ಯಲ್ಲಾಪುರ: ಹೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾಮದ ಅಣಲೇಸರದಲ್ಲಿ ನಡೆದಿದೆ. ಜಡಗಿನಕೊಪ್ಪದ ಆನಂದ ಸಿದ್ದಿ (27) ಮೃತ ದುರ್ದೈವಿಯಾಗಿದ್ದು,
ಅನುಭವವಿಲ್ಲದೆ ಮತ್ತು ಸುರಕ್ಷತಾ ಸಾಧನಗಳಿಲ್ಲದೇ ವಿದ್ಯುತ್ ಕಂಬವನ್ನು ಹತ್ತಿದಾಗ ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಈ ಘಟನೆಗೆ ಹೆಸ್ಕಾಂ ನಿರ್ಲಕ್ಷ್ಯತೆಯೇ ಕಾರಣವೆಂದು ಆರೋಪಿಸಿ, ಯುವಕನನ್ನು ವಿದ್ಯುತ್ ಕಂಬ ಹತ್ತಿಸಿದ ಆರೋಪದ ಮೇಲೆ ಘಟನೆಗೆ ಸಂಬಂಧಿಸಿದಂತೆ ಲೈನ್ ಮ್ಯಾನ್ ಮತ್ತು ಸೆಕ್ಷನ್ ಅಧಿಕಾರಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



