ಪ್ರಮಾಣೀಕರಿಸದ ಮೆಕ್ಕೆಜೋಳ ದಾಸ್ತಾನು ಶಂಕೆ, ಪರಿಶೀಲನೆ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ನರಗುಂದ: ಕೆಲ ಕಡೆಗಳಲ್ಲಿ ಪ್ರಮಾಣೀಕರಿಸದ ಮೆಕ್ಕೆಜೋಳ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂಬ ಸಂದೇಹದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಅವರು ಮಂಗಳವಾರ ಪಟ್ಟಣದ ಬೀಜ ಮಾರಾಟಗಾರರ ದಾಸ್ತಾನು ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷಿ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸೇರಿದಂತೆ ವಿವಿಧ ಕೃಷಿ ಉಪಯೋಗಿ ಪರಿಕರ ಮಾರಾಟ ಮಾಡಲು ಅವಕಾಶ ಇರುತ್ತದೆ.

ಪರವಾನಿಗೆದಾರರು ಸಹ ಕಂಪೆನಿಗಳು ಸರಬರಾಜು ಮಾಡಿದ ಪ್ರಮಾಣೀಕೃತ ಬಿತ್ತನೆ ಬೀಜಗಗಳನ್ನು ಮಾತ್ರ ಮಾರಾಟ ಮಾಡಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಲೋಪವಾಗದಂತೆ ಹಾಗೂ ಕೃತಕ ಅಭಾವ ಸೃಷ್ಟಿಸದಂತೆ ಎಲ್ಲಾ ಮಾರಾಟಗಾರರು ಎಚ್ಚರಿಕೆ ವಹಿಸಬೇಕು ಎಂದು ಸಹಾಯಕ ನಿರ್ದೇಶಕ ಚನ್ನಪ್ಪ ಅವರು ಈ ಸಂದರ್ಭದಲ್ಲಿ ಮಾರಾಟಗಾರರಿಗೆ ತಾಕೀತು ಮಾಡಿದರು.

ಮೆಕ್ಕೆಜೋಳ ಬಿತ್ತನೆ ಬೀಜದ ಅಕ್ರಮ ದಾಸ್ತಾನು ಹಾಗೂ ಅನಧಿಕೃತ ಮಾರಾಟ ಮಾಡುವುದು ಹಾಗೂ ತಾಲೂಕಿನಲ್ಲಿ ಸಾಗಾಣಿಕೆ ಮಾಡುವುದು ಇಲ್ಲವೇ ಪ್ರಾಕೇಜ್‌ರಹಿತ ಪ್ರಮಾಣೀಕೃತರಹಿತವಾದ ಬಿತ್ತನೆ ಬೀಜ ಮಾರಾಟ ಮಾಡುವುದು ಅಗತ್ಯ ವಸ್ತುಗಳ ಕಾಯ್ದೆ ೧೯೫೫ರ ಬೀಜ ನಿಯಂತ್ರಣ ಆದೇಶ ೧೯೮೩ರ ಅಡಿ ಕಠಿಣ ಕಾನೂನು ಕ್ರಮ ಜರುಸಲಾಗುವುದು. ಇಂಥಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ರೈತಸಂಪರ್ಕ ಕೇಂದ್ರ ಇಲ್ಲವೇ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ನರಗುಂದ ಇವರಿಗೆ ಮಾಹಿತಿ ಸಲ್ಲಿಸಬೇಕು ಎಂದು ಚನ್ನಪ್ಪ ಅಂಗಡಿ ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

two × three =