Home Blog Page 3

ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ರೋಣ ತಾಲೂಕಿನ ಜೆಡಿಎಸ್ ಅಧ್ಯಕ್ಷರಾಗಿ ಶಿವಕುಮಾರ ಶಿರಹಟ್ಟಿ ನೇಮಕಗೊಂಡಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವೈ. ಮುಧೋಳ ಈ ನೇಮಕಾತಿಯನ್ನು ಮಾಡಿದ್ದು, ಸೋಮವಾರ ಕೋಡಿಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಧೋಳ, ಜೆಡಿಎಸ್ ಪಕ್ಷದ ರಾಷ್ಟಾçಧ್ಯಕ್ಷ ಎಚ್.ಡಿ. ದೇವೇಗೌಡರ ಬಡವರ ಹಿತವನ್ನು ಕಾಯುತ್ತ ಬಂದಿದ್ದಾರೆ. ಈ ಪಕ್ಷದಲ್ಲಿ ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಎಂದಿಗೂ ಯುವಕರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ರೋಣ ತಾಲೂಕಿಗೆ ನೇಮಕಗೊಂಡಿರುವ ಎಲ್ಲ ಪದಾಧಿಕಾರಿಗಳು ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿ ಪಕ್ಷವನ್ನು ಬಲಪಡಿಸಬೇಕೆಂದು ತಿಳಿಸಿದರು.

ವರಿಷ್ಠ ಮಂಡಳಿಯ ಆದೇಶದ ಮೇರೆಗೆ ನಾವು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಯವರನ್ನು ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಲೇ ಬೇಕಾದ ಕಾರ್ಯ ವಹಿಸಿದ್ದಾರೆ. ಈ ಮೂಲಕ ಈ ಸಾರೆಯೂ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಲು ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ. ಈ ದಿಶೆಯಲ್ಲಿಯೂ ನಿಮ್ಮ ಕಾರ್ಯ ಚುರುಕಿನಿಂದ ಸಾಗಬೇಕಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈರ್ವರೂ ಅಭ್ಯರ್ಥಿಗಳ ಜಯಕ್ಕೆ ಕಾರಣರಾಗಬೇಕೆಂದು ಮುಧೋಳ ನೂತನ ಪದಾಧಿಕಾರಿಗಳಿಗೆ ತಿಳಿಸಿದರು.

ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಎಸ್.ಸಿ. ಘಟಕದ ಅಧ್ಯಕ್ಷ ರಘು ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿ ಪರಶುರಾಮ ವಾಲ್ಮೀಕಿ, ತಾಲೂಕಾ ಯುವ ಘಟಕದ ಅಧ್ಯಕ್ಷ ವೀರೇಶ ಆರಾಧ್ಯಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೀರಪ್ಪ ಜಿರ್ಲ, ಗಜೇಂದ್ರಗಡ ತಾಲೂಕಾ ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಬಾದಶಹಾ ಬಾಗವಾನ, ಕೊಚಲಾಪುರ ಗ್ರಾಮ ಅಧ್ಯಕ್ಷ ಬುಡ್ಡಾಸಾಹೇಬ ಚಕೇರಿ, ನರೇಗಲ್ಲ ಹೋಬಳಿ ಅಧ್ಯಕ್ಷ ಯಲ್ಲಪ್ಪ ಹೊಸಮನಿ, ಕಾರ್ಯಾಧ್ಯಕ್ಷ ಅಶೋಕ ಬೆಟಗೇರಿ, ರೋಣ ತಾಲೂಕಾ ಸಂಘಟನಾ ಕಾರ್ಯದರ್ಶಿ ಹಾಲಪ್ಪ ಮರಲಿಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು.

ತಾಲೂಕಾ ಅಧ್ಯಕ್ಷ ಶಿವಕುಮಾರ ಶಿರಹಟ್ಟಿ ಮಾತನಾಡಿ, ನಿಮ್ಮ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಯುವಕರನ್ನು ಕರೆ ತಂದು ಪಕ್ಷಕ್ಕೆ ಬಲ ತುಂಬುತ್ತೇವೆ ಎಂದರು.

ಕನ್ನಡ ವಿಧೇಯಕ ಕಟ್ಟುನಿಟ್ಟಾಗಿ ಜಾರಿಗೊಳಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60ರಷ್ಟು ಕನ್ನಡವನ್ನು ಬಳಸಬೇಕು ಎಂದು ವಿಧೇಯಕವನ್ನು ಜಾರಿಗೊಳಿಸಿದೆ. ಗದಗ ತಾಲೂಕಿನಲ್ಲಿ ಸದರಿ ವಿಧೇಯಕ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕು ಘಟಕದ ವತಿಯಿಂದ ಗದಗ ತಹಸೀಲ್ದಾರರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗದಗ ತಾಲೂಕು ಘಟಕದ ಅಧ್ಯಕ್ಷ ದಾವಲಸಾಬ ಎಂ.ತಹಸೀಲ್ದಾರ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ನಡಗೇರಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮೇಟಿ, ಮುಖಂಡರಾದ ವಿನಾಯಕ ಬದಿ, ತೌಸಿಫ ಢಾಲಾಯತ, ಹುಸೇನ ಅಕ್ಕಿ, ಸಲೀಮ ಶಿರವಾರ, ಇಸಾಕ ನದಾಫ, ಮುಬಾರಕ ಮುಲ್ಲಾ, ಆಝಾದ ನಾಗನೂರ, ಯಲ್ಲೇಶ ಬಳ್ಳಾರಿ, ಸದ್ದಾಂ ಹುಸೇನ ತಹಸೀಲ್ದಾರ, ಶಬ್ಬೀರ ಹಂಜಗಿ, ಗೌಸುಸಾಬ ಶಿರಹಟ್ಟಿ, ರವಿ ಮಲ್ಲಾಡ, ಇಮ್ರಾನ್ ಮುಂತಾದವರು ಉಪಸ್ಥಿತರಿದ್ದರು.

ಶರಣರ ಬದುಕು ಜೀವಜಲವಾಗಲಿ

0

ವಿಜಯಸಾಕ್ಷಿ ಸುದ್ದಿ, ಗದಗ : ಮಂದಿರ, ಮಸೀದಿ, ಚರ್ಚ್ಗಳನ್ನು ಕಟ್ಟಿದರೆ ನಾಳೆ ಅವು ಬೀಳುತ್ತವೆ. ಬಿದ್ದ ಮೇಲೆ ಅವುಗಳನ್ನು ಮೊದಲಿಗಿಂತ ಚೆನ್ನಾಗಿ ಮರು ನಿರ್ಮಿಸಬಹುದು. ಆದರೆ, ಮಾನವನಲ್ಲಿರುವ ಮಾನವೀಯತೆಯ ಮಂದಿರ ಬಿದ್ದರೆ ಅದನ್ನು ಮತ್ತೆ ಕಟ್ಟಲು ಸಾಧ್ಯವಿಲ್ಲ ಎಂದು ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಫಕ್ಕೀರೇಶ್ವರ ಶಿವಾಚಾರ್ಯರ ಮಹಾಸ್ವಾಮೀಜಿ ಹೇಳಿದರು.

ಅವರು ಗದಗ ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ದೇವರ ಹಾಗೂ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವೀಯತೆ ಅನ್ನುವ ಮಂದಿರವೇ ಶ್ರೇಷ್ಠ ಮಂದಿರವಾಗಬೇಕು. ಜಾತಿಯಿಂದ ದೂರ ಇದ್ದು ನೀತಿಯಿಂದ ಬಾಳಬೇಕು. ಅಂತೆಯೇ ಶರಣ-ಶರಣೆಯರು ಹಾಗೆಯೇ ಬದುಕಿದರು. ಅಂತವರ ಜೀವನ, ಅವರ ಬದುಕು ನಮ್ಮ ಜೀವನಕ್ಕೆ ಜೀವಜಲವಾದಾಗ ಅಂತರಂಗದ ದೀಪ ಬೆಳಗುತ್ತದೆ. ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನ ಕೇಳಿ ಎಲ್ಲರೂ ಕೂಡ ಶರಣರಾಗಲು ಸಾಧ್ಯವೆಂದು ಹೇಳಿದರು.

ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರೀ ಸಿದ್ದಾಪುರವರು ಮಾತನಾಡಿ, ಗುಡ್ಡಾಪುರದ ದಾನಮ್ಮ ದೇವಿಯ ಪ್ರವಚನದಲ್ಲಿ ಮನುಷ್ಯ ಜೀವನದಲ್ಲಿ ಬದುಕಿಗೆ ಬೆಳಕಾಗುವಂತಹ ಎರಡು ಒಳ್ಳೆಯ ಮಾತನ್ನು ಕೇಳಬೇಕು.

ರಾಮಕೃಷ್ಣ ಪರಮಹಂಸರ ಸಂಘದಿಂದ, ಅವರ ಒಳ್ಳೆಯ ಮಾತಿನಿಂದ ನರೇಂದ್ರಸ್ವಾಮಿ ವಿವೇಕಾನಂದರಾದರು. ಅಂತೆಯೇ ಗುರುಗೋವಿಂದರ ಮಾತಿನಿಂದ ಷರೀಫ್ ಸಾಹೇಬರು ಶಿವಯೋಗಿಯಾದರು. ಹಾನಗಲ್ ಕುಮಾರ ಶಿವಯೋಗಿಯವರ ಮಾತಿನಿಂದ ಪಂ.ಪಂಚಾಕ್ಷರಿ ಗವಾಯಿಗಳು ಪ್ರಪಂಚದ ಅಂಧ-ಅನಾಥ, ದೀನ-ದಲಿತರ ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದು ಅವರ ಬಾಳ ಬೆಳಗಿ ಸಂಗೀತ ಲೋಕದ ಋಷಿಯಾದರು. ಹಾಗೆ ದಾನಮ್ಮದೇವಿ, ಗುರು ಶಾಂತವೀರ ಮಹಾಸ್ವಾಮಿಗಳ ಸೇವೆ ಮಾಡಿ ಅವರ ಎರಡು ಮಾತಿನಿಂದ ಶರಣೆ ಆದರು ಎಂದರು.

ಕಲಬುರಗಿಯ ಸಂಗಮೇಶ್ವರ ಗವಾಯಿ ಪಾಟೀಲ ಅವರಿಂದ ಸಂಗೀತ ಸೇವೆ ಜರುಗಿತು. ತೋಂಟದಾರ್ಯ ಕರಡಿಕಲ್ ತಬಲಾ ಸಾಥ್ ನೀಡಿದರು. ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಗುರು-ಹಿರಿಯರು ಉಪಸ್ಥಿತರಿದ್ದರು.

ದಾನಮ್ಮನ ಬದುಕಿನ ಧ್ಯಾನದ ಬೆಳಕು ನಮ್ಮೆಲ್ಲರ ಹೃದಯಗಳನ್ನು ಬೆಳಗುವಂತಾಗಲಿ. ನಿತ್ಯ ನಡೆಯುವ ಪ್ರವಚನ ಕೇಳಿ ನಮ್ಮ ಮನಸ್ಸಿನ ಪಾಪಗಳು ಸುಟ್ಟು ಹೋಗುತ್ತವೆ. ಅಕ್ಕಮಹಾದೇವಿ ಒಳ್ಳೆಯ ಮಾತುಗಳು ಹೇಳುವಂತವರ ಸಂಗವನ್ನೇ ಕರುಣಿಸು ಚೆನ್ನಮಲ್ಲಿಕಾರ್ಜುನ ಎಂದು ಪ್ರಾರ್ಥನೆ ಮಾಡಿದ್ದಾಳೆ. ಅಕ್ಕಮಹಾದೇವಿಯಂತೆ ನಮ್ಮೆಲ್ಲರ ಜೀವನ ಆಗಲಿ ಎಂದು ಪ್ರವಚನಕಾರ ಶಿವಲಿಂಗಯ್ಯಶಾಸ್ತಿç ಸಿದ್ದಾಪುರ ಆಶಯ ವ್ಯಕ್ತಪಡಿಸಿದರು.

ಸಂಭ್ರಮದ ಹೋಳಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದಲ್ಲಿ ಸೋಮವಾರ ಕಾಮಣ್ಣ ಹಾಗೂ ರತಿದೇವಿಯ ಮೂರ್ತಿಗಳನ್ನು ವಿಶೇಷ ಪೂಜಾ ಕೈಂಕರ್ಯ ನಂತರ ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಕಾಮ ದಹನದ ಜರುಗಿತು.

ಪಟ್ಟಣದ ನಾಗರಿಕರು ಬೆಳಿಗ್ಗೆಯಿಂದ ಬಣ್ಣದಾಟದಲ್ಲಿ ತೊಡಗಿದ್ದರು. ಮಹಿಳೆಯರು, ಹಿರಿಯ ನಾಗರಿಕರು ತಮ್ಮ ತಮ್ಮ ಓಣಿಯಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಿದರು.

ಪಟ್ಟಣದ ಚಿಂದಿಪೇಟಿ ಓಣಿಯಲ್ಲಿ ವಾಹನದಲ್ಲಿ ಕಾಮನ ಪ್ರತಿಕೃತಿ ನಿರ್ಮಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಗ್ಗಹಲಗಿ ಬಾರಿಸುತ್ತಾ ಪರಸ್ಪರ ಬಣ್ಣವನ್ನು ಹಚ್ಚುತ್ತಾ, ಮೇರವಣಿಗೆ ಉದ್ದಕ್ಕೂ ಮಕ್ಕಳು ರಗ್ಗಹಲಗಿ ನಾದಕ್ಕೆ ಹೆಜ್ಜೆ ಹಾಕಿದರು.

ಜಿಂದಾಶ್ಯಾವಲಿ ಉರುಸು ಇಂದು

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಪವಾಡ ಪುರುಷ ಹಜರತ್ ಜಿಂದಾಶ್ಯಾವಲಿಯವರ 56ನೇ ವರ್ಷದ ಉರುಸು ಉತ್ಸವ ಮಾರ್ಚ್ 2 ರಂದು ಮುಸ್ಲಿಮ್ ಜಮಾತ ಅಂಜುಮನ್ ಏ ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಜರುಗಲಿದೆ.

ಲಕ್ಕುಂಡಿ ಮತ್ತು ಕದಾಂಪೂರ ಗ್ರಾಮದ ಮಧ್ಯೆ ಇರುವ ಜಿಂದಾಶ್ಯಾವಲಿ ದರ್ಗಾದ ಗದ್ದುಗೆ ಮೇಲೆ ಬೆಳಿಗ್ಗೆ ಪುಷ್ಪ ಗುಚ್ಛ ಸಮರ್ಪಿಸುವ ಮೂಲಕ ಉರುಸು ಕಾರ್ಯಕ್ರಮ ಆರಂಭವಾಗಲಿದೆ. ರಾತ್ರಿ 9.30ಕ್ಕೆ ವಿಧಿ ವಿಧಾನಗಳೊಂದಿಗೆ ಜ್ಯೋತಿ ಬೆಳಗಿಸುವ ವಿಶೇಷ ಕಾರ್ಯಕ್ರಮ ನೆರವೇರಲಿದೆ. 9 ಗಂಟೆಗೆ ಕಲಕತ್ತಾದ ಜಹಾಂಗೀರ್ ಅಲಮ್‌ನೂರಿ ಅವರಿಂದ ಬಯಾನ ಕಾರ್ಯಕ್ರಮ, ನಂತರ ರಿವಾಯತ್ ಕವಾಲಿ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷವಾಗಿ ಸಂದಲ್ ಗಂಧ ಮೆರವಣಿಗೆಯಲ್ಲಿ ಗುಡಗೇರಿಯ ತಾಜ್ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಕಂಪನಿಯಿಂದ ಕವಾಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಮಾ.28ರಂದು ತವಾಫ್(ಚಿರಶಾಂತಿ ಪ್ರಾರ್ಥನೆ) ನಡೆಯಲಿದೆ. ಎಪ್ರೀಲ್ 7ರಂದು ಸಂಜೆ ಧ್ವಜ ಇಳಿಸಲಾಗವುದು. ನಂತರ ಉರುಸು ಲೆಕ್ಕ ಪತ್ರ ಪರಿಶೀಲನೆ ಸಭೆ ನಡೆಯುವುದು ಎಂದು ಉರುಸು ಕಮಿಟಿ ಪ್ರಕಟಣೆ ತಿಳಿಸಿದೆ.

ಜೀವನದ ಉನ್ನತಿಗೆ ಬೆಳಕು ತೋರಿದವರು ರೇಣುಕಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಯಕ ಮತ್ತು ದಾಸೋಹದ ಮೂಲಕ ಜೀವನದ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ಜಗದ್ಗುರು ರೇಣುಕಾಚಾರ್ಯರು. ಧರ್ಮದ ದಶಸೂತ್ರಗಳನ್ನು ಬೋಧಿಸಿ ಜೀವನದ ಉನ್ನತಿಗೆ ಬೆಳಕು ತೋರಿದವರು. ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕೃತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದ ಶಿವಾದ್ವೈತ ಜ್ಞಾನ ಸಂಪತ್ತನ್ನು ಕರುಣಿಸಿದ ಕಾರುಣ್ಯ ಶಕ್ತಿಯೇ ಪರಮ ಜಗದ್ಗುರುಗಳು ಎಂದು ಪ್ರಭುಗೌಡ ಯಕ್ಕಿಕೊಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿ ಹುಣ್ಣಿಮೆಗೆ ನಡೆಸಿಕೊಂಡು ಬಂದಿರುವ ಪುಲಿಗೆರೆ ಪೌರ್ಣಿಮೆ ಸರಣಿ ಕಾರ್ಯಕ್ರಮದಲ್ಲಿ ಅವರು ಶ್ರೀ ರೇಣುಕಾಚಾರ್ಯರ ಮಹಿಮೆ ವಿಷಯ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಶಿಕ್ಷಕ, ಸಾಹಿತಿ ಎಚ್.ಜಿ. ದುರಗಣ್ಣವರ ಬರೆದ `ಹೋರಾಟಮಯ ಜೀವನ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಮುಖ್ಯೋಪಾಧ್ಯಾಯೆ ಲಲಿತಕ್ಕ ಕೆರಿಮನಿ, ಪ್ರತಿಯೊಬ್ಬರ ಬದುಕಿಗೂ ಒಂದು ಅರ್ಥವಿದೆ, ಗುರಿಯಿದೆ. ಅದನ್ನು ಸಾಧಿಸುವಲ್ಲಿ ಪ್ರತಿಯೊಂದು ಹಂತದಲ್ಲಿಯೂ ಹೋರಾಟ ಮಾಡುವುದು ಮಾನವನ ಸಹಜ ಲಕ್ಷಣ. ಅಂತಹ ಹೋರಾಟ ಜೀವನವನ್ನು ವಿಶ್ರಾಂತ ಶಿಕ್ಷಕ ದುರ್ಗಣ್ಣವರ ಮನಮುಟ್ಟುವ ಹಾಗೆ ದಾಖಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದೇವಣ್ಣ ಬಳಿಗಾರ, ನೀಲಪ್ಪ ಕರ್ಜಕ್ಕಣ್ಣನವರ, ಸುರೇಶ ರಾಚನಾಯ್ಕರ, ವಿರೂಪಾಕ್ಷಪ್ಪ ಆದಿ, ಪಿ.ಬಿ. ಖರಾಟೆ, ಎನ್.ಆರ್. ಸಾತಪೂತೆ, ಮಾಲಾ ದಂದರಗಿ, ಸುಮಾ ಚೊಟಗಲ್, ಎಸ್.ವ್ಹಿ. ಕನೋಜ, ಎಲ್.ಆರ್. ಮಲ್ಲಸಮುದ್ರ, ಎಸ್.ಎ. ಸಾತಣ್ಣನವರ, ಎಂ.ಎನ್. ಭರಮಗೌಡ್ರ, ನಾಗರಾಜ ಕಳಸಾಪೂರ, ಸೋಮಶೇಖರ ಕೆರಿಮನಿ, ಎಂ.ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ವಿ.ಎಂ. ಹೂಗಾರ ಪ್ರಾರ್ಥಿಸಿದರು. ಟ್ರಸ್ಟ್ ಕಮಿಟಿ ಸಂಚಾಲಕ ಜಿ.ಎಸ್. ಗುಡಗೇರಿ ಸ್ವಾಗತಿಸಿದರು. ಸ್ನೇಹ ಹೊಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ವಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಮ್ಮಿಕೊಂಡ ಈ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪ ನೋಂದಣಾಧಿಕಾರಿ ಎಸ್.ಕೆ. ಜಲರೆಡ್ಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿದರು. ಸಾಹಿತಿ ಹೆಚ್.ಜಿ. ದುರಗಣ್ಣವರ ತಮ್ಮ ಪುಸ್ತಕದ ಕುರಿತು ಅನುಭವ ಹಂಚಿಕೊಂಡರು.

 

ಮನಸ್ಸಿನ ಸಮತೋಲನಕ್ಕೆ ಸ್ಥಿತಪ್ರಜ್ಞೆ ಅಗತ್ಯ

0
ವಿಜಯಸಾಕ್ಷಿ ಸುದ್ದಿ, ಗದಗ : ವ್ಯಕ್ತಿ ತನ್ನ ಇತಿ-ಮಿತಿಗಳನ್ನು ಅರಿತು ಬದುಕನ್ನು ನಡೆಸಬೇಕು. ಅತಿ ಆಸೆ, ಹಪಾಹಪಿತನ ವ್ಯಕ್ತಿಯಲ್ಲಿ ಉದ್ವೇಗ, ಭಯ, ಗೊಂದಲಗಳನ್ನು ಸೃಷ್ಟಿಸಿ ಮಾನಸಿಕ ಒತ್ತಡಗಳನ್ನು ಉಂಟುಮಾಡುತ್ತದೆ. ಆಹಾರದಿಂದ ಆರೋಗ್ಯ ನಿರ್ಮಾಣವಾಗುತ್ತಿದ್ದು, ಬದಲಾದ ಜೀವನ ಶೈಲಿ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯಕ್ತಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞೆಯನ್ನು ಹೊಂದುವದು ಅಗತ್ಯವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಏರ್ಪಡಿಸಿದ್ದ `ಮಾಸದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಜಿ.ಬಿ. ಪಾಟೀಲ ಮಾತನಾಡಿ, ಮಾನಸಿಕ ಡಾ. ಚಂದ್ರಶೇಖರರು ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ನಿರಂತರವಾಗಿ ರಾಜ್ಯದ ಎಲ್ಲ ಭಾಗಗಳ ವಿದ್ಯಾ ಸಂಸ್ಥೆಗಳಿಗೆ ಹೋಗಿ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ, ಪುಸ್ತಕಗಳ ವಿತರಣೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆಂದರು.
ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ 6 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ. ಸಿ.ಆರ್. ಚಂದ್ರಶೇಖರರು ವೈದ್ಯರಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಳ್ಳದೇ ರೋಗಿಯ ಮನೆಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಜನಸಾಮಾನ್ಯರ ಮನೋವೈದ್ಯರಾಗಿದ್ದಾರೆ. 310ಕ್ಕೂ ಅಧಿಕ ಪುಸ್ತಕಗಳ ಮೂಲಕ ಅಂಗೈಯಲ್ಲಿ ಆರೋಗ್ಯವನ್ನು ನೀಡಿದ್ದಾರೆ ಎಂದರು.
ಸಂವಾದದಲ್ಲಿ ಡಾ. ರಾಜೇಂದ್ರ ಗಡಾದ, ಎ.ಎಸ್. ಮಕಾನದಾರ, ಪ್ರೊ. ಚಂದ್ರಶೇಖರ ವಸ್ತç ದ, ಪ್ರೊ. ಅನ್ನದಾನಿ ಹಿರೇಮಠ ಮೊದಲಾದವರು ಭಾಗವಹಿಸಿದ್ದರು. ಮಂಜುಳಾ ವೆಂಕಟೇಶಯ್ಯ ಆತಿಥ್ಯ ವಹಿಸಿದ್ದರು. ಮನೋವೈದ್ಯರಾದ ಡಾ. ವಿಜಯ ಹರವಿಶೆಟ್ಟರ, ಡಾ.ಸೋಮಶೇಖರ ಬಿಜ್ಜಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಚ್. ಬೇಲೂರ, ಮುಂಡರಗಿ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಶಿರಹಟ್ಟಿ ಕಸಾಪ ಅಧ್ಯಕ್ಷ ಎಸ್.ಬಿ. ಹೊಸೂರ, ಡಾ. ಕಾವೆಂಶ್ರೀ, ವಿಶ್ವನಾಥ ನಾಲವಾಡದ, ವೆಂಕಟೇಶ ಗುಡಿ, ಸತೀಶ ಕುಮಾರ ಚನ್ನಪ್ಪಗೌಡರ, ಶೇಖಣ್ಣ ಕಳಸಾಪುರಶೆಟ್ರು, ಡಾ. ಎಸ್.ಬಿ. ಶೆಟ್ಟರ, ಡಿ.ಎಸ್. ಬಾಪುರಿ, ಡಾ. ವಿಜಯದತ್ತ ವಿ.ಎಂ., ಚಿನ್ನವ್ವ ವಸ್ತçದ, ಶಿಲ್ಪಾ ಮ್ಯಾಗೇರಿ, ಅನಸೂಯಾ ಮಿಟ್ಟಿ, ಎಸ್.ಎಂ. ಕಾತರಕಿ, ಸುಧಾ ಬಳ್ಳಿ, ಶಾರದಾ ಬಾಣದ, ನೀಲಮ್ಮ ಅಂಗಡಿ, ರತ್ನಾ ಪುರಂತರ, ಭಾಗ್ಯಶ್ರೀ ಹುರಕಡ್ಲಿ, ಶಾಂತಲಾ ಹಂಚಿನಾಳ, ಶೈಲಜಾ ಗಿಡ್ನಂದಿ, ರಕ್ಷಿತಾ ಎಸ್ ಗಿಡ್ನಂದಿ, ಎಸ್.ಬಿ. ಸರ್ಜಾಪುರ, ಅಶೋಕ ಸತ್ಯರೆಡ್ಡಿ, ಎಸ್.ಎಫ್. ಭಜಂತ್ರಿ, ಎಸ್.ಎ. ಸೋಮಗೊಂಡ, ಡಾ. ಈರಣ್ಣ ಕೊರಚಗಾಂವ, ಬಸನಗೌಡಗೌಡರ, ಅಜಿತ ಘೋರ್ಪಡೆ, ಮೌನೇಶ ಬಡಿಗೇರ, ಮಲ್ಲಿಕಾರ್ಜುನ ಜಿ, ಜೆ.ಎ. ಪಾಟೀಲ, ಆರ್.ಡಿ. ಕಪ್ಪಲಿ, ಪ್ರತೋ ನಾರಾಯಣಪುರ, ಬಸವರಾಜ ವಾರಿ, ಕಾರ್ತಿಕ ಮುನವಳ್ಳಿ, ಸಿ.ಎಂ. ಮಾರನಬಸರಿ, ಪ್ರೊ. ಆಯ್.ಎಸ್. ಹಿರೇಮಠ, ಕೆ.ಜಿ. ವ್ಯಾಪಾರಿ, ಶರಣಪ್ಪ ಹೊಸಂಗಡಿ, ಎಸ್.ಆಯ್. ತಳವಾರ, ಬಿ.ಎ. ಸಾಲಿಯವರ, ವಿ.ಎಸ್. ದಲಾಲಿ, ಅಮರೇಶ ರಾಂಪೂರ ಮೊದಲಾದವರು ಭಾಗವಹಿಸಿದ್ದರು.
ಪ್ರಾಣಿಗಳಲ್ಲಿ ಆಸೆ-ಆಕಾಂಕ್ಷೆ ಮಿತವಾಗಿದೆ. ಆದರೆ ಮನುಷ್ಯರಲ್ಲಿ ಹಾಗಿಲ್ಲ. ಸಂಪತ್ತಿನ ಗಳಿಕೆ, ಕೀರ್ತಿ ಶನಿ, ಇನ್ನೂ ಬೇಕು ಎನ್ನುವ ಬಯಕೆಗಳು ಮಾನವನಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತಿವೆ. ಮನಸ್ಸಿನ ಹತೋಟಿ ಮೆದುಳಿನಿಂದ ನಡೆಯುತ್ತಿರುವದರಿಂದ ಹಾರ್ಮೋನುಗಳು ಅಗತ್ಯ ಪ್ರಮಾಣದಲ್ಲಿ ಶ್ರವಿಸುವಂತೆ ಮಾಡಬೇಕು. ಮನಸ್ಸನ್ನು ಆನಂದದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆಚರಣೆಗಳನ್ನು ಬದಲಾಯಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ, ಉಪಕಾರ, ದಯೆ, ಅನುಕಂಪ, ಪ್ರೀತಿ ತೋರುವಿಕೆಯ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. 
– ಡಾ. ಸಿ.ಆರ್. ಚಂದ್ರಶೇಖರ.
ಖ್ಯಾತ ಮನೋವೈದ್ಯರು.

ವೀರಶೈವರಾಗಿರುವುದಕ್ಕೆ ಹೆಮ್ಮೆ ಇರಲಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ವೀರಶೈವರಾಗಿರುವುದಕ್ಕೆ ನಮ್ಮೆಲ್ಲರಲ್ಲಿಯೂ ಹೆಮ್ಮೆ ಇರಲಿ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಶಾಂತಿಯನ್ನು ಬಯಸುವ ಧರ್ಮವಾಗಿದ್ದು, ಈ ಧರ್ಮದ ಆಚರಣೆಯಿಂದ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಅದನ್ನು ಜಗತ್ತಿನ ಜನರಿಗೆ ನೀಡುವುದಕ್ಕೆಂದೇ ಜಗದ್ಗುರು ರೇಣುಕಾಚಾರ್ಯರು ಈ ಭೂಮಿಯ ಮೇಲೆ ಉದಯಿಸಿದರು ಎಂದು ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಆದಿ ಜಗದ್ಗುರುಗಳ ಜಯಂತಿ ಯುಗಮಾನೋತ್ಸವ ಆಚರಣೆಯಿಂದ ವೀರಶೈವ ಧರ್ಮದ ಪ್ರವರ್ತನೆ ಮತ್ತು ಧರ್ಮ ಜಾಗೃತಿ ಹೆಚ್ಚುತ್ತದೆ. ವೀರಶೈವ ಧರ್ಮ ಮಾನವ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಮಾನವ ಧರ್ಮಕ್ಕೆ ಸದಾ ಜಯವಾಗಲಿ ಎಂದು ಹೇಳಿದೆ. ಪಂಚಾಚಾರ್ಯರು ಮಾನವ ಧರ್ಮದ ಶುದ್ಧೀಕರಣಕ್ಕೆ ಮತ್ತು ಸಂಸ್ಕಾರ, ಸಂಸ್ಕೃತಿ ಆಚರಣೆಗೆ ಆದ್ಯತೆ ನೀಡಿದ್ದಾರೆ. ಜಗದ್ಗುರುಗಳ ಜಯಂತಿ ಆಚರಣೆಯಿಂದ ಜೀವನ ಸಂಸ್ಕಾರಯುಕ್ತವಾಗುತ್ತದೆ. ಧರ್ಮದ ತತ್ವ ಧರ್ಮದ ಆಚರಣೆ, ಆಚರಣೆಯ ಕ್ರಮಗಳನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಲು ಸದಾವಕಾಶವಾಗಿದೆ ಎಂದು ಶ್ರೀಗಳು ತಿಳಿಸಿದರು.

ವೀರಶೈವರು ಹಿಂದಿನ ಕಾಲಕ್ಕಿಂತ ಇಂದು ಒಗ್ಗಟ್ಟಾಗುವ ಅಗತ್ಯವಿದೆ. ವೀರಶೈವ ಆಚರಣೆ, ಧರ್ಮದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಯುವ ಸಮೂಹ ವೀರಶೈವ ಧರ್ಮದ ಅಭಿಮಾನ, ಸ್ವಾಭಿಮಾನ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮ, ಮಠಗಳಲ್ಲಿ ಪ್ರತಿ ವರ್ಷ ಜಗದ್ಗುರುಗಳ ಜಯಂತಿ ನಿಮಿತ್ತ ಜಗದ್ಗುರುಗಳ ಜೀವನ ಚರಿತ್ರೆ, ವೀರಶೈವ ಧರ್ಮ ಕುರಿತು ಸಪ್ತ ದಿನಗಳ ಉಪನ್ಯಾಸ ಕಾರ್ಯಕ್ರಮ ಸಂಘಟಿಸಬೇಕು. ಹೆಣ್ಣು-ಗಂಡು ಸಮಾನತೆ ಸಾರಿದ ವೀರಶೈವ ಧರ್ಮ ಸದಾ ಕಾಲ ಜೀವಂತ ಇರುವ ಧರ್ಮ, ನಿತ್ಯ ಜೀವನದ ಪಾಠ ಕಲಿಸುವ ಧರ್ಮವಾಗಿದೆ ಎಂದರು.

ಸದಸ್ಯ ಡಾ. ರಾಜೇಂದ್ರ ಗಚ್ಚಿನಮಠ, ಮುಖಂಡ ಶಿವನಗೌಡ ಪಾಟೀಲ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ರತ್ನಾ ಕುರ್ತಕೋಟಿ, ಸುಮಾ ಕಲ್ಲೂರ, ಅಕ್ಕಮ್ಮ ಬೆಟಗೇರಿ, ಬಸವರಾಜ ತಳ್ಳಿಗೇರಿ, ಗೀತಾ ಕಳಕಾಪೂರ, ಸುಮಾ ಸಂಕನಗೌಡ್ರ, ಜಯಾ ಲಕ್ಕನಗೌಡ, ವಿ.ಬಿ. ಬಿಂಗಿ, ಈಶ್ವರ ಆದಿ, ಪ್ರಶಾಂತ ಹಿರೇಮಠ ಸೇರಿದಂತೆ ಇತರರಿದ್ದರು.

ಪರೀಕ್ಷಾ ಕೇಂದ್ರಕ್ಕೆ ಮಾಜಿ ಸೈನಿಕರ ಸಂಘದಿಂದ ಬಂದೋಬಸ್ತ್

0

ವಿಜಯಸಾಕ್ಷಿ ಸುದ್ದಿ, ಗದಗ : ಮಾರ್ಚ್ 25ರಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಣ ಬೆಳವಣಿಕಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿಯವರ ಕೋರಿಕೆಯ ಮೇರೆಗೆ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಾಲೇಜಿನ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ಉಂಟಾಗದ ಹಾಗೆ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ಮಾಜಿ ಸೈನಿಕರು ಬಂದೋಬಸ್ತ್ ಕಾರ್ಯಕ್ಕೆ ಕೈಜೋಡಿಸಿದರು.

ಪರೀಕ್ಷೆಯ ಸಂದರ್ಭದಲ್ಲಿ ರೋಣ ಪೊಲೀಸ್ ಠಾಣೆಯ ಪಿಎಸ್‌ಐ ಜೂಲಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾಲೇಜಿಗೆ ಆಗಮಿಸಿ ಮಾಜಿ ಸೈನಿಕರ ಶಿಸ್ತಿನ ಕಾರ್ಯವನ್ನು ವೀಕ್ಷಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಬಿಗಿ ಭದ್ರತೆಗೆ ಸಹಕರಿಸಿದ ಮಾಜಿ ಸೈನಿಕರಿಗೆ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿ ಮತ್ತು ಕಾರ್ಯದರ್ಶಿ ಶಿರೋಳ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಬಸಲಿಂಗಪ್ಪ, ರೇಣುಕಗೌಡ ದಾನಪ್ಪಗೌಡ್ರ, ಕಳಕಪ್ಪ ಗಾರವಾಡ, ಚನ್ನಪ್ಪ ಬಾವಿ, ಶಶಿಧರ ವಕ್ಕರ್, ಮುತ್ತಪ್ಪ ಹಡಪದ, ಚಂದ್ರಶೇಖರಪ್ಪ ಬಿಳೆಯಲಿ, ಮುತ್ತಪ್ಪ ಹೊಸಮನಿ, ಸಂಗಪ್ಪ ತಳವಾರ, ಚೆನ್ನಪ್ಪ ಹೊಸಮನಿ ಸೇರಿದಂತೆ ಹಲವಾರು ಮಾಜಿ ಸೈನಿಕರು ಉಪಸ್ಥಿತರಿದ್ದರು.

ಕ್ರಾಂತಿ ಸೇನಾ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ : ಕ್ರಾಂತಿ ಸೇನಾ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಬೆಟಗೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಬಾಬು ಬಾಕಳೆ ಹಾಗೂ ತಾಲೂಕಾಧ್ಯಕ್ಷ ಭರತ್ ಮರೆಪ್ಪನವರ್ ನೇತೃತ್ವದಲ್ಲಿ ಕ್ರಾಂತಿ ಸೇನಾ ತಾಲೂಕು ಸಂಚಾಲಕರಾಗಿ ನವೀನ್ ಜಂತ್ಲಿ, ತಾಲೂಕು ಉಪಾಧ್ಯಕ್ಷರಾಗಿ ಬಸವರಾಜ್ ಕಟ್ಟಿ, ತಾಲೂಕು ಸಹ ಕಾರ್ಯದರ್ಶಿಯಾಗಿ ವಿನಾಯಕ ಕಾಟವಾ, ತಾಲೂಕು ಕಾರ್ಯದರ್ಶಿಯಾಗಿ ರವಿತೇಜ ಶ್ಯಾವಿ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾಧ್ಯಕ್ಷರು ಬಾಬು ಬಾಕಳೆ ಮಾತನಾಡಿ, ನಾವೆಲ್ಲಾ ಹಿಂದೂ ಯುವಕರು ಒಗ್ಗಟ್ಟಿನಿಂದ ಹಿಂದುತ್ವದ ಸೇವೆ ಮಾಡೋಣ ಎಂದರು. ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ಕ್ರಾಂತಿ ಸೇನಾ ಸಂಘಟನೆ ತಾಲೂಕು ಮಟ್ಟದ ಜವಾಬ್ದಾರಿ ಸ್ವೀಕಾರ ಮಾಡಿದ ಯುವಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ರಾಣಿ ಚಂದಾವರಿ, ನಿಖಿತಾ ಸುತಾರ್, ಮಹಾನಂದ ಪತ್ತಾರ್, ಶಿವಕುಮಾರ್ ಕುಂಬಾರ್, ರಾಮು ಕಬಾಡಿ, ಪ್ರದೀಪ್ ಸರ್ವದೆ, ರಾಮ ನವಲಗುಂದ, ಯಲ್ಲಪ್ಪಾ ಸಿದ್ಲಿಂಗ್ ಸೇರಿದಂತೆ ಓಣಿಯ ಮಹಿಳೆಯರು, ಗುರು-ಹಿರಿಯರು ಉಪಸ್ಥಿತರಿದ್ದರು.

error: Content is protected !!