ಸದ್ಯಕ್ಕೆ ಜಿಲ್ಲೆ ನಿರಾಳ; ಗ್ರಾಮೀಣ ವಲಯದತ್ತ ನಿಗಾ ಇರಲಿ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಶನಿವಾರ ಗದಗ ಜಿಲ್ಲೆಯ ಮಟ್ಟಿಗೆ ಶುಭಸುದ್ದಿಯೊಂದು ಹೊರಬಂದಿದೆ. ಚಿಕಿತ್ಸೆಯಲ್ಲಿ ಇದ್ದ ಮೂವರು ಕೊರೋನಾ ಪಾಸಿಟಿವ್ ಸೋಂಕಿತರು ಸೋಂಕಿನಿಂದ ಮುಕ್ತಗೊಂಡು ಗುಣಮುಖರಾಗಿ ಮನೆಗೆ ತಲುಪಿದ್ದಾರೆ.
ಈವರೆಗೂ ಜಿಲ್ಲೆಯಲ್ಲಿ ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೊದಲ ಪಾಸಿಟಿವ್ ಸೋಂಕಿತೆ ೮೦ ವರ್ಷದ ವೃದ್ಧೆ ಹೃದಯ ಸ್ತಂಭನ ದಿಂದ ನಿಧನರಾಗಿದ್ದರು. ಎರಡನೇ ಪಾಸಿಟಿವ್ ಸೋಂಕಿತ ವೃದ್ಧೆ ಗುಣಮುಖರಾಗಿ ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಈಗ ಉಳಿದ ಮೂವರೂ ಗುಣಮುಖರಾಗಿದ್ದಾರೆ.
ಈ ಎಲ್ಲ ಐದೂ ಜನ ಗದಗ ನಗರದವರು, ಅದರಲ್ಲಿ ನಾಲ್ಕು ಜನ ಒಂದೇ ಓಣಿಗೆ ಸೇರಿದವರು.

ನಗರದಾಚೆ ಸೋಂಕು ಇಲ್ಲ ಎನ್ನುವ ಸಂದರ್ಭದಲ್ಲೇ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗ್ರಾಮವೊಂದರ ಗಂಡನ ಮನೆಯಿಂದ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪೂರದ ತವರುಮನೆಗೆ ಹೆರಿಗೆಗೆ ಬಂದಿದ್ದ ಮಹಿಳೆಗೆ ಪಾಸಿಟಿವ್ ಪತ್ತೆಯಾಗಿದ್ದು, ಶುಕ್ರವಾರ ಅವರ ಜೀವ ಉಳಿಸಲು ಹುಬ್ಬಳ್ಳಿ ಕಿಮ್ಸ್ ವೈದ್ಯರು ಗರ್ಭಪಾತದ ಮೊರೆ ಹೋಗಬೇಕಾಯಿತು.
ಇದೇ ವೇಳೆ ಈ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ ಐವರು ಬಾಗಲಕೋಟೆಯ ಜನರಿಗೆ ಪಾಸಿಟಿವ್ ದೃಢಪಟ್ಟಿದ್ದು, ಅವರು ರೋಣ ತಾಲೂಕಿನ ಎಂಟು ಗ್ರಾಮಗಳಲ್ಲಿ ಅಲೆದಾಡಿದ್ದಾರೆ. ಹೀಗಾಗಿ ಈಗ ಆ ಎಂಟು ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸುಮಾರು ೧೫೦ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಅವರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳಿಸಿದೆ.

ಈಗ ಲಾಕ್‌ಡೌನ್ ಸಡಿಲಿಕೆಯ ನಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ನಡುವೆಯೂ ಬೇರೆ ಜಿಲ್ಲೆಯವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಗರ ಪ್ರದೇಶಗಳಲ್ಲಿ ವಿಧಿಸಿರುವ ಬಿಗಿ ಕಟ್ಟನಿಟ್ಟಿನ ಕ್ರಮಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೆಕು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಆರಂಭಿಸಬೇಕು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

four × 3 =