ಇಂದು ಸಂಭವಿಸಲಿರುವ ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣವು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವದ ಘಟನೆಯಾಗಿದೆ.
ಚಂದ್ರನು ಮನಸ್ಸಿನ ಕಾರಕ ಗ್ರಹನಾಗಿದ್ದು, ಗ್ರಹಣದ ಸಮಯದಲ್ಲಿ ಅದರ ಮೇಲೆ ರಾಹು ಮತ್ತು ಕೇತುಗಳ ಪ್ರಭಾವ ಹೆಚ್ಚಾಗುತ್ತದೆ. ಇದು ಮಾನವನ ಭಾವನೆಗಳು, ಮಾನಸಿಕ ಸ್ಥಿತಿ ಮತ್ತು ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು. ಈ ಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುವುದರಿಂದ, ಆ ರಾಶಿಯವರ ಮೇಲೆ ಮತ್ತು ಇತರ ರಾಶಿಗಳ ಮೇಲೂ ಇದರ ಪರಿಣಾಮ ಕಂಡುಬರಲಿದೆ.
ಈ ಅವಧಿಯಲ್ಲಿ ಕೆಲವು ನಿರ್ದಿಷ್ಟ ರಾಶಿಗಳಿಗೆ ಆರ್ಥಿಕವಾಗಿ ಲಾಭ, ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಕೌಟುಂಬಿಕ ಸುಖ ದೊರೆಯಬಹುದು. ಆದರೆ, ಕೆಲವು ರಾಶಿಗಳಿಗೆ ಮಾನಸಿಕ ಒತ್ತಡ, ವೃತ್ತಿಯಲ್ಲಿ ಅಡೆತಡೆ ಅಥವಾ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಗ್ರಹಣದ ಅವಧಿಯಲ್ಲಿ ದಾನ ಮಾಡುವುದು, ಮಂತ್ರಗಳನ್ನು ಪಠಿಸುವುದು ಮತ್ತು ಧ್ಯಾನ ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಗ್ರಹಣದ ನಕಾರಾತ್ಮಕ ಶಕ್ತಿಗಳನ್ನು ಕಡಿಮೆ ಮಾಡಲು ಈ ಆಧ್ಯಾತ್ಮಿಕ ಅಭ್ಯಾಸಗಳು ಸಹಾಯಕವಾಗುತ್ತವೆ.
ಹಿರಿಯರು ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದು ಮತ್ತು ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷಿದ್ಧವೆಂದು ಪರಿಗಣಿಸುತ್ತಾರೆ. ಬದಲಾಗಿ, ಗ್ರಹಣದ ದೋಷ ನಿವಾರಣೆಗಾಗಿ ಮತ್ತು ಚಂದ್ರ ಗ್ರಹದ ಬಲಕ್ಕಾಗಿ ಚಂದ್ರ ಮಂತ್ರಗಳನ್ನು ಪಠಿಸುವುದು ಹಾಗೂ ಗ್ರಹಣ ಮುಗಿದ ನಂತರ ಸ್ನಾನ ಮಾಡಿ ದೇವರ ಪೂಜೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಒಟ್ಟಿನಲ್ಲಿ, ಈ ಚಂದ್ರ ಗ್ರಹಣ ಕೇವಲ ಖಗೋಳ ವಿದ್ಯಮಾನವಲ್ಲ, ಬದಲಾಗಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಒಂದು ಪ್ರಮುಖ ಜ್ಯೋತಿಷ್ಯ ಘಟನೆಯಾಗಿದೆ.
ಎಲ್ಲೆಲ್ಲಿ ಗ್ರಹಣ ಗೋಚರಿಸುತ್ತೆ?
ಈ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸಲಿದೆ. ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಮೆರಿಕದ ಅನೇಕ ಭಾಗಗಳಲ್ಲಿ ಈ ಚಂದ್ರಗ್ರಹಣವನ್ನು ಕಾಣಬಹುದು. ಇನ್ನು ಮಾರ್ಚ್ 14ರಂದು ಮೊದಲ ಚಂದ್ರಗ್ರಹಣ ಸಂಭವಿಸಿತ್ತು. ಆದರೆ ಮೊದಲ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಿರಲಿಲ್ಲ ಎನ್ನಲಾಗಿದೆ.
ಇಂದು ಈ ಕೆಲಸವನ್ನು ಮಾಡಬಾರದು:
ಗ್ರಹಣಕ್ಕೆ 8 ರಿಂದ 12 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ. ಗ್ರಹಣ ಸಮಯದಲ್ಲಿ ಏನನ್ನೂ ತಿನ್ನಬೇಡಿ. ಆದಾಗ್ಯೂ, ಈ ನಿಯಮವು ಗರ್ಭಿಣಿಯರು, ವೃದ್ಧರು ಮತ್ತು ರೋಗಿಗಳಿಗೆ ಅನ್ವಯಿಸುವುದಿಲ್ಲ. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಕತ್ತರಿ, ಸೂಜಿ ಅಥವಾ ಚಾಕುಗಳಂತಹ ಸಾಧನಗಳಿಂದ ದೂರವಿರಲು ಸೂಚಿಸಲಾಗುತ್ತದೆ. ಇದರಿಂದ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಬೇಯಿಸಿದ ಅಥವಾ ಹಸಿ ಆಹಾರದಲ್ಲಿ ತುಳಸಿ ಎಲೆಗಳನ್ನು ಹಾಕಿ. ಅಲ್ಲದೆ, ಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಿ, ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಪೂಜೆ ಮಾಡಿ. ಗ್ರಹಣದ ಸಮಯದಲ್ಲಿ ಮಲಗಬಾರದು ಮತ್ತು ದೇವಾಲಯದಲ್ಲಿರುವ ಯಾವುದೇ ವಿಗ್ರಹವನ್ನು ಮುಟ್ಟಬಾರದು. ಗ್ರಹಣದ ಸಮಯದಲ್ಲಿ ಪೂಜೆಯನ್ನು ಸಹ ಮಾಡಲಾಗುವುದಿಲ್ಲ.
ಇನ್ನೂ ಕರ್ನಾಟಕದಾದ್ಯಂತ ಇಂದು ರಾತ್ರಿ ರಕ್ತ ಚಂದ್ರಗ್ರಹಣ ಗೋಚರಿಸುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಹಾಗೂ ದೇವಾಲಯ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಯಾವ್ಯಾವ ದೇವಾಲಯ ಮುಚ್ಚಿರುತ್ತೆ?
* ಮೈಸೂರಿನ ಚಾಮುಂಡಿ ದೇವಾಲಯ ರಾತ್ರಿ 9:30ಕ್ಕೆ ಬಂದ್.
* ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ಗುಡಿ ಸಂಜೆ 4ಕ್ಕೆ ಬಂದ್.
* ಕೊಪ್ಪಳದ ಹುಲಗೆಮ್ಮ ದೇವಾಲಯ ಸಂಜೆ 5 ಗಂಟೆಗೆ ಬಂದ್.
* ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟ ಸಂಜೆ 5ಕ್ಕೆ ಕ್ಲೋಸ್.
* ಬೇಲೂರಿನ ಚನ್ನಕೇಶವ ದೇವಸ್ಥಾನ ಮಧ್ಯಾಹ್ನ 3 ಗಂಟೆಗೆ ಮುಚ್ಚುತ್ತದೆ.
* ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಜೆ 5ಕ್ಕೆ ಕ್ಲೋಸ್.
* ಧರ್ಮಸ್ಥಳದ ಮಂಜುನಾಥ ದೇವಾಲಯ ಸಂಜೆ 7 ಗಂಟೆಗೆ ಬಂದ್.
* ಮಂಗಳೂರಿನ ಕದ್ರೋಳಿ ದೇವಾಲಯ ರಾತ್ರಿ 8 ಗಂಟೆಗೆ ಕ್ಲೋಸ್.
* ಮಂಗಳೂರಿನ ಕದ್ರಿ ದೇವಾಲಯ ಸಂಜೆ 6.30ಕ್ಕೆ ಬಂದ್.
* ಬೆಂಗಳೂರಿನ ಗಾಳಿ ಆಂಜನೇಯ ಮಧ್ಯಾಹ್ನ 3 ಗಂಟೆಗೆ ಬಂದ್.
* ಬೆಂಗಳೂರಿನ ಮೆಜೆಸ್ಟಿಕ್ನಲ್ಲಿನ ಅಣ್ಣಮ್ಮ ದೇವಾಲಯ 8ಕ್ಕೆ ಬಂದ್.
* ಆರ್ಆರ್ ನಗರದ ರಾಜರಾಜೇಶ್ವರಿ ದೇವಾಲಯ ರಾತ್ರಿ 8ಕ್ಕೆ ಬಂದ್.
* ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಜೆ 6ಕ್ಕೆ ಬಂದ್.
* ಗವಿ ಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ಗಂಟೆಗೆ ಬಂದ್.
* ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12.20ಕ್ಕೆ ಬಂದ್.
* ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7 ಗಂಟೆಗೆ ಕ್ಲೋಸ್.
* ಚಾಮರಾಜಪೇಟೆಯ ಬಂಡೆ ಮಹಾಕಾಳಿ ರಾತ್ರಿ 7.30ಕ್ಕೆ ಬಂದ್.
* ಕುದ್ರೋಳಿ ದೇಗುಲ (ಮಂಗಳೂರು) ರಾತ್ರಿ 8 ಗಂಟೆಗೆ ಬಂದ್.
* ಕದ್ರಿ ದೇಗುಲ (ಮಂಗಳೂರು) ಸಂಜೆ 6.30 ಗಂಟೆಗೆ ಬಂದ್.
* ಘಾಟಿ ಸುಬ್ರಹ್ಮಣ್ಯ (ಚಿಕ್ಕಬಳ್ಳಾಪುರ) ಸಂಜೆ 4.00 ಗಂಟೆಗೆ ಬಂದ್.
* ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ) ಮಧ್ಯಾಹ್ನ 12.30 ಗಂಟೆಗೆ ಬಂದ್.
* ಚನ್ನಕೇಶವ ದೇಗುಲ (ಬೇಲೂರು) ಮಧ್ಯಾಹ್ನ 3 ಗಂಟೆಗೆ ಬಂದ್.
* ಚಲುವನಾರಾಯಣಸ್ವಾಮಿ, (ಮೇಲುಕೋಟೆ) ಮಧ್ಯಾಹ್ನ 1:00 ಗಂಟೆಗೆ ಬಂದ್.


