ಅಂತರ್‌ರಾಜ್ಯ  ಪ್ರಯಾಣ: ಸೋಂಕು ಹೆಚ್ಚಳ
ಪ್ರಯಾಣ ನಿಷೇಧ ಪರಿಹಾರವೆ?

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಯಾವ ಪೂರ್ವಸಿದ್ಧತೆಯೇ ಇಲ್ಲದೇ ಲಾಕ್‌ಡೌನ್ ಜಾರಿ ಮಾಡಿದ್ದು ಮತ್ತು ಲಾಕ್‌ಡೌನ್ ಸಡಿಲಿಸುವ ಹೊತ್ತಿನಲ್ಲಿ ಅಂತರ್‌ರಾಜ್ಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಪ್ರಕ್ರಿಯೆಯಲ್ಲಿ ಎಡವಿದ್ದು- ಈ ಎರಡೂ ತಪ್ಪುಗಳೇ ಆಗಿದ್ದವು. ಬಂದವರನ್ನು ಸರಿಯಾಗಿ ಕ್ವಾರಂಟೈನ್‌ಗೂ ಒಳಪಡಿಸಲಿಲ್ಲ.
 ಹೊರರಾಜ್ಯದಿಂದ ಬಂದ ನೂರಾರು ಜನ ಸೋಂಕುಪೀಡಿತರಾಗಿದ್ದಾರೆ.

ಇಲ್ಲಿವರೆಗೂ ಒಂದೂ ಪಾಸಿಟಿವ್ ಕಾಣಿಸಿರದಿದ್ದ ಕೊಪ್ಪಳ ಜಿಲ್ಲೆಯಲ್ಲೂ ಮೂರು ಪ್ರಕರಣ ಕಾಣಿಸಿಕೊಂಡಿವೆ. ಎರಡು ದಿನದಲ್ಲಿ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಪಾಸಿಟಿವ್ ಮಹಾರಾಷ್ಟ್ರ ದಿಂದ ಬಂದವರಲ್ಲೇ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ದೇಶದಲ್ಲೇ ಅಧಿಕ ಸೋಂಕುಪೀಡಿತ ರಾಜ್ಯ. ಸಹಜವಾಗಿ ಅಲ್ಲಿಂದ ಬರುವವರಲ್ಲಿ ನೂರಾರು ಜನ ತಮಗರಿವಿಲ್ಲದೇ  ಸೋಂಕು ಹೊತ್ತುಕೊಂಡು ಅಥವಾ ಸೋಂಕಿನ ಪೂರ್ವ ಲಕ್ಷಣ ಇಟ್ಟುಕೊಂಡು ಬಂದಿರುತ್ತಾರೆ.

ಮಹಾರಾಷ್ಟ್ರದಲ್ಲಿ ಸರಿಯಾದ ನೆಲೆ ಇಲ್ಲವೆಂಬ ಕಾರಣಕ್ಕೆ ಅವರು ಇಲ್ಲಿಗೆ ಬರಲೇಬೇಕಿತ್ತು. ಆದರೆ, ಅವರು ಬಂದಾಕ್ಷಣ ಸರಿಯಾಗಿ ಟೆಸ್ಟಿಂಗ್ ಮಾಡಲೂ ಇಲ್ಲ. ಕ್ವಾರಂಟೈನ್ ಪ್ರಕ್ರಿಯೆಯೂ ಸರಿಯಾಗಿ ಜರುಗಲಿಲ್ಲ.
ಈಗ ಒಮ್ಮಿಂದೊಮ್ಮೇಲೆ ಮಹಾರಾಷ್ಟ್ರ ತಮಿಳುನಾಡು, ಗುಜರಾತ್ ಮತ್ತು ಕೇರಳಗಳಿಂದ ಪ್ರವೇಶ ನಿಷಿದ್ಧ ಎನ್ನುವುದು ಸರಿಯಾದ ಕ್ರಮವಲ್ಲ ಎಂಬುದನ್ನು ರಾಜ್ಯ ಸರ್ಕಾರ ಅರಿತುಕೊಳ್ಳಬೇಕು. ಅಲ್ಲಿ ಆ ರಾಜ್ಯಗಳು ತಮ್ಮಲ್ಲಿನ ಸೋಂಕು ನಿಯಂತ್ರಣಕ್ಕೆ ಪರದಾಡುವ ಸಂದರ್ಭದಲ್ಲಿ ಇಲ್ಲಿಯವರನ್ನು ಅಲ್ಲೇ ಉಳಿಯಿರಿ ಎನ್ನುವುದು ತಪ್ಪಾಗುತ್ತದೆ.
ಬರಲು ಅವಕಾಶ ಕಲ್ಪಿಸಬೇಕು ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಗುಂಪುಗುಂಪಾಗಿ ಲಾರಿ, ಬಸ್‌ಗಳಲ್ಲಿ ಬಂದವರು ಸೋಂಕು ಹಚ್ಚಿಕೊಂಡಿರಬಹುದು. ಮುಂದೆ ಹಾಗಾಗದಂತೆ ಎಚ್ಚರ ವಹಿಸಿ ಅವರಿಗೆ ಇಲ್ಲಿಗೆ ಬರಲು ಅವಕಾಶ ನೀಡಬೇಕು. ಬಂದ ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಬೇಕು.

ಕಾಸರಗೋಡಿನಿಂದ ಚಿಕಿತ್ಸೆಗೆ ಬರುವವರಿಗೆ ಮಂಗಳೂರು ಗಡಿಯನ್ನು ರಾಜ್ಯ ಮುಚ್ಚಿದ್ದರಿಂದ ಅಲ್ಲಿ ಕೆಲವು ಜನ ಪ್ರಾಣ ತೆತ್ತರು. ಆದರೆ ಅದೇ ಕೇರಳ ಸಿಎಂ ಕರ್ನಾಟಕದ ಸೋಂಕುಪೀಡಿತರಿಗೆ ಚಿಕಿತ್ಸೆ ನೀಡಲು ನಮ್ಮ ಆಸ್ಪತ್ರೆಗಳು ಸಿದ್ಧ ಎನ್ನುವ ಮೂಲಕ ದೊಡ್ಡವರಾಗಿದ್ದರು.
ಮಾಧ್ಯಮಗಳು ಅಷ್ಟೇ, ‘ಮಹಾ’ ಸೋಂಕು ಎಂದು ಇದನ್ನು ದೊಡ್ಡದು ಮಾಡಬೇಕಿಲ್ಲ. 

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

9 + 18 =