ಕೋತಿಗಳಿಗೆ ಆಹಾರ ವ್ಯವಸ್ಥೆ, ಪಿಎಸ್‌ಐ ಜೂಲಕಟ್ಟಿ ಮಾನವೀಯ ತುಡಿತ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಹುಬ್ಬಳ್ಳಿ: ಕೊರೋನಾ ಪ್ರಾಣಿಗಳ ಆಹಾರಕ್ಕೂ ಸಂಚಕಾರ ತಂದಿದೆ. ಪ್ರಾಣಿಗಗಳಿಗೆ ಆಹಾರದ ಸ್ಥಳಗಳಾಗಿದ್ದ ಹೊಟೇಲ್, ಬೀದಿ ಬದಿಯ ತಿಂಡಿ ಗಾಡಿಗಳು ಇಲ್ಲದೇ, ಇವುಗಳಿಗೆ ಆಹಾರ ಸಿಗದೇ, ತೊಂದರೆಯಾಗಿದೆ. ಇವುಗಳ ತೊಂದರೆ ಅರ್ಥೈಸಿಕೊಂಡವರು ಕೆಲವೆಡೆ ಆಹಾರ ನೀಡುವ ಕಾಯಕ ಮಾಡಿದ್ದಾರೆ. ಇಂತವರ ಸರತಿಯಲ್ಲಿ ಅಣ್ಣಿಗೇರಿ ಪಿಎಸ್‌ಐ ಲಾಲಸಾಬ ಜೂಲಕಟ್ಟಿ ಮತ್ತು ಅವರ ಸಿಬ್ಬಂದಿ ಕೂಡ ಇದ್ದಾರೆ.


ಠಾಣೆ ಮುಂಭಾಗದಲ್ಲಿ ಮಂಗಗಳು ನೆರೆದಿದ್ದನ್ನು ಕಂಡ ಜೂಲಕಟ್ಟಿ ನೇತೃತ್ವದ ತಂಡ ಮಂಗಗಳಿಗೆ ಸೇಬು, ದ್ರಾಕ್ಷಿ ಹಣ್ಣುಗಳು ಹಾಗೂ ನೀರು ನೀಡಿ ಆಹಾರ ಪೂರೈಸಿದ್ದಾರೆ.
ಈ ಹಿಂದೆ ಇದೆ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡ ಕಾರಣಕ್ಕೆ ವಲಸೆ ಕಾರ್ಮಿಕರು ಕಾಲು ನಡೆಗೆಯಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದರು. ಇವರನ್ನು ಮಾರ್ಗ ಮಧ್ಯದಲ್ಲಿ ಕಂಡ ಜೂಲಕಟ್ಟಿ ಮತ್ತು ಸಿಬ್ಬಂದಿ ಊಟ ವ್ಯವಸ್ಥೆ ಮಾಡಿದ್ದುಂಟು.

ಜೂಲಕಟ್ಟಿ ತಮ್ಮ ಮನೆಯಿಂದಲೇ ಅಡುಗೆಯನ್ನು ತಯಾರಿಸಿಕೊಂಡು ಬಂದು ಬಸ್ ವ್ಯವಸ್ಥೆ ಇಲ್ಲದೇ ತಮ್ಮ ತಮ್ಮ ನಿವಾಸಗಳಿಗೆ ತೆರಳಲು ಕಾಲ್ನಡಿಗೆ ಅನುಸರಿಸಿ ಹೋಗುತ್ತಿರುವ ಸಾರ್ವಜನಿಕರಿಗೆ ಆಹಾರವನ್ನು ಹಾಗೂ ಕುಡಿಯಲು ನೀರನ್ನು ವಿತರಣೆ ಮಾಡಿದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

1 × 5 =