ಆರಕ್ಷಕರ ಆಪ್ತಕಾರ್ಯ; ಐಆರ್‌ಬಿ ಪೊಲೀಸರಿಗೆ ಈ ಬಾರಿ ವಿಶಿಷ್ಟ ಸ್ವಾತಂತ್ರ್ಯೋತ್ಸವ!

Vijayasakshi (Gadag News) :

-5 ಫೀಟ್ ಎತ್ತರದ ಅಶೋಕ ಲಾಂಛನ ಪ್ರತಿಷ್ಠಾಪನೆ

-ಸಂಸದರ ಅನುದಾನ, ಗವಿಶ್ರೀಗಳ ಹಾರೈಕೆ

-ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಪೊಲೀಸರು ಎಂದರೆ ಸಾಮಾನ್ಯವಾಗಿ ಬಿಗಿ ಬಂದೋಬಸ್ತ್ ಮಾಡುವವರು, ಆರೋಪಿಗಳನ್ನು ಪತ್ತೆ ಹಚ್ಚುವವರು, ಅಪರಾಧ ತಡೆಗಟ್ಟುವವರು ಎಂಬ ಸಾಮಾನ್ಯ ನೋಟ ಕಣ್ಮುಂದೆ ಬರುತ್ತದೆ. ಆದರೆ‌ ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ಐಆರ್‌ಬಿ ಪೊಲೀಸರು ಮೊದಲಿನಿಂದಲೂ ಡಿಫರೆಂಟ್. ಇದಕ್ಕೆ ಮತ್ತೊಂದು ಬೆಸ್ಟ್ ಉದಾಹರಣೆ ಈ ಬಾರಿ ಅವರು ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆ!

ಹೌದು… ಪ್ರತಿ ವರ್ಷ ಸ್ವಾತಂತ್ರ್ಯ ದಿನ ಬಂದೇ ಬರುತ್ತದೆ. ಅದನ್ನು ಎಲ್ಲರೂ ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸುವುದು ಸಾಮಾನ್ಯ. ಇದರ ಜೊತೆಗೆ ಸತ್ಯ, ನ್ಯಾಯ, ನಿಷ್ಠೆಗೆ ಹೆಸರಾದ ಅಶೋಕನ ಲಾಂಛನವನ್ನು ಸ್ಥಾಪಿಸಿದರೆ ಸ್ವಾತಂತ್ರ್ಯೋತ್ಸವ ಮತ್ತಷ್ಟೂ ಅರ್ಥಪೂರ್ಣ ಎಂದು ಮುನಿರಾಬಾದ್‌ನ ಐಆರ್‌ಬಿ ಪೊಲೀಸರು ಯೋಚಿಸಿದ್ದಾರೆ. ಇದಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ 4 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಈ ಭಾಗದ ಆರಾದ್ಯ ದೈವ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ಥಳಕ್ಕೆ ಭೇಟಿ ನೀಡಿ ಹಾರೈಸಿದ್ದಾರೆ.

ಅಶೋಕ ಲಾಂಛನದ ನಾಲ್ಕು ಮುಖದ ಸಿಂಹವನ್ನವನ್ನ ಮುದಗಲ್‌ನಿಂದ ಕಲ್ಲು ತರಿಸಿ ಕೆತ್ತಲಾಗಿದೆ. ಅದನ್ನು‌ ಪ್ರತಿಷ್ಢಾಪಿಸಲು ಐಆರ್‌ಬಿ ಪೊಲೀಸರೇ ಶ್ರಮ ವಹಿಸಿದ್ದು ವಿಶೇಷ.

ಸುಮಾರು ಐದು ಫೀಟ್ ಎತ್ತರ, ಮೂರೂವರೆ ಫೀಟ್ ಅಗಲದ ಸಿಂಹ್ ನಾಲ್ಕು ಮುಖವುಳ್ಳ ಲಾಂಛನದ ಪ್ರತಿಷ್ಠಾಪನೆ ಇಂದು-ನಿನ್ನೆಯದಲ್ಲ. ಬರೋಬ್ಬರಿ ನಾಲ್ಕು ತಿಂಗಳ ಯೋಜನೆ, ಯೋಚನೆ, ಶ್ರಮ ಇದೆ. 2020ರ ಆಗಸ್ಟ್ 15ಕ್ಕೆ ಅಶೋಕ ಲಾಂಛನವನ್ನು ಸಂಸದ ಕರಡಿ ಸಂಗಣ್ಣ ಉದ್ಘಾಟಿಸಲಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ಇರುವ ಸಕಾರಾತ್ಮಕ ಪರಿಸರ ಭಾರತದ ಬೇರ‌್ಯಾವ ಪೊಲೀಸ್ ಪಡೆಯಲ್ಲೂ ಇಲ್ಲ ಎಂಬುದು ಈಗಾಗಲೇ ಜನಜನಿತವಾಗಿದೆ. ಇದಕ್ಕೀಗ ಮತ್ತೊಂದು ಸೇರ್ಪಡೆ ಎಂದರೆ ಈ ರೀತಿಯ ಅಶೋಕ ಲಾಂಛನ ಕರ್ನಾಟಕದ ಬೇರೆ ಯಾವ ಪೊಲೀಸ್ ಪಡೆಯಲ್ಲೂ ಇಲ್ಲ ಎಂಬುದು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

four × 2 =