ವಿಜಯಸಾಕ್ಷಿ ಸುದ್ದಿ, ಕೊಪ್ಪಳಯಾವುದೇ ಸಂದರ್ಭದಲ್ಲೂ ತಾವು ಕಾಂಗ್ರೆಸ್ ಬಿಡಲ್ಲ, ಬೇರೆ ಪಕ್ಷ ಸೇರಲ್ಲ. ಇದೆಲ್ಲ ತಮ್ಮ ಪ್ರಗತಿ ಸಹಿಸದವರು ಹಬ್ಬಿಸುತ್ತಿರುವ ಗಾಳಿ ಸುದ್ದಿ. ಇದನ್ನ ಯಾರು ನಂಬಬೇಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ಸಂದೇಶದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.ಆಡಿಯೊ ಮೂಲಕ ಮೂರೂವರೆ ನಿಮಿಷ ಮಾತನಾಡಿರುವ ಅವರು, ಆರೋಗ್ಯದ ದೃಷ್ಟಿಯಿಂದ ಹೊರಗಡೆ ಬರಲಾಗುತ್ತಿಲ್ಲ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಶೀಘ್ರವೇ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ.ಕೋವಿಡ್-19 ಸಂಕಷ್ಟದ ಈ ದಿನಗಳಲ್ಲಿ ಜನಹಿತದ ನಿಟ್ಟಿನಲ್ಲಿ ಅನೇಕ ಸಹಾಯ ಕಾರ್ಯ ಮಾಡಲಾಗಿದೆ. ಲೋಕಸಭಾ ಚುನಾವಣೆ, ಗ್ರಾಪಂ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಮತಯಾಚನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಗಂಗಾವತಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೊಳಗಾಗದೇ, ವದಂತಿಗಳಿಗೆ ಕಿವಿಗೊಡದೇ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಮೂಲಕ ಮತ್ತಷ್ಟೂ ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.
Trending Now



