HomeGadag Newsರೋಗಮುಕ್ತ ಜೀವನಕ್ಕೆ ಯೋಗ ಸಹಕಾರಿ

ರೋಗಮುಕ್ತ ಜೀವನಕ್ಕೆ ಯೋಗ ಸಹಕಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯೋಗದ ಚಟುವಟಿಕೆಗಳು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಉತ್ತಮಗೊಳಿಸುತ್ತವೆ. ಆರೋಗ್ಯಯುಕ್ತ ಜೀವನ ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿದ್ದು, ಇದನ್ನು ಯೋಗ ಈಡೇರಿಸುತ್ತದೆ. ಸ್ನಾಯುಗಳನ್ನು ಬಲಪಡಿಸಿ, ಕೀಲುಗಳ ನಮ್ಯತೆಯನ್ನು ಸುಧಾರಿಸುತ್ತದೆ. ಹೀಗಾಗಿ, ಶಾರೀರಿಕ ಶಕ್ತಿ ಬಲಗೊಂಡು ರೋಗಮುಕ್ತ ಜೀವನ ನಡೆಸಲು ಯೋಗ ಸಹಕಾರಿಯಾಗಿದೆ ಎಂದು ಯೋಗಾಚಾರ್ಯ ಕೆ.ಎಸ್. ಪಲ್ಲೇದ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ವಾಯ್.ಬಿ.ಎಂ.ಎಸ್ ಯೋಗ ಪಾಠಶಾಲೆ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜರುಗಿದ ಡಾ. ಎಸ್.ಕೆ. ಪಲ್ಲೇದ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಯೋಗ ಜಾಗೃತ ಉಸಿರಾಟ ಮತ್ತು ಚಲನೆಗೆ ಒತ್ತು ನೀಡುವದರಿಂದ ಅರಿವು ಉಂಟಾಗುತ್ತದೆ. ಮಾನಸಿಕ ಶಾಂತಿ ನೆಲೆಗೊಳ್ಳುತ್ತದೆ. ಆಧುನಿಕತೆಯ ಈ ಸಂದರ್ಭದಲ್ಲಿ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡವನ್ನು ಅನುಭವಿಸುವ ಸ್ಥಿತಿಯಲ್ಲಿರುವದರಿಂದ ಇದಕ್ಕೆ ಯೋಗವೇ ಪರಮ ಔಷಧಿಯಾಗಿದೆ ಎಂದು ತಿಳಿಸಿದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಶಾಂತಾದೇವಿ ತುಪ್ಪದ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರು ಎದುರಿಸುವ ದೈಹಿಕ ಸಮಸ್ಯೆಗಳನ್ನು ಯೋಗಾಸನಗಳ ಮೂಲಕ ಪರಿಹರಿಸಿಕೊಂಡು ಮಾನಸಿಕ ಸದೃಢತೆಯನ್ನು ಹೊಂದಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಎಸ್.ಕೆ. ಪಲ್ಲೇದ ಸಂಸ್ಮರಣೆಯನ್ನು ಕಿಶೋರಬಾಬು ನಾಗರಕಟ್ಟಿ ಮಾಡಿದರು. ಯೋಗದ ಮಹತ್ವ ಕುರಿತು ಬಿ.ಎಲ್. ಪತ್ತಾರ ಕವನ ವಾಚಿಸಿದರು. ಯೋಗ ಶಿಬಿರದ ಶಿಕ್ಷಕಿಯರಾದ ಸುನಂದಾ ಜಾನೋಪಂತರ ಹಾಗೂ ಜಯಶ್ರೀ ಡಾವಣಗೇರಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಕೆ.ಎಚ್. ಬೇಲೂರ, ವಿಜಯಲಕ್ಷ್ಮೀ ಆನೆಹೊಸೂರ, ರತ್ನಕ್ಕ ಪಾಟೀಲ, ಜಯಶ್ರೀ ಉಗಲಾಟದ ಉಪಸ್ಥಿತರಿದ್ದರು. ಶಿವಲೀಲಾ ಅಕ್ಕಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ನಿರೂಪಿಸಿದರು. ಅಶೋಕ ಹಾದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ಶೆಟ್ಟರ, ಆಶಾ ಪಟ್ಟಣಶೆಟ್ಟಿ, ಅಕ್ಕಮಹಾದೇವಿ ಚಟ್ಟಿ, ರೇಣುಕಾ ಪರ್ವತಗೌಡ್ರ, ಎಸ್.ಎಂ. ವಾರದ, ಲಕ್ಷ್ಮೀ ಸುತಾರ, ಡಿ.ಎಸ್. ಬಾಪುರಿ, ಬಸವರಾಜ ಗಣಪ್ಪನವರ, ಶಿವನಗೌಡ ಗೌಡರ, ಬೂದಪ್ಪ ಅಂಗಡಿ, ಅನ್ನಪೂರ್ಣ ಬಡಿಗಣ್ಣವರ, ರಾಜೇಶ್ವರಿ ಬಡ್ನಿ, ಎಸ್.ಎಸ್. ಗಾಳಪ್ಪನವರ, ಎಲ್.ಟಿ. ಗುಡ್ಡಿಮಠ, ಸುಲೋಚನಾ ಕಾಲವಾಡಮಠ, ಎಸ್.ಸಿ. ಹುಣಶೀಮರದ, ಶೈಲಜಾ ಗಿಡ್ನಂದಿ, ಶಾಂತಾ ಗಣಪ್ಪನವರ, ಶೋಭಾ ಭಾಂಡಗೆ, ಮಹಾದೇವಿ ಚರಂತಿಮಠ, ವಿಜಯಾ ಚೆನ್ನಶೆಟ್ಟಿ, ಅನ್ನಪೂರ್ಣ ಅಸೂಟಿ, ಗಿರಿಜಾ ನಾಲ್ವತ್ತಾಡಮಠ, ಶಂಕರಗೌಡ ಪಾಟೀಲ, ವಿಜಯಲಕ್ಷ್ಮೀ ಉಪವಾಸಿ, ಪ್ರತಿಭಾ ಇನಾಮತಿ, ವೀಣಾ ಅಕ್ಕಿ, ಜಯಶ್ರೀ ವಸ್ತçದ, ವಿ.ಪಿ. ಸವಡಿ, ಅಮೃತೇಶ ಹೊಸಳ್ಳಿ, ಮಲ್ಲಿಕಾರ್ಜುನ ಪಾಟೀಲ, ಬಿ.ಎಂ. ಗೌಡರ, ಎಸ್.ಎಂ. ಬುರಡಿ, ಎಚ್.ಎಂ. ಹಳ್ಳದ, ಎಸ್.ಬಿ. ವಾಲ್ಮೀಕಿ, ರಾಚಪ್ಪ ಮಿಣಜಗಿ, ಎಂ.ಜಿ. ಗಾಡದ, ದೇಸಾಯಿಗೌಡ್ರ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಆರೋಗ್ಯ ಸಂವರ್ಧನೆಯ ಹಿನ್ನೆಲೆಯಲ್ಲಿ ನಿರೂಪಿತವಾಗಿರುವ ಯೋಗದ ಕ್ರಿಯೆಗಳು ಮನುಷ್ಯನ ಸ್ವಾಸ್ಥ್ಯ ಬದುಕಿಗೆ ಅಗತ್ಯವಾಗಿದೆ. ಆರೋಗ್ಯಪೂರ್ಣ ವ್ಯಕ್ತಿತ್ವ ದೇಶದ ಪ್ರಗತಿಗೆ ಪೂರಕವಾಗಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳು ತಲೆ ಎತ್ತುತ್ತಿವೆ ಎಂದರೆ ಇದು ಆರೋಗ್ಯದ ಬಗ್ಗೆ ಇರುವ ನಮ್ಮ ಅಜ್ಞಾನವನ್ನು ತೋರುತ್ತದೆ. ರೋಗದಿಂದ ಮುಕ್ತವಾಗಿರಲು ಆಹಾರ ಮತ್ತು ಯೋಗಾಸನಗಳ ಮಹತ್ವವನ್ನು ಅರಿಯುವದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!