ತಮಿಳು ನಟ ಜಯಂ ರವಿ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಕಾರಣಗಳಿಂದಲೇ ಸುದ್ದಿಯಲ್ಲಿದ್ದಾರೆ. ಪತ್ನಿ ಆರತಿಯೊಂದಿಗಿನ ವಿಚ್ಚೇದನ ಕೋರಿ ಜಯಂ ರವಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನಟ ಸಿನಿಮಾ ನಿರ್ಮಾಪಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಜಯಂ ರವಿ ಜೊತೆ ಸಿನಿಮಾ ಮಾಡುವುದಾಗಿ 80 ದಿನಗಳ ಕಾಲ್‌ಶೀಟ್ ಪಡೆದು ಅನಾವಶ್ಯಕವಾಗಿ ಕಾಲಹರಣ ಮಾಡಿದೆ. ಕಾಲ್‌ಶೀಟ್ ಕೊಟ್ಟ ದಿನಾಂಕದಂದು ಯಾವುದೇ ಸಿನಿಮಾ ಮಾಡಿಲ್ಲ. ಇದಕ್ಕೆ ಪರಿಹಾರವಾಗಿ ನಿರ್ಮಾಪಕರು 9 ಕೋಟಿ ಹಣ ನೀಡಬೇಕು ಎಂದು ಜಯಂ ರವಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ರವಿ ಮೋಹನ್ ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 80 ದಿನಗಳ ಕಾಲ್‌ಶೀಟ್ ನೀಡಿದ್ದರಂತೆ. ಆದ್ರೆ ಕಾಲ್ ಶೀಟ್ ಪಡೆದ ನಿರ್ಮಾಣ ಸಂಸ್ಥೆ ಯಾವುದೇ ಸಿನಿಮಾ ಪ್ರಾರಂಭ ಮಾಡಿಲ್ಲ. ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಕಾಲ್ ಶೀಟ್ ನೀಡಿದ್ದ ಕಾರಣಕ್ಕೆ ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ. ಈ ಮಧ್ಯೆ ಎರಡು ಸಿನಿಮಾಗಳ ಆಫರ್ ಬಂದಿದ್ದರು ಜಯಂ ರವಿ ಒಪ್ಪಿಕೊಂಡಿಲ್ಲವಂತೆ. ಹೀಗಾಗಿ ನಷ್ಟವಾಗಿದ್ದು ನಿರ್ಮಾಪಕರು 9 ಕೋಟಿ ಹಣ ನೀಡಬೇಕು ಎಂದು ಜಯಂ ರವಿ ಆಗ್ರಹಿಸಿದ್ದಾರೆ.


