Home Blog Page 3233

ಬಿಎಸ್‌ವೈ ಭೇಟಿ ಮಾಡಿದ್ದು ಸಾಬೀತಾದರೆ ರಾಜಕೀಯ ಸನ್ಯಾಸ: ಸಿದ್ದು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಯಡಿಯೂರಪ್ಪರನ್ನು ಅವರ ಹುಟ್ಟುಹಬ್ಬದ ವೇಳೆ ಭೇಟಿ ಮಾಡಿದ್ದೆ. ನಂತರ ಭೇಟಿ ಮಾಡಿಯೇ ಇಲ್ಲ. ಭೇಟಿ ಮಾಡಿದ್ದು ಪ್ರೂವ್ ಮಾಡಿದ್ರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ಸಿಎಂ ಭೇಟಿ ಮಾಡಿಲ್ಲ. ಸಭೆ, ಸದನದಲ್ಲಿ ಭೇಟಿ ಬಿಟ್ಟರೆ ವೈಯಕ್ತಿಕವಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿಯೇ ಇಲ್ಲ.

ನಾನು ತಾಲೂಕು ಬೋರ್ಡ್ ಮೆಂಬರ್ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಸಹ ಅಧಿಕಾರದಲ್ಲಿದ್ದ ವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ಧಾಂತ. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲ ಅದು ಏನು ?
ಆಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ
ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತಗೋಲಿಕ್ಕೆ ಹೋಗಿದ್ರಾ ಅಂತವರಿಂದ ಪಾಠ ಕಲಿಯಬೇಕಾಗಿ ಬಂದಿರೋದು ನಮ್ಮ ದುಃಸ್ಥಿತಿ ಎಂದರು.

ಪ್ರಧಾನಿ ಬಿಜೆಪಿಯವರು, ಯಡಿಯೂರಪ್ಪ ಸಹ ಬಿಜೆಪಿಯಲ್ಲಿದ್ದಾರೆ. ನನ್ನ ಮಾತು ಕೇಳಿ ಐಟಿ ರೇಡ್ ಮಾಡ್ತಾರಾ ಎಂದು ಪ್ರಶ್ನಿಸಿದರು.

ಬೈಕ್ ಗೆ ಕ್ಯಾಂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ತುಮಕೂರು

ಟಿವಿಎಸ್ ಬೈಕ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮುಂದೆ ಹೊರಟಿದ್ದ ಬೈಕ್ ಗೆ ಹಿಂದಿನಿಂದ ಕ್ಯಾಂಟರ್ ಗುದ್ದಿದಾಗ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಸವಾರ ಪುಟಿದು ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾನೆ.

ಡಿವೈಡರ್ ಗೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಲೀಕ್ ಆಗಿ ಬೈಕ್ ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ತುಮಕೂರು ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿನೂ ಇಲ್ಲ, ಏನೂ ಇಲ್ಲ ಸುಮ್ನೆ ನಡೀರಿ..

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಆರ್ ಎಸ್ ಎಸ್ ವಿರುದ್ಧ ಮಾತಾಡಿದ್ರೆ ಬೆಂಕಿ ಜೊತೆ ಸರಸ ಆಡಿದಂಗೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ,
ಮಾಜಿ ಸಿಎಂ ಸಿದ್ರಾಮಯ್ಯ ತಿರುಗೇಟು ನೀಡಿದ್ದು, ನಾನು 20 ವರ್ಷದಿಂದ ಮಾತಾಡ್ತಾನೆ ಇದೀನಿ ಏನಾಗಿದೆ. ಬೆಂಕಿನೂ ಇಲ್ಲ, ಏನೂ ಇಲ್ಲ ಸುಮ್ನೆ ನಡೀರಿ ಎಂದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ನಾವೇನು ಬೈ ಎಲೆಕ್ಷನ್ ಬರಬೇಕು ಎಂದು ಬಯಸಿರಲಿಲ್ಲ. ಆದರೂ ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಕೊಡುವ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಚಿರತೆ ಪ್ರತ್ಯಕ್ಷ ? ಆತಂಕದಲ್ಲಿ ಮೂರು ಗ್ರಾಮದ ಜನತೆ

ವಿಜಯಸಾಕ್ಷಿ ಸುದ್ದಿ, ರೋಣ

ಕಳೆದ ವಾರ ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷದ ವದಂತಿಯ ಬೆನ್ನಲ್ಲಿಯೇ ಈಗ ತಾಲೂಕಿನ ಮಾರನಬಸರಿ ಗ್ರಾಮದ ಹಳ್ಳದಲ್ಲಿ ಮುಂಜಾನೆ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಇದನ್ನು ನೋಡಿದ ವ್ಯಕ್ತಿ ಗ್ರಾಮಸ್ಥರಿಗೆ ಹೇಳಿದ್ದಾನೆ. ಇದರಿಂದಾಗಿ ಆತಂಕಗೊಂಡ ಜನ ಊರು ಬಿಟ್ಟು ಹೊರಗೆ ಬಾರದಂತಾಗಿದೆ. ಗ್ರಾಮದಲ್ಲಿ ಗುಂಪುಗೂಡಿ ಚರ್ಚೆ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ಕೊಡಲು ಒತ್ತಾಯಿಸಿದ್ದಾರೆ.

ಬೆಳಿಗ್ಗೆಯೇ ಜಮೀನುಗಳಿಗೆ ತೆರಳಿದ್ದ ಜನರು‌ ವಾಪಾಸು ಊರಿಗೆ ಬರುವಂತೆ ಗ್ರಾಮ ಪಂಚಾಯತಿ ವತಿಯಿಂದ ಧ್ವನಿವರ್ಧಕದ ಮೂಲಕ ಸಾರಲಾಗಿದೆ.

ಕೇವಲ ಮಾರನಬಸರಿ ಗ್ರಾಮದಲ್ಲಿ ಅಷ್ಟೇ ಅಲ್ಲ ಅಕ್ಕಪಕ್ಕದ ಕಳಕಾಪೂರ, ನಿಡಗುಂದಿ ಗ್ರಾಮದ ಬಳಿಯೂ ಕಾಣಿಸಿಕೊಂಡಿತ್ತು. ಅದೀಗ ಮಾರನಬಸರಿ ಗ್ರಾಮದತ್ತ ತೆರಳಿದೆ ಎಂಬ ಗಾಳಿ ಸುದ್ದಿಯೂ ಹರದಾಡುತ್ತಿದೆ. ಹೀಗಾಗಿ ಈ ಮೂರು ಗ್ರಾಮದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸತ್ಯಾಸತ್ಯತೆ ಕುರಿತು ಜನರಿಗೆ ಮನವರಿಕೆ ಮಾಡಿ ಮುಂಜಾಗ್ರತೆ ಕೈಗೊಳ್ಳಲು ಮುಂದಾಗಬೇಕಿದೆ.

ಕಳೆದ ಹನ್ನೆರಡು ವರ್ಷಗಳ ಹಿಂದೆ ಮಾರನಬಸರಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿ ಹಲವು ಜನರ ಮೇಲೆ ದಾಳಿ ಮಾಡಿತ್ತು. ಆಕ್ರೋಶಗೊಂಡ ಜನ ಕರಡಿ ಥಳಿಸಿದ್ದರು. ನಂತರ ಅಸ್ವಸ್ಥಗೊಂಡಿದ್ದ ಕರಡಿ ಮೃತಪಟ್ಟಿತ್ತು.

ರೋಣ ಪೊಲೀಸರ ಭರ್ಜರಿ ಬೇಟೆ; ಮೂವರು ಹೈಟೆಕ್ ಕಳ್ಳರ ಬಂಧನ, ಚಿನ್ನಾಭರಣ ವಶ

 

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ತಾಲೂಕಿನ ಬೆನಹಾಳ‌ ಗ್ರಾಮದಲ್ಲಿ ಸೆಪ್ಟೆಂಬರ್29ರ ಮಧ್ಯರಾತ್ರಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆ ದೋಚಿದ್ದ ಮೂವರು ಅಂತರ್ ಜಿಲ್ಲಾ ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಷಾರಾಮಿ ಕಾರಲ್ಲಿ ಬಂದು ಕಳ್ಳತನ ಮಾಡಿದ್ದ ಹೊಸಪೇಟೆಯ ಚಪ್ಪರದಹಳ್ಳಿ ಎಸ್ ಆರ್ ನಗರದ ಬಯಲು ಆಂಜನೇಯ ದೇವಸ್ಥಾನದ ಬಳಿಯ ನಿವಾಸಿ, ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಡುವ ಗೋಣಿಬಸಪ್ಪ ಅಲಿಯಾಸ್ ಗೋಣಿ ಬಸವೇಶ್ವರ ತಂದೆ ಸೋಮಪ್ಪ ಬಾರಕೇರ, ದೇವಾಂಗಪೇಟೆಯ ಶಂಕ್ರಮ್ಮನ ಗುಡಿ ಬಳಿಯ ನಿವಾಸಿ ಬಿ ಸಾಗರ್ ತಂದೆ ಹುಲುಗಪ್ಪ ಹಾಗೂ ವೃತ್ತಿಯಲ್ಲಿ ಡ್ರೈವರ್ ಆಗಿರುವ ಐದನೇ ವಾರ್ಡ್ ನ ಹಂಪಿ ಇಂಟರ್‌ನ್ಯಾಷನಲ್ ಹೋಟೆಲ್ ಹತ್ತಿರದ ನಿವಾಸಿ ವೈ. ಲಕ್ಷ್ಮಣ್ಣ ಅಲಿಯಾಸ್ ಲಕ್ಕಿ ತಂದೆ ಟಿ. ಯಲ್ಲಪ್ಪ ಬಂಧಿತರು.

ಬಂಧಿತರಿಂದ ಐದು ಸಾವಿರ ನಗದು ಹಾಗೂ ಮೂರು ಸಾವಿರ ಮೌಲ್ಯದ ಟೈಟನ್ ವಾಚ್ ಬಿಟ್ಟು, ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆಯಲ್ಲಿ ಕಳ್ಳತನವಾಗಿದ್ದ ಎಲ್ಲಾ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ ಹುಂಡೈ ಕಾರು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ ಬೀಗ ಮುರಿದು ಒಂದೂವರೆ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ದೋಚಿದ ಕಳ್ಳರು

ಎಸ್ಪಿ ಯತೀಶ್ ಎನ್, ಶಂಕರ್ ಎಂ. ರಾಗಿ, ಸಿಪಿಐ ಸುಧೀರಕುಮಾರ್ ಎಂ. ಬೆಂಕಿ ಅವರ ಮಾರ್ಗದರ್ಶನದಲ್ಲಿ, ರೋಣ ಪಿಎಸ್ಐ ವಿನೋದ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರ್ ತಿಗರಿ, ವೈ. ಎಚ್. ಬೇವಿನಗಿಡದ, ಎಚ್. ಎಸ್. ಶಂಕ್ರಿ, ವಿ.ವೈ. ಹಟ್ಟಿ, ಮುತ್ತಪ್ಪ ಭಾವಿ, ಎಸ್.ಎನ್. ಚಿಮ್ಮನಕಟ್ಟಿ, ಎಸ್.ಪಿ. ಭಗಲಿ, ಎಸ್.ಬಿ. ಗೂಳಪ್ಪನವರ್, ಹನಮಂತಪ್ಪ ಹುಲ್ಲೂರ ಹಾಗೂ ಬೆರಳು ಮುದ್ರೆ ಘಟಕದ ಪಿಎಸ್ಐ ವೈ. ಕೆ. ವಡಗೇರಿ, ಎಎಸ್ಐ ಡಿ.ಎಂ. ಮ್ಯಾಗೇರಿ, ಮುಖ್ಯ ಪೇದೆ ಅಬ್ದುಲ್ ಘನಿ, ಡಿಎಆರ್ ನ ಎಆರ್ ಎಸ್ ಐ ಗುರು ಬೂದಿಹಾಳ, ಸೈಬರ್ ಕ್ರೈಮ್ ನ ಆನಂದ್ ಸಿಂಗ್ ದೊಡ್ಡಮನಿ ಕಾರ್ಯಚರಣೆ ನಡೆಸಿ, ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾನು ತಪ್ಪು ಮಾಡಿದ್ದರೆ ಕಪಾಳಕ್ಕೆ ಹೊಡೆಯಿರಿ

0

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ನಾನು ತಪ್ಪು ಮಾಡಿದ್ದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆ ಎಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ. ಮುಂದೆಯೂ ಸಿಗಲ್ಲ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು.

ಜಿಲ್ಲೆಯ ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನತ್ತಾರೆ. ಅದಕ್ಕಾಗಿ ನಾನು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ಚಿಂಚನಸೂರು ಹೇಳಿದರು.

ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನೇ ನಿಮ್ಮ ಸೇವೆ ಮಾಡುತ್ತೇನೆ, ಎಲ್ಲಾ ಜಯಂತಿಗೂ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ ಎಂದು ಚಿಂಚನಸೂರು ನೋವು ತೋಡಿಕೊಂಡರು.

ಬಟ್ಟೆ ಹಾಕೊಳ್ಳದಿದ್ರೆ ಹುಚ್ಚ ಅನ್ತಾರೆ ಅದಕ್ಕೆ ಬಟ್ಟೆ ಹಾಕೊಳ್ತೇನೆ
-ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಬುರಾವ್ ಚಿಂಚನಸೂರ ಬೇಸರದ ನುಡಿ
ವಿಜಯಸಾಕ್ಷಿ ಸುದ್ದಿ ಯಾದಗಿರಿ
ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನುತ್ತಾರೆ ಅದಕ್ಕೆ ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು.
ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನು. ನಾನು ನಿಮ್ಮ ಸೇವೆ ಮಾಡುತ್ತೇನೆ. ನಾನು ಎಲ್ಲಾ ಜಯಂತಿಗೆ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ. ನಾನು ತಪ್ಪು ಮಾಡಿದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ ಮುಂದೆಯೂ ಸಿಗಲ್ಲ ಎಂದು ಹೇಳಿದರು.

ರಾಜ್ಯಕ್ಕೆ ಕರೆಂಟ್ ಶಾಕ್ ಸಾಧ್ಯತೆ

ವಿಜಯಸಾಕ್ಷಿ ಸುದ್ದಿ, ರಾಯಚೂರು

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ(raichur thermel power station) ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯಕ್ಕೆ ಶೇ.45ರಷ್ಟು ವಿದ್ಯುತ್ ಪೂರೈಕೆ ಮಾಡುವ ಆರ್‌ಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಂಟು ಘಟಕಗಳಿಂದ ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ, ಕಲ್ಲಿದ್ದಲು ಕೊರತೆಯಿಂದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದು, ಸದ್ಯ ನಿತ್ಯ ಕೇವಲ ಕೇವಲ 4 ಘಟಕಗಳಿಂದ 480 ರಿಂದ 500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.

ಇಂದಿಗೆ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದ್ದು, ಕೇವಲ ನಾಲ್ಕು ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಂಟು ಘಟಕಗಳು ಉತ್ಪಾದನೆಗೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕ್ ಕಲ್ಲಿದ್ದಲು ಬರುತ್ತಿತ್ತು.

ಪ್ರಸ್ತುತ ಕೇವಲ 3 ರಿಂದ 4 ರೇಕ್ ಕಲ್ಲಿದ್ದಲು ಬರುತ್ತಿದೆ. ಇಂದು ಕಲ್ಲಿದ್ದಲು ಬಾರದಿದ್ದರೆ ವಿದ್ಯುತ್ ಉತ್ಪಾದಿಸುತ್ತಿರುವ 4 ಘಟಕಗಳೂ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನು ವೈಟಿಪಿಎಸ್ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ. ಹೀಗಾಗಿ ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಆರ್‌ಟಿಪಿಎಸ್ ಘಟಕದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯ ಆರ್‌ಟಿಪಿಎಸ್‌ನಲ್ಲೂ ಕಲ್ಲಿದ್ದಲು ಕೊರತೆ:
ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್) ಮೂರು ಘಟಕಗಳಿಂದ ನಿತ್ಯ 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಮರ್ಥ್ಯ ಹೊಂದಿದೆ.

ಆದರೆ, ಕಲ್ಲಿದ್ದಲು ಅಭಾವದಿಂದಾಗಿ ಒಂದೇ ಘಟಕ ಚಾಲ್ತಿಯಲ್ಲಿದ್ದು, ಎರಡು ಘಟಕ ಸ್ಥಗಿತಗೊಂಡಿವೆ. ಸದ್ಯ ಆರಂಭದಲ್ಲಿರುವ ಒಂದು ಘಟಕದಿಂದ ನಿತ್ಯ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಸದ್ಯ ಬಿಟಿಪಿಎಸ್‌ನಲ್ಲಿ 15 ಸಾವಿರ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಒಂದು ಘಟಕ ನಡೆಯಲು ದಿನಕ್ಕೆ 8 ಸಾವಿರ ಟನ್ ಕಲ್ಲಿದ್ದಲು ಬೇಕು. ಸದ್ಯ ಇರುವ ಸ್ಟಾಕ್ ಗೆ ಕೇವಲ ಇನ್ನೆರಡು ದಿನ ಮಾತ್ರ ಒಂದು ಘಟಕ ಕಾರ್ಯ ಮಾಡಬಹುದಾಗಿದೆ.

ನಾಳೆ ನಾಡಿದ್ದು ಮತ್ತೆ ಕಲ್ಲಿದ್ದಲು ಬರಬಹುದು. ಒಂದು ವೇಳೆ ಕಲ್ಲಿದ್ದಲು ಬಾರದೆ ಹೊದಲ್ಲಿ ಆ ಒಂದು ಘಟಕವೂ ಸ್ಥಗಿತ ಸಾಧ್ಯತೆ ಇದೆ ಎಂದು ಎಂದು ಬಿಟಿಪಿಎಸ್ ಮೂಲಗಳ ಮಾಹಿತಿ ನೀಡಿವೆ.

ಗೋಹತ್ಯೆ ಕಾನೂನು ವಿಫಲವಾಗಲು ಬಿಡಬೇಡಿ

ಪೊಲೀಸರಿಗೆ ಗೃಹಸಚಿವ ಅರಗ ಜ್ಞಾನೇಂದ್ರ ಸೂಚನೆ

ವಿಜಯಸಾಕ್ಷಿ ಸುದ್ದಿ, ಉಡುಪಿ

ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ವಿಫಲ ಆಗಿಲ್ಲ. ವಿಫಲವಾಗಲು ಪೊಲೀಸರು ಬಿಡಬಾರದು. ಗೋಸಾಗಣೆ, ಗೋಹತ್ಯೆ ಸಂಪೂರ್ಣ ನಿಲ್ಲಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಹೆಚ್ಚಳದಿಂದ ಸಾಮಾಜಿಕ ಅಶಾಂತಿಗೂ ಕಾರಣವಾಗಿದೆ. ಅಕ್ರಮ ಗೋಸಾಗಣೆ, ಗೋಹತ್ಯೆ ಸಂಪೂರ್ಣ ನಿಲ್ಲಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು.

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 16 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ತನಿಖೆ ವೇಗವಾಗಿ ನಡೆದಿದೆ. ಬಿಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಅತ್ಯಾಚಾರ ಪ್ರಕರಣ ಸಹಿಸುವುದಿಲ್ಲ ಎಂದು ಹೇಳಿದರು.

ಅರ್ಬಾಜ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: 12 ಜನ ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ


ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಹತ್ಯೆ ಪ್ರಕರಣ ಬೇಧಿಸಿರುವ ಪೊಲೀಸರು‌ 12 ಆರೋಪಿಗಳನ್ನು ಬಂಧಿಸಿದ್ದಾರೆ.
‌‌‌

ಕುಂಬಾರ್, ಸುಶೀಲ್ ಕುಂಬಾರ್, ಗಣಪತಿ ಗೊಂದಳಿ, ಕುತುಬುದ್ದೀನ್ ಬೇಪಾರಿ, ಮಾರುತಿ ಗೊಂದಳಿ,‌ ಪ್ರಶಾಂತ ಪಾಟೀಲ್, ಮಂಜು ಗೊಂದಳಿ, ಪ್ರವೀಣ್ ಪೂಜಾರಿ, ಶ್ರೀಧರ ಡೋಣಿ ಬಂಧಿತರು.

ಅನ್ಯ ಕೋಮಿನ ಯುವಕನನ್ನು ಮಗಳು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆಗೆ ಪೋಷಕರು ಸುಫಾರಿ‌ ನೀಡಿ ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ.

ಬೆಳಗಾವಿ ಜಿಲ್ಲೆಯ ‌ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28ರಂದು ಅರ್ಬಾಜ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಎಸೆಯಲಾಗಿತ್ತು. ಈ ಭೀಕರ ಹತ್ಯೆ ರಾಜ್ಯಾದ್ಯಂತ ಸದ್ದು ಮಾಡಿದ್ದರಿಂದ ಪೊಲೀಸರಿಗೆ ಪ್ರಕರಣ ಬೇಧಿಸುವುದು ಸವಾಲಾಗಿತ್ತು.

ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಅ.4ರಂದು ಖಾನಾಪುರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಪ್ರಕರಣ ಬೇಧಿಸಲು ಎಸ್ಪಿ ಲಕ್ಷ್ಮಣ ನಿಂಬರಗಿ ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ‌ ರಚಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಖಾನಾಪುರ ಪೊಲೀಸರು ಮೊದಲು ಪುಂಡಲೀಕ ಮುತಗೇಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೊಲೆಯ ಸಂಚು ಬಯಲಾಗಿದೆ.

ಅರ್ಬಾಜ್ ಹಾಗೂ ಶ್ವೇತಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಶ್ವೇತಾ ಪೋಷಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತು. ಮಗಳನ್ನು ಅರ್ಬಾಜ್ ನಿಂದ ದೂರ ಮಾಡಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರು. ಅರ್ಬಾಜ್ ನಿಂದ ಮಗಳನ್ನು ದೂರ ಮಾಡಲು ತಂದೆ ಈರಪ್ಪ ಕಂಬಾರ್, ತಾಯಿ ಸುಶೀಲಾ ಕಂಬಾರ್ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯ ತಾಲೂಕು ಅಧ್ಯಕ್ಷ ಪುಂಡಲೀಕ್ ಮಹರಾಜ್ ಹಾಗೂ ಬಿರ್ಜೆ ಮೊರೆ ಹೋಗಿದ್ದರು.

ಈ ಇಬ್ಬರು ಅರ್ಬಾಜ್ ಗೆ ಬೆದರಿಕೆ ಹಾಕಿದ್ದರು. ಸೆಪ್ಟೆಂಬರ್ 26 ರಂದು ಪ್ರೀತಿ, ಪ್ರೇಮ ಸಂಬಂಧ ರಾಜೀ ಪಂಚಾಯತಿ ನಡೆದಿತ್ತು‌. ಬಳಿಕವೂ ಅರ್ಬಾಜ್ ಹಾಗೂ ಶ್ವೇತಾ ಫೋನ್ ನಲ್ಲಿ ಸಂಪರ್ಕದಲ್ಲಿದ್ದರು. ಇದರಿಂದ ರೋಸಿ ಹೋದ ಪೋಷಕರು ಯುವಕನ ಕೊಲೆಗೆ ಸುಫಾರಿ ನೀಡಿದ್ದರು.

ಸೆಪ್ಟೆಂಬರ್ 28 ರಂದು ಅರ್ಬಾಜ್ ನನ್ನು ಖಾನಾಪುರಕ್ಕೆ ಕರೆಸಿದ ಆರೋಪಿಗಳು, ಅರ್ಬಾಜ್ ಮೇಲೆ ಮಾರಣಾಂತಿಕ ಮೇಲೆ ಹಲ್ಲೆ ಮಾಡಿ ರುಂಡ, ಕೈ ಕಾಲು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು. ‌ಪ್ರಕರಣದ ದಿಕ್ಕು ತಪ್ಪಿಸಲು ಅರ್ಬಾಜ್ ಶವ ರೈಲು ಹಳಿ ಮೇಲೆ ಬಿಸಾಡಿದ್ದರು‌.

ಅರ್ಬಾಜ್ ಮಾತುಕತೆಗೆ ಕರೆಸಿದ್ದು ಕುತುಬುದ್ದೀನ್ ಬೇಪಾರಿಯನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪನವರ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ: ನಿರಾಣಿ


ವಿಜಯಸಾಕ್ಷಿ ಸುದ್ದಿ, ಹಾವೇರಿ

ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ನಾನಾ ಭಾಗಗದಲ್ಲಿ ಐಟಿ ದಾಳಿ ಆಗುತ್ತದೆ. ಡೌಟ ಬಂದರೆ ದಾಳಿ ಮಾಡ್ತಾರೆ. ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಬಿ.ಎಸ್. ಯಡಿಯೂರಪ್ಪನವರೇ ಹೇಳಿದ್ದಾರೆ‌. ಅವರ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಹಾನಗಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು 50 ವರ್ಷಗಳಿಂದ ಪಕ್ಷಕಟ್ಟಿ ಬೆಳೆಸಿದ್ದಾರೆ. ದಾಳಿಯಲ್ಲಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎಂದು ಸಮರ್ಥಿಸಿಕೊಂಡರು.

error: Content is protected !!