ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬೃಹತ್ ಬಂಡವಾಳ ಹೂಡಿ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟ ಬಿಎಸ್ಪಿಎಲ್ ವಿರುದ್ಧ ಫೆ. 24ರಂದು ಕೊಪ್ಪಳದ ಜನರು ಜಾಗೃತರಾಗಿ ಈ ವಿಸ್ತರಣೆ ಅನುಮತಿ ರದ್ದು ಮಾಡಬೇಕೆಂದು ಬೀದಿಗಿಳಿದು ಕೊಪ್ಪಳ ಭಾಗ್ಯನಗರ ಬಂದ್ ಮಾಡಿ ಪ್ರತಿಭಟಿಸಿದ್ದು, ಅದೇ ಹೋರಾಟವನ್ನು ಮುಂದುವರೆಸಲಾಗಿದೆ.
ಬಲ್ಡೋಟ ಮತ್ತು ಇತರೆ ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 13ನೇ ದಿನದಲ್ಲಿ ಶ್ರೀ ಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಮತ್ತು ಇದರ ಮಹಿಳಾ ಘಟಕ ಪದಾಧಿಕಾರಿಗಳು ಹಾಗೂ ಸದಸ್ಯರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಿದರು. ವಿಗುಬಚಾಟ್ರ ಮಹಿಳಾ ನಾಯಕಿ ಸೌಮ್ಯ ನಾಲವಾಡ ಅವರು ನಗರದ ಸ್ವಚ್ಛ ಪರಿಸರವನ್ನು ಹಾಳು ಮಾಡಲು ಬಂದ, ವಿಷ ಉಗುಳುವ ಕಾರ್ಖಾನೆಗಳು ಬೇಡ ಎಂದು ಈ ಭಾಗದ ಆರಾಧ್ಯ ದೈವ ಗವಿಸಿದ್ದೇಶ್ವರರು ಬೀದಿಗೆ ಬಂದಾಗ ಸಾವಿರಾರು ಮಹಿಳೆಯರು ಅವರನ್ನು ಬೆಂಬಲಿಸಿ ಹೋರಾಟಕ್ಕೆ ನಿಂತರು. ಆ ಸಂದರ್ಭದಲ್ಲಿ ಕುಹಕದ ಮಾತನಾಡಿದವರು ಸಹ ನಮ್ಮಲ್ಲಿದ್ದಾರೆ. ಅಂತವರಿಗೆ ಮತ್ತು ನಮ್ಮ ಬದುಕಿಗೆ ಈ ಹೋರಾಟ ಗೆದ್ದು ತೋರಿಸಲು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಹೋರಾಟದ ಕಣಕ್ಕಿಳಿಯಲು ಛಲ ತೊಡುತ್ತೇವೆ ಎಂದರು.
ಗವಿಶ್ರೀಗಳ ಮಾತಿಗೆ ಗೌರವಿಸಿ ಕಾರ್ಖಾನೆ ವಿಸ್ತರಣೆಗೆ ಶಾಶ್ವತ ತಡೆ ಆದೇಶ ತರುವ ತನಕ ಬಿಡುವುದಿಲ್ಲ ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ ತಾಕೀತು ಮಾಡಿದರು. ಜೊತೆಗೆ ಪ್ರಕೃತಿ ಕಾಳಜಿಯ ಶರಣರ ವಚನ ಗಾಯನ ಮಾಡಿದ್ದು ವಿಶೇಷವಾಗಿತ್ತು.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಹಿಳೆಯರು ಹೋರಾಟಕ್ಕೆ ಹೆಚ್ಚು ಹೆಚ್ಚು ಧುಮುಕಬೇಕು ಎಂದರು.
ಶ್ರೀ ವಿಗುಬಚಾಟ್ರ ಅಧ್ಯಕ್ಷ ಗುಡದಪ್ಪ ಹಡಪದ, ಎಂ. ಬಸವರಾಜಪ್ಪ, ಗಾಳೆಪ್ಪ ಕಡೆಮನಿ, ಶಿವಸಂಘಪ್ಪ ವಣಗೆರಿ, ಶಿವಪುತ್ರಪ್ಪ ಲಕ್ಕುಂಡಿ, ಎಂ.ಎಸ್. ಬೀರಲದಿನ್ನಿ, ಅರ್ಚನಾ ಸಸಿಮಠ, ಮಂಜುಳಾ ಪಾಟೀಲ್, ಸಂಗಪ್ಪ ಕೊಟ್ರಪ್ಪ ವಾರದ, ಕಾವ್ಯಾ ಗಡಾದ, ಸುಶೀಲಾ ರಾಂಪೂರ, ಜ್ಯೋತಿ ಕದ್ರಳ್ಳಿಮಠ, ಈರಮ್ಮ ಕೊಳ್ಳಿ, ಜ್ಯೋತಿ ಎಸ್. ಬಳ್ಳೊಳ್ಳಿ, ಶರಣಮ್ಮ ಹೆಚ್. ಕಲ್ಮಂಗಿ, ಶಿಲ್ಪಾ ಆರ್. ಸಸಿಮಠ, ವೀರಭದ್ರಪ್ಪ ನಂದ್ಯಾಲ, ರೂಪಾ ಎಸ್. ಶಿಂಗ್ರಿ, ವಿಶಾಲಾಕ್ಷಿ ಸಸಿಮಠ, ಉಮಾ ಕೊಪ್ಪಳ, ಮಲ್ಲಪ್ಪ ಕಡಗದ, ರವಿ ಕಾಂತನವರ, ಮರುಳಸಿದ್ಧೇಶ್ವರ, ಶರಣಬಸನಗೌಡ ಪಾಟೀಲ, ಶಿವಪುತ್ರಪ್ಪ ಲಕ್ಕುಂಡಿ, ಬಾಪುಗೌಡ ಪಾಟೀಲ್, ಮಲ್ಲಪ್ಪ ಕಡಗದ, ಗದಿಗೆಪ್ಪ ಅಮಾತಿ, ಎಸ್.ಬಿ. ರಾಜೂರ, ಬಾಳಮ್ಮ ಮಾಳೆಕೊಪ್ಪ, ಪರಿಮಳ ವಿ.ಎಚ್., ಶಂಭುಲಿಂಗಪ್ಪ ಹರಗೇರಿ, ಶಿವಬಸಯ್ಯ ವೀರಾಪೂರ, ಮುರುಗೇಶ, ಶಾಂತಯ್ಯ ಅಂಗಡಿ, ಗುರುರಾಜ, ಈರಮ್ಮ ಕೊಳ್ಳಿ ಧರಣಿಯಲ್ಲಿ ಭಾಗವಹಿಸಿದ್ದರು.
ಸಾಹಿತಿ ಡಿ.ಎಂ. ಬಡಿಗೇರ, ಎ.ಎಂ. ಮದರಿ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮೂಕಪ್ಪ ಮೇಸ್ತಿ ಬಸಾಪುರ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್. ಮಾವಿನಮಡು, ಭೀಮಪ್ಪ ಯಲಬುರ್ಗಾ, ಗವಿಸಿದ್ದಪ್ಪ ಹಲಿಗಿ, ರಣದಪ್ಪ ಕವಲೂರು, ಶಿವಪ್ಪ ಹಡಪದ ಧರಣಿಯ ನೇತೃತ್ವ ವಹಿಸಿದ್ದರು.


