್ಯೆಗಳು ಇಲ್ಲದಾಗುವವು. ಈ ನಿಟ್ಟಿನಲ್ಲಿ ವಚನಗಳಿಂದ ಅನೇಕ ಸಮಸ್ಯೆಗಳಿಗೆ ಸಮಾಧಾನ ದೊರೆಯವದೆಂದು ಪತ್ರಕರ್ತರಾದ ಆಯ್.ಕೆ. ಕಮ್ಮಾರ ಅಭಿಪ್ರಾಯಪಟ್ಟರು.

ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸಪ್ರಭೆ ಕ್ಯಾಂಪಸ್)ದಲ್ಲಿ ನಡೆದ 4ನೇ ಶ್ರಾವಣ ಸೋಮವಾರದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ವಿ.ಎಚ್. ಪಾಟೀಲ, ದಾಸೋಹ ಸೇವಾಕರ್ತರಾದ ಶಕುಂತಲಾ ಬ್ಯಾಳಿ, ಶೋಭಾ ಭಾಂಡಗೆ ಉಪಸ್ಥಿತರಿದ್ದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಎಂ.ವಿ. ಐಹೊಳ್ಳಿ, ಜಿ.ಪಿ. ಕಟ್ಟಿಮನಿ, ಎಸ್.ಎನ್. ಹಕಾರೆ, ಡಾ. ಎ.ಡಿ. ಹುಳಪಲ್ಲೇ, ವಿ.ಎಂ. ಮುಂದಿನಮನಿ, ಸುನಂದಾ ಅರಹುಣಸಿ, ಕುಸುಮಾ ಕುರಗೋಡ, ಜಯಶ್ರೀ ವಸ್ತ್ರದ, ವಿಜಯಲಕ್ಷ್ಮಿ ಉಪವಾಸಿ, ಅನ್ನಪೂರ್ಣ ಅಸೂಟಿ, ಶಾಂತಾ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಂತಾ ಕುಂದಗೋಳ ಸಾಮೂಹಿಕ ಬಸವ ಪ್ರಾರ್ಥನೆ ಹೇಳಿದರು. ಶಿವನಗೌಡ ಗೌಡರ ಸರ್ವರಿಗೂ ಸ್ವಾಗತ ಕೋರಿ, ಪ್ರಾಸ್ತಾವಿಕ ನುಡಿ ತಿಳಿಸಿದರು. ವಿಜಯಾ ಚನ್ನಶೆಟ್ಟಿ ವಚನ ಪಠಣ ಮಾಡಿದರು. ಯೋಗ ಪಾಠಶಾಲೆಯ ಕಾರ್ಯಕರ್ತರಾದ ಅಂದಾನೆಪ್ಪ ವಿಭೂತಿ ವಂದಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ-ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷರಾದ ಶಿವಲೀಲಾ ಅಕ್ಕಿ ಮಾತನಾಡಿ, ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಜನತೆಗೆ ವಚನಗಳ ಮಹತ್ವದ ಅರಿವಾಗುವುದು ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!