ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ತಾಲೂಕಾ ಘಟಕದ ಚುನಾವಣೆಯಲ್ಲಿ ಮಹೇಶ ಚಂದ್ರಶೇಖರಪ್ಪ ಕೋಟಿ ಗದಗ ತಾಲೂಕಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಾಧ್ಯಕ್ಷ ಸ್ಥಾನಕ್ಕೆ ಮಹೇಶ ಕೋಟಿ ಸೇರಿದಂತೆ ಚನ್ನಬಸಪ್ಪ ಅಕ್ಕಿ ಹಾಗೂ ಮೋಹನ ದೊಡ್ಡಕುಂಡಿ ನಾಮಪತ್ರ ಸಲ್ಲಿಸಿದ್ದರು. ಅವಿರೋಧ ಆಯ್ಕೆಗೆ ಹಿರಿಯ ಸಮಕ್ಷಮ ನಡೆದ ಸೌಹಾರ್ದ ಚರ್ಚೆಯಲ್ಲಿ ಎರಡು ಅವಧಿಯನ್ನು ನಿಗದಿಗೊಳಿಸಿ ಮಹೇಶ ಕೋಟಿ ಅವರನ್ನು ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರನ್ನಾಗಿ ಚನ್ನಬಸಪ್ಪ ಅಕ್ಕಿ ಹಾಗೂ ಮೋಹನ ದೊಡ್ಡಕುಂಡಿ ಅವರನ್ನು ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಮಾಡಲು ನಿರ್ಧರಿಸಲಾಯಿತು. ಮಹೇಶ ಕೋಟಿ ಅವರು ಮಹಾಸಭಾದ ಜಿಲ್ಲಾ ಕೋಶಾಧ್ಯಕ್ಷರಾಗಿ, ಕೃತಪುರ ಅರ್ಬನ್ ಸೌಹಾರ್ದ ಸಹಕಾರಿ ನಿ. ಗದಗ ಇದರ ಹಾಲಿ ಅಧ್ಯಕ್ಷರಾಗಿ, ಪ್ರಾಣಿ ದಯಾ ಸಂಘದ ಅಧ್ಯಕ್ಷರಾಗಿ, ಶ್ರೀ ಮಹಾವೀರ ಗೋ ಸೇವಾ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಸದ್ಯ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


