ಡ್ರ್ಯಾಗನ್‌ ಫ್ರೂಟ್​ ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

0
Spread the love

ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಫ್ರೂಟ್ ಎಲ್ಲೆಡೆ ಸುಲಭವಾಗಿ ಲಭ್ಯವಾಗುತ್ತಿದ್ದು, ಅದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳ ಕಾರಣ ಜನಪ್ರಿಯತೆ ಪಡೆಯುತ್ತಿದೆ. ಅಮೇರಿಕಾ ಮೂಲದ ಈ ಉಷ್ಣವಲಯದ ಹಣ್ಣು ಪಿಟಾಯಾ ಅಥವಾ ಪಿಟಾಹಯಾ ಎಂಬ ಹೆಸರಿನಿಂದಲೂ ಪ್ರಸಿದ್ಧ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಿದ್ದಾರೆ.

Advertisement

ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ C, ವಿಟಮಿನ್ B2, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸೇರಿದಂತೆ ಅನೇಕ ಅಗತ್ಯ ಖನಿಜಗಳು ದೊರೆಯುತ್ತವೆ. ಜೊತೆಗೆ ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಆಮ್ಲಗಳಂತಹ ಉತ್ಕರ್ಷಣ ನಿರೋಧಕಗಳು ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯಕವಾಗುತ್ತವೆ. ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಹೃದಯ ಆರೋಗ್ಯಕ್ಕೆ ಸಹಾಯಕ
ಡ್ರ್ಯಾಗನ್ ಫ್ರೂಟ್ ನಲ್ಲಿ ಇರುವ ಫೈಬರ್, ಪೊಟ್ಯಾಸಿಯಮ್ ಹಾಗೂ ಉತ್ಕರ್ಷಣ ನಿರೋಧಕಗಳು ಉರಿಯೂತ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಸುಧಾರಣೆಗೆ ನೆರವಾಗುತ್ತವೆ. ಕೆಲವು ಅಧ್ಯಯನಗಳು ಈ ಹಣ್ಣು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ ಎಂದು ಸೂಚಿಸುತ್ತವೆ.

ಮಲಬದ್ಧತೆ ಕಡಿಮೆ ಮಾಡುತ್ತದೆ
ನಾರಿನಾಂಶ ಸಮೃದ್ಧವಾಗಿರುವುದರಿಂದ ಡ್ರ್ಯಾಗನ್ ಫ್ರೂಟ್ ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ ಇರುವ ಉರಿಯೂತ ನಿರೋಧಕ ಗುಣಗಳು ಊತ ಕಡಿಮೆ ಮಾಡುವಲ್ಲಿ ಮತ್ತು ಸಂಧಿವಾತದ ಲಕ್ಷಣಗಳನ್ನು ತಗ್ಗಿಸುವಲ್ಲಿ ನೆರವಾಗುತ್ತವೆ.

ಚರ್ಮದ ಆರೋಗ್ಯ ಸುಧಾರಣೆ
ವಿಟಮಿನ್ C ಮತ್ತು ಇತರ ಉತ್ಕರ್ಷಣ ನಿರೋಧಕಗಳಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಯಮಿತ ಸೇವನೆಯು ಚರ್ಮದ ಹಾನಿ ತಡೆದು, ವಯೋಸಹಜ ಬದಲಾವಣೆಗಳನ್ನು ನಿಧಾನಗೊಳಿಸಿ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ತಜ್ಞರ ಸಲಹೆಯಂತೆ, ಪೋಷಕಾಂಶಗಳ ಬೆಂಬಲ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ಡ್ರ್ಯಾಗನ್ ಫ್ರೂಟ್ ಅನ್ನು ದಿನನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳುವುದು ಬಹಳ ಉಪಕಾರಿ.


Spread the love

LEAVE A REPLY

Please enter your comment!
Please enter your name here