ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.
ಆಕರ್ಷಕ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಯಕತ್ವವನ್ನು ಲಷ್ಟಪ್ಪ ತಳವಾರ ವಹಿಸಿದ್ದರು. ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಮಂಜುನಾಥ ಮೇಲ್ಮನಿ, ಅಬಕಾರಿ ಇಲಾಖೆಯ ಆಶಾರಾಣಿ, ಅರಣ್ಯ ಪಡೆಯ ಸಚಿನ್ ಬಿಸನಹಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ದಳದ ನೇತೃತ್ವವನ್ನು ಆಕಾಶ್ ಎಸ್.ಕೆ., ಸೇವಾದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ಪ್ರೌಢಶಾಲೆಯ ಆಯೇಶಾ, ವಿ.ಡಿ.ಎಸ್ ಗರ್ಲ್ಸ್ ಹೈಸ್ಕೂಲ್ ನೇತೃತ್ವವನ್ನು ಆಕಾಂಕ್ಷಾ, ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ಪವನ ವಡವಳ್ಳಿ, ಮಾಜಿ ಸೈನಿಕ ತಂಡದ ಬಸವರಾಜ ಮುಂಡರಗಿ, ಎಸ್.ಎಂ. ಕೃಷ್ಣ ಪ್ರಾಥಮಿಕ ಶಾಲೆಯ ಮುಸ್ಕಾನ್ ಬಾನು, ಕೆವಿಎಸ್‌ಆರ್ ಪ್ರೌಢಶಾಲೆಯ ಸ್ಪಂದನಾ, ಸೇಂಟ್ ಜಾನ್ ಬಾಲಕರ ಪ್ರೌಢಶಾಲೆಯ ಪವನ ಸಿಂಗ ದೊಡ್ಡಮನಿ, ಎನ್‌ಸಿಸಿ ಸೀನಿಯರ್ ಗರ್ಲ್ಸ್ ತಂಡದ ನೇತೃತ್ವವನ್ನು ಸ್ಪೂರ್ತಿ ಅವರು ವಹಿಸಿದ್ದರು.
ಪಥಸಂಚಲನದಲ್ಲಿ ಇಲಾಖಾವಾರು ನಗರದ ಅಗ್ನಿಶಾಮಕ ಘಟಕ, ಅಬಕಾರಿ ತಂಡ, ಗೃಹ ರಕ್ಷಕ ದಳ, ಶಾಲಾವಾರು ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟಗೇರಿಯ ಸೇಂಟ್ ಜಾನ್ ಬಾಲಕರ ಪ್ರೌಢಶಾಲೆ, ವಿ.ಡಿ.ಎಸ್.ಟಿ. ಬಾಲಕಿಯರ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಸ್ತಬ್ಧಚಿತ್ರ ಪ್ರದರ್ಶನದಲ್ಲಿ 9 ಇಲಾಖೆಯ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಆ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ, ಕೆಎಸ್‌ಆರ್‌ಟಿಸಿ ದ್ವಿತೀಯ ಹಾಗೂ ಶಿಕ್ಷಣ ಇಲಾಖೆ ತೃತೀಯ ಸ್ಥಾನ ಪಡೆದರು.
ಪತ್ರಿಕೋದ್ಯಮ/ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ವೆರಿಗುಡ್ ಮಾರ್ನಿಂಗ್ ದಿನಪತ್ರಿಕೆಯ ದೇವಪ್ಪ ಲಿಂಗಧಾಳ, ಉತ್ತರ ಪ್ರಭಾ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕಿ ಲಕ್ಷ್ಮೀಬಾಯಿ ರವಿಕಾಂತ ಅಂಗಡಿ, ಮುಳಗುಂದದ ವಿಜಯ ಕರ್ನಾಟಕ ವರದಿಗಾರ ವೀರಪ್ಪ ಸಿದ್ದನಗೌಡ, ಗಜೇಂದ್ರಗಡ ತಾಲೂಕು ಉದಯವಾಣಿ ವರದಿಗಾರ ಡಿ.ಜಿ. ವೋಮಿನ್, ಲಕ್ಷ್ಮೇಶ್ವರ ತಾಲೂಕು ವಿಜಯವಾಣಿ ವರದಿಗಾರ ಮಲ್ಲು ಕಳಸಾಪುರ, ನರಗುಂದ ತಾಲೂಕು ಸಂಯುಕ್ತ ಕರ್ನಾಟಕ ವರದಿಗಾರ ಉಮೇಶ ಬೋಳಶೆಟ್ಟಿ, ಶಿರಹಟ್ಟಿ ತಾಲೂಕು ಸಂಜೆವಾಣಿ ವರದಿಗಾರ ಪ್ರಕಾಶ ಮೇಟಿ, ರೋಣ ತಾಲೂಕು ಹೊಳೆ ಆಲೂರ ಹೋಬಳಿ ವಿಜಯವಾಣಿ ವರದಿಗಾರ ವೀರಯ್ಯ ವಸ್ತಾದ, ಮುಂಡರಗಿ ತಾಲೂಕು ಉದಯವಾಣಿ ವರದಿಗಾರ ಹು.ಬಾ. ವಡ್ಡಟ್ಟಿ, ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಮಾಳಿಂಗರಾಯ ಪೂಜಾರ, ಹಸಿರು ಕ್ರಾಂತಿ ಜಿಲ್ಲಾ ವರದಿಗಾರ ಮೌನೇಶ ಬಡಿಗೇರರನ್ನು ಸನ್ಮಾನಿಸಲಾಯಿತು.
ಕ್ರೀಡೆ ಮತ್ತು ಶಿಕ್ಷಣ ವಿಭಾಗದಲ್ಲಿ – ಮುಂಡರಗಿ ತಾಲೂಕು ಮುರಡಿ ತಾಂಡಾದ ರಮೇಶ ಬೂದಿಹಾಳ, ಗದಗ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನ ಗುರುಪ್ರಸಾದ ಸೊನ್ನದ, ಜೆ.ಟಿ. ಕಾಲೇಜಿನ ಜ್ಞಾನೇಶ್ವರ ಗಾಯಕವಾಡ, ಗೊಜನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪುನೀತ್ ರೆಡ್ಡಿ, ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನದ ಶ್ರೀನಿವಾಸ ಆರ್. ಗುಳಗಂದಿ, ಸಂಭ್ರಮ ವಿ. ವಜ್ಜರಮಟ್ಟಿ, ಕೃಪಾ ರೊಟ್ಟಿಗವಾಡ, ನಿಖಿತಾ ವಿ. ಹೆಬಸೂರು, ರೋಶನಿ ಬಹದ್ದೂರಬಂಡಿ, ಗದಗ ಕ್ರೀಡಾ ವಸತಿ ನಿಲಯದ ಭಾಗ್ಯಾ ಕುಬೇರಪ್ಪ ಮೇಲ್ಮನಿ, ವೀರೇಶಯಲ್ಲಪ್ಪ ಶಿವಾನಂದ ಯಲಪ್ಪ, ಅರ್ಚನಾ ಫಕೀರಗೌಡ ಹಟ್ಟಿ, ಮುಳಗುಂದದ ಯಮನೂರಸಾಬ ದೊಡ್ಡಮನಿ, ಸಂಗಮೇಶ ಸಜ್ಜನ, ಹಿರೇಕೊಪ್ಪದ ದೀಪಾ ದಪ್ತಾರದಾರರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲೆ, ಸಾಹಿತ್ಯ, ಸಾಮಾಜಿಕ, ಆಡಳಿತ, ಕೃಷಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ – ಗದಗ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಎ.ಎಸ್. ಮಕಾನದಾರ, ವಿವೇಕಾನಂದ ನಗರದ ಜ್ಯೋತಿ ಎಂ. ಲೋಣಿ, ಮೌಲಾನಾ ಅಲ್ಲಾಭಕ್ಷ್ ಹುಸೇನಸಾಬ ಪಲ್ಲೇದ, ಮುಂಡರಗಿ ತಾಲೂಕಿನ ನಾಗರಹಳ್ಳಿಯ ಬ್ರಹ್ಮಾನಂದ ಕಲಕೇರಿ, ದೇವೇಂದ್ರಪ್ಪ ಬಡಿಗೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಆರ್.ಎಸ್.ಐ. ಗುರುರಾಜ ಮಹಾದೇವಪ್ಪ ಬೂದಿಹಾಳರನ್ನು ಸನ್ಮಾನಿಸಲಾಯಿತು.


