ಶಿವಮೊಗ್ಗ: ಈ ದೇಶದ ರಾಷ್ಟ್ರಭಕ್ತ ಮುಸಲ್ಮಾನರ ಬಗ್ಗೆ ನಾನು ಹೇಳಿಕೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಾಂಗ್ಲಾ ಜೈಲಿನಲ್ಲಿರುವ ಸಂತನ ಬಿಡುಗಡೆಗೆ ಪ್ರಯತ್ನಿಸಿದ ವಕೀಲನ ಮೇಲೆ ತೀವ್ರ ಹಲ್ಲೆ ನಡೆದಿದೆ. ಇದನ್ನು ಖಂಡಿಸಿದ್ದೆ.
ಬಾಂಗ್ಲಾಮುಸಲ್ಮಾನರ ಬಗ್ಗೆ ಮಾತನಾಡಿದರೆ ಕಾಂಗ್ರೆಸ್, ಎಸ್‌ಪಿ ಹಾಗೂ ಎಸ್‌ಡಿಪಿಐ ಅವರಿಗೆ ಏನು ಸಮಸ್ಯೆ. ನಾನು ಈ ರಾಕ್ಷಸಿ ಕೃತ್ಯವನ್ನು ಖಂಡಿಸುತ್ತೇವೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಕೇಸ್‌ಗಳಿಗೆ ಹೆದರುವುದಿಲ್ಲ. ಈ ದೇಶದ ರಾಷ್ಟ್ರಭಕ್ತ ಮುಸಲ್ಮಾನರ ಬಗ್ಗೆ ನಾನು ಹೇಳಿಕೆ ನೀಡಿಲ್ಲ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನಾನು ನೀಡಿರುವ ಹೇಳಿಕೆ ನೋಡಲಿ. ಅವರು ಯಾರನ್ನೊ ತೃಪ್ತಿಪಡಿಸಲು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಯಾರು ಪ್ರಚೋದನೆ ನೀಡಿದ್ದಾರೆ ಎಂಬುದು ತಿಳಿದಿಲ್ಲ.ದೇಶ, ಧರ್ಮದ್ರೋಹ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ ಎಂದರು.


