ಗುಜರಾತ್ ವಿರುದ್ಧ ಮುಂಬೈಗೆ ರೋಚಕ ಗೆಲುವು: IPLನಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ!

0
xr:d:DAFJocAJvCE:5443,j:6593679240668423870,t:23111613
Spread the love

IPL ಸೀಸನ್‌ 18 ಎಲಿಮಿನೇಟರ್ ಪಂದ್ಯ ಕೂಡ ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ತಂಡ ಗುಜರಾತ್ ಟೈಟಾನ್ಸ್ಗೆ ಬಿಗ್ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದೆ. ಟಾರ್ಗೆಟ್ ಜೊತೆಗೆ ಉತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ ಮುಂಬೈ ಇಂಡಿಯನ್ಸ್‌ 20 ರನ್ಗಳಿಂದ ಗೆದ್ದು ಬೀಗಿದೆ.

Advertisement

ಇನ್ನೂ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 4 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಸೀಸನ್ನಲ್ಲಿ ನಾಲ್ಕನೇ ಬಾರಿಗೆ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ ಸಾಧನೆ ಮಾಡಿದರು. ಗುಜರಾತ್ ವಿರುದ್ಧ ರೋಹಿತ್ ಶತಕ ಗಳಿಸಬಹುದಿತ್ತು ಆದರೆ ರನ್ ರೇಟ್ ಹೆಚ್ಚಿಸುವ ಪ್ರಯತ್ನದಲ್ಲಿ, ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ರಶೀದ್ ಖಾನ್ಗೆ ಕ್ಯಾಚ್ ನೀಡಿದರು.

ಐಪಿಎಲ್ ಪ್ಲೇಆಫ್ನಲ್ಲಿ ರೋಹಿತ್ ಶರ್ಮಾ ಮೊದಲ ಬಾರಿಗೆ ಇಷ್ಟು ದೊಡ್ಡ ಇನ್ನಿಂಗ್ಸ್ ಆಡಿದರು. 81 ರನ್ಗಳು ಪ್ಲೇಆಫ್ನಲ್ಲಿ ಅವರ ಅತ್ಯಧಿಕ ಇನ್ನಿಂಗ್ಸ್ ಆಗಿದೆ. ಇಷ್ಟೇ ಅಲ್ಲ, ಪ್ಲೇಆಫ್ನಲ್ಲಿ ಮುಂಬೈ ಇಂಡಿಯನ್ಸ್ಗೆ ಇದು ಅತ್ಯುತ್ತಮ ಇನ್ನಿಂಗ್ಸ್ ಕೂಡ ಆಗಿದೆ. ಇದಕ್ಕೂ ಮೊದಲು ದಾಖಲೆ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು, ಅವರು 2019 ರಲ್ಲಿ ಚೆನ್ನೈ ವಿರುದ್ಧ ಅಜೇಯ 71 ರನ್ ಗಳಿಸಿದ್ದರು.

ಅರ್ಧಶತಕದ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ 7000 ರನ್ಗಳನ್ನು ಪೂರ್ಣಗೊಳಿಸಿದರು. ವಿರಾಟ್ ಕೊಹ್ಲಿ ನಂತರ ಐಪಿಎಲ್ನಲ್ಲಿ 7000 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ರೋಹಿತ್ ಶರ್ಮಾ. ಇದಲ್ಲದೆ, ರೋಹಿತ್ ಶರ್ಮಾ ಐಪಿಎಲ್ನಲ್ಲಿ 300 ಸಿಕ್ಸರ್ಗಳನ್ನು ಪೂರ್ಣಗೊಳಿಸಿದ್ದು, ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here