ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಲ್ಲಸಮುದ್ರ ಗ್ರಾಮದಲ್ಲಿರುವ ಮಾತೃಪುನರ್ ಮಿಲನ ಆನಂದ ವೃದ್ಧಾಶ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲರ 72ನೇ ಜನ್ಮದಿನದ ನಿಮಿತ್ತ ಆಶ್ರಮದ ಹಿರಿಯರಿಗೆ ಅವರ ಅಭಿಮಾನಿ ಬಳಗದಿಂದ ಸುನೀಲ ಬಂಡೆಣ್ಣವರ ನೇತೃತ್ವದಲ್ಲಿ ಬಟ್ಟೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ವಹಿಸಿ ಮಾತನಾಡಿ, ಆರಂಭದ ದಿನಗಳಿಂದಲೂ ಬಡವರ ನೋವು-ನಲಿವುಗಳಿಗೆ ಎಚ್.ಕೆ. ಪಾಟೀಲರು ಸ್ಪಂದಿಸುತ್ತಾ ಬಂದಿದ್ದಾರೆ. ಈ ಹಿಂದೆ ಅವರು ಜವಳಿ, ನೀರಾವರಿ, ಕೃಷಿ, ಗ್ರಾಮೀಣ ಅಭಿವೃದ್ಧಿ ಮುಂತಾದ ಖಾತೆಗಳ ಸಚಿವರಾಗಿ ಬಡವರು, ಗ್ರಾಮೀಣ ಭಾಗದ ಜನರು ಹಾಗೂ ವೃದ್ಧರಿಗೆ ಅನೇಕ ವಿಶೇಷ ಕ್ರಿಯಾಯೋಜನೆಗಳನ್ನು ರೂಪಿಸಿದ್ದಾರೆ.
ಅನಾಥ ಮಕ್ಕಳು ಮತ್ತು ವೃದ್ಧರ ಕ್ಷೇಮಾಭಿವೃದ್ಧಿಗಾಗಿ ನಿರ್ಮಿಸಲ್ಪಟ್ಟಿರುವ ಆನಂದವೃದ್ಧಾಶ್ರಮದಲ್ಲಿ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಕಾರ್ಯಕರ್ತರಲ್ಲಿ ಮತ್ತು ಸಮಾಜ ಸೇವಕರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಆನಂದ ವೃದ್ಧಾಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಗಂಗಾಧರ ನಭಾಪೂರ ಮಾತನಾಡಿ, ಆನಂದ ವೃದ್ಧಾಶ್ರಮದ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲು ವಿಶೇಷ ಸಹಾಯ-ಸಹಕಾರ ನೀಡಿದ ಸಚಿವರಾದ ಎಚ್.ಕೆ. ಪಾಟೀಲರ ಸಹಾಯವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.
ಕಳಸಾಪೂರ ಗ್ರಾಮದ ಕೃಷ್ಣಾ ಲಮಾಣಿ ಪ್ರಸಾದ ಸೇವೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸುನೀಲ ಬಂಡೆಣ್ಣವರ, ಅತಿಥಿಗಳಾಗಿ ಚಂದ್ರು ಕೊಣೆಮನೆ ಪಾಲ್ಗೊಂಡಿದ್ದರು. ಆಶ್ರಮದ ಬಸಯ್ಯ ನಂದಿಕೋಲಮಠ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ವೆರ್ಣೇಕರ್, ಸುರೇಶ ರೇವಣಕರ, ಎಮ್.ಬಿ. ಹಂಚಿನಾಳ, ವೆಂಕಟೇಶ ಕುಲಕರ್ಣಿ, ಜನಾರ್ಧನ ಹವಳೆ, ದೇವಾನಂದ ಪೂಜಾರ, ಪುಲಿಕೇಶ ನಭಾಪೂರ, ಮೋತಿಲಾಲ ಪೂಜಾರ, ಕೃಷ್ಣಮೂರ್ತಿ ಜೆ.ಹವಳೆ, ಮಲ್ಲಸಮುದ್ರ ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು.



