HomeEntertainmentಆರ್ಯನ್ ಖಾನ್‌ಗೆ ಅಭಿಮಾನಿಗಳ ಮುತ್ತಿಗೆ: ನೂಕುನುಗ್ಗಲಿನ ವಿಡಿಯೋ ವೈರಲ್

ಆರ್ಯನ್ ಖಾನ್‌ಗೆ ಅಭಿಮಾನಿಗಳ ಮುತ್ತಿಗೆ: ನೂಕುನುಗ್ಗಲಿನ ವಿಡಿಯೋ ವೈರಲ್

For Dai;y Updates Join Our whatsapp Group

ರಾಘವ್ ಜುಯಲ್ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಯನ್ ಖಾನ್ ಭಾರೀ ಜನದಟ್ಟಣೆಯಲ್ಲಿ ಸಿಲುಕಿ ಒದ್ದಾಡಿದ ವಿಡಿಯೋಗಳು ವೈರಲ್ ಆಗಿವೆ. ನೂಕುನುಗ್ಗಲಿನ ವೇಳೆ ಒಬ್ಬ ವ್ಯಕ್ತಿ ಅವರ ಕಾಲಿಗೆ ಬಿದ್ದಿದ್ದು, ಭದ್ರತಾ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಪಾರ್ಟಿಯಿಂದ ಹೊರಬರುತ್ತಿದ್ದ ವೇಳೆ ಅಭಿಮಾನಿಗಳು ಮತ್ತು ಛಾಯಾಗ್ರಾಹಕರ ದಟ್ಟಣೆಯಿಂದ ಗೊಂದಲ ಉಂಟಾಗಿತ್ತು. ಇದೇ ವೇಳೆ ಒಬ್ಬ ವ್ಯಕ್ತಿ ಆರ್ಯನ್ ಕಾಲಿಗೆ ಬಿದ್ದಿದ್ದು, ಸೆಕ್ಯೂರಿಟಿ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದಿದ್ದಾರೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ ಜನರಿಂದ ತುಂಬಿದ್ದ ಲಿಫ್ಟ್‌ನಲ್ಲಿ ಆರ್ಯನ್ ಖಾನ್ ಜಾಗದ ಕೊರತೆಯಿಂದ ಕೆಳಗೆ ಕುಳಿತುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಆರ್ಯನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ರಾಘವ್ ಜುಯಲ್ ನಟಿಸಿರುವ ಹಿನ್ನೆಲೆ ಅವರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ಒಂದೇ ಕಾರಿನಲ್ಲಿ ತೆರಳಿರುವುದು ಡೇಟಿಂಗ್ ವದಂತಿಗಳಿಗೆ ಮತ್ತೆ ಇಂಬು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img