ಮೋದಿ ಮುಂದಿನ ವರ್ಷ ಪಿಎಂ ಆಗಿ ಇರುವುದಿಲ್ಲ: ಸಂತೋಷ್ ಲಾಡ್!

0
Spread the love

ಧಾರವಾಡ:- ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ನರೇಂದ್ರ ಮೋದಿ ಅವರು ಇನ್ನೊಂದು ವರ್ಷ ಮಾತ್ರ ಪ್ರಧಾನಿಯಾಗಿರುತ್ತಾರೆ. ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಾರೆ. ಮೋದಿ ಅವರು ಮುಂದಿನ ವರ್ಷ ಪಿಎಂ ಆಗಿ ಇರುವುದಿಲ್ಲ. ಇದನ್ನು ಬಿಜೆಪಿಯವರು ಯಾರೂ ಹೇಳಿಕೊಳ್ಳುತ್ತಿಲ್ಲ. ಆದರೆ, ಅಲ್ಲಲ್ಲಿ ಸ್ವಲ್ಪ ಬಾಯಿ ಬಿಡುತ್ತಿದ್ದಾರೆ.

ಮೊನ್ನೆಯಷ್ಟೇ ಪಿಯೂಷ್ ಗೋಯಲ್ ಮಾತನಾಡಿ, ಸ್ಕಿಲ್ ಇಂಡಿಯಾ, ಸ್ಕಿಲ್ ಡೆವಲಪ್ ಆಗಿಲ್ಲ ಎಂದಿದ್ದಾರೆ. ಮೋದಿ ಅವರ ವಿರುದ್ಧ ನನಗೆ ವೈಯಕ್ತಿಕ ದ್ವೇಷ ಇಲ್ಲ. ಈ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಇರಬೇಕು. ಮೋದಿ ಅವರು 11 ವರ್ಷದಿಂದ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ ಏನೂ ಬೆಳವಣಿಗೆ ಆಗಿಲ್ಲ. ಹೀಗಾಗಿ ನಿತಿನ್ ಗಡ್ಕರಿ ಪಿಎಂ ಆಗಲಿ ಎಂದು ಅವರ ಪಕ್ಷದವರೇ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಒಂದು ಅವಕಾಶ ಸಿಗಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here