HomeBengaluru Newsನಕಲಿ ಮೆಡಿಸಿನ್ ದಂಧೆಗೆ ಟರ್ಕಿ ಲಿಂಕ್? ಬ್ರ್ಯಾಂಡೆಡ್ ಕಂಪನಿ ಲೇಬಲ್ ಬಳಸಿ ಕೋಟ್ಯಂತರ ರೂ. ವಂಚನೆ...

ನಕಲಿ ಮೆಡಿಸಿನ್ ದಂಧೆಗೆ ಟರ್ಕಿ ಲಿಂಕ್? ಬ್ರ್ಯಾಂಡೆಡ್ ಕಂಪನಿ ಲೇಬಲ್ ಬಳಸಿ ಕೋಟ್ಯಂತರ ರೂ. ವಂಚನೆ ಶಂಕೆ

For Dai;y Updates Join Our whatsapp Group

ಬೆಂಗಳೂರು: ನಕಲಿ ಮೆಡಿಸಿನ್ ದಂಧೆ ಪ್ರಕರಣದ ತನಿಖೆ ಮುಂದುವರಿದಂತೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.

ಈ ದಂಧೆ ರಾಜ್ಯ ಅಥವಾ ರಾಷ್ಟ್ರಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ, ಅಂತಾರಾಷ್ಟ್ರೀಯ ಮಟ್ಟದವರೆಗೂ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.

ನಕಲಿ ಔಷಧಿಗಳಿಗೆ ಬಳಸಲಾಗುತ್ತಿದ್ದ ಲೇಬಲ್‌ಗಳು ಟರ್ಕಿಯಿಂದ ಬರುತ್ತಿದ್ದವು ಎನ್ನಲಾಗಿದ್ದು, ಸಮುದ್ರ ಮಾರ್ಗದ ಮೂಲಕ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಬ್ರ್ಯಾಂಡೆಡ್ ಮೆಡಿಸಿನ್ ಕಂಪನಿಗಳ ಲೇಬಲ್‌ಗಳನ್ನು ಬಳಸಿ ನಕಲಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಟರ್ಕಿಯಲ್ಲಿ ನಕಲಿ ಔಷಧಿಗಳ ಅಕ್ರಮಕ್ಕೆ ದೊಡ್ಡ ಮಾರುಕಟ್ಟೆ ಇರುವ ಬಗ್ಗೆ ಹಾಗೂ ಕ್ಯಾನ್ಸರ್ ಔಷಧಿಗಳ ಅಕ್ರಮ ರಫ್ತಿಗೆ ಸಂಬಂಧಿಸಿದ ಜಾಲವಿರುವ ಬಗ್ಗೆ ಜಾಗತಿಕ ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕಿವೆ ಎನ್ನಲಾಗಿದೆ.

ವೀರೇಶ್ ಜೈನ್ ಕಿಂಗ್‌ಪಿನ್ ಎಂಬ ಶಂಕೆ:

ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ಮೆಡಿಸಿನ್ ದಂಧೆಯ ಪ್ರಮುಖ ಆರೋಪಿ ವೀರೇಶ್ ಜೈನ್ ಎಂಬ ಶಂಕೆ ವ್ಯಕ್ತವಾಗಿದೆ. ಈತ ಹಿಂದೆ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪ್ರಶಾಂತ್ ಸೇರಿದಂತೆ ಇತರ ಆರೋಪಿಗಳೊಂದಿಗೆ ವೀರೇಶ್ ಜೈನ್ ನಂಟು ಹೊಂದಿದ್ದ ಎನ್ನಲಾಗಿದ್ದು, ಆರೋಪಿಗಳೆಲ್ಲ ಸೇರಿಕೊಂಡು ಸಂಘಟಿತವಾಗಿ ನಕಲಿ ಔಷಧಿಗಳ ದಂಧೆ ನಡೆಸುತ್ತಿದ್ದರು ಎಂಬ ಆರೋಪವಿದೆ.

ಆರೋಪಿಗಳು ತಮ್ಮದೇ ಫಾರ್ಮಾ ಸಂಸ್ಥೆ ಆರಂಭಿಸಿ, 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧಿಗಳನ್ನು ಪೂರೈಸುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಮೆಡಿಸಿನ್ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಆರೋಪಿ ವೀರೇಶ್ ಜೈನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ ಎನ್ನಲಾಗಿದ್ದು, ಮಂಗಳವಾರದ ಬಳಿಕ ಆತನನ್ನು ಕಸ್ಟಡಿಗೆ ಪಡೆದು ಎಸ್‌ಐಟಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಆರು ರಾಜ್ಯಗಳ 10 ಕಡೆ ಏಕಕಾಲಕ್ಕೆ ದಾಳಿ:

ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧಿ ಜಾಲದ ಪ್ರಕರಣದ ತನಿಖೆಯನ್ನು ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಚುರುಕುಗೊಳಿಸಿದೆ.

ಇದರ ಭಾಗವಾಗಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳ 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಕರ್ನಾಟಕ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ನಕಲಿ ಫಾರ್ಮಾ ಸಂಸ್ಥೆಗಳ ಕಚೇರಿಗಳು, ಔಷಧ ಸಂಗ್ರಹ ಸ್ಥಳಗಳು ಹಾಗೂ ದಂಧೆಯ ಜಾಲಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

ಈ ದಾಳಿಯ ಬೆನ್ನಲ್ಲೇ ನಕಲಿ ಮೆಡಿಸಿನ್ ದಂಧೆಯ ವ್ಯಾಪ್ತಿ ಹಾಗೂ ಅದರ ಹಿಂದೆ ಇರುವ ಜಾಲದ ಕುರಿತು ಮತ್ತಷ್ಟು ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗುತ್ತಿದೆ ಎನ್ನಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img