IPL 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ತಲುಪಿದ್ದು, ಈಗಾಗಲೇ ಎಲ್ಲಾ ತಂಡಗಳು ಪ್ಲೇ ಆಫ್ ಲೆಕ್ಕಾಚಾರದಲ್ಲಿದೆ.
ಈ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎರಡು ತಂಡಗಳು ಫೈನಲ್ ನಲ್ಲಿ ಕಣಕ್ಕಿಳಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಎಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಫೈನಲ್ ನಡೆಯಬಹುದು ಎಂದು ಭಜ್ಜಿ ಊಹಿಸಿದ್ದಾರೆ. ಶನಿವಾರ ಚೆನ್ನೈ ಮತ್ತು ಬೆಂಗಳೂರು ಮುಖಾಮುಖಿ ಆಗಿದ್ದವು. ಈ ಪಂದ್ಯದ ವೀಕ್ಷಕ ವಿವರಣೆ ವೇಳೆ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ಆರ್‌ಸಿಬಿ 16 ಅಂಕಗಳನ್ನು ಗಳಿಸುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. 16 ಅಂಕಗಳನ್ನು ಗಳಿಸಿದ ಮೇಲೂ ಪ್ಲೇಆಫ್ ತಲುಪಲು ವಿಫಲವಾದ ತಂಡವನ್ನು ನಾನು ನೋಡಿಲ್ಲ. ಹೀಗಾಗಿ ಬೆಂಗಳೂರು ಪ್ಲೇ-ಆಫ್ ತಲುಪುವುದು ಖಚಿತ. ಅಲ್ಲದೇ ಈ ಬಾರಿ ಆರ್‌ಸಿಬಿ, ಕೊಹ್ಲಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಒಬ್ಬ ಹೊಸ ಆಟಗಾರ ತಂಡವನ್ನು ಗೆಲ್ಲಿಸುತ್ತಿದ್ದಾನೆ. ಪಂದ್ಯದ ನಾಯಕನಾಗುತ್ತಿದ್ದಾನೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ಕೆಟ್ಟ ಆರಂಭ ಪಡೆದಿತ್ತು. ಈಗ ಅದು ಗೆಲುವಿನ ಹಾದಿಯಲ್ಲಿದೆ. ಮುಂಬೈ ತಂಡ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸುವ ಸನಿಹದಲ್ಲಿದೆ. ಮುಂಬೈ ಇದೇ ಶೈಲಿಯಲ್ಲಿ ಆಟ ಮುಂದುವರಿಸಿದರೆ ಅಗ್ರ -2ರಲ್ಲಿ ಲೀಗ್ ಮುಗಿಸಲಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



