Home Blog Page 3294

ಯಡಿಯೂರಪ್ಪ ಸೈಡ್‌ಲೈನ್ ಆಗಲ್ಲ: ರಾಮುಲು

ವಿಜಯಸಾಕ್ಷಿ ಸುದ್ದಿ, ಗಂಗಾವತಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯಲ್ಲಿ ಯಾವತ್ತೂ ಸೈಡ್‌ಲೈನ್ ಆಗಲ್ಲ. ಅವರು ದೊಡ್ಡ ಶಕ್ತಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಗಂಗಾವತಿ ತಾಲೂಕಿನ ಪಂಪಾಸರೋವರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ರಾಮುಲು ‌ಬಿಜೆಪಿಯಲ್ಲಿ ಯಾವತ್ತೂ ಸೈಡ್‌ಲೈನ್ ಆಗಲ್ಲ. ನಾವು ಜನರ ಮಧ್ಯೆ ಹೋರಾಟದ ಹಾದಿಯಲ್ಲಿ ಬಂದವರು. ಸೈಡ್‌ಲೈನ್ ಆಗುವ ಪ್ರಮೇಯವೇ ಇಲ್ಲ ಎಂದರು.

ಸಿಂಧಗಿ ಹಾನಗಲ್‌ನಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ. ಎಷ್ಟು ಅಂತರದಲ್ಲಿ ಗೆಲ್ತೀವಿ ಅನ್ನೋದು ಮಾತ್ರ ಮುಖ್ಯ.
ಇಂದು ನಾನು ಸಿಂಧಗಿಗೆ ಹೋಗುತ್ತಿದ್ದೇನೆ‌‌. ಬೊಮ್ಮಾಯಿ, ಯಡಿಯೂರಪ್ಪ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ ಎಂದರು

ST ಮೀಸಲಾತಿ ವಿಚಾರದಿಂದ ನಾವು ಹಿಂದೆ ಬರಲ್ಲ. ಕಾನೂನು ತೊಡಕು ಬಗೆಹರಿದ ತಕ್ಷಣ ಕ್ಲೀಯರ್ ಆಗುತ್ತೆ ಎಂದು ತಿಳಿಸಿದರು.

ನಾಲಿಗೆ ಇಲ್ಲದವರಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ
ಆರ್‌ಎಸ್‌ಎಸ್ ಬಗ್ಗೆ ನಾಲಗೆ ಇಲ್ಲದವರಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿ ಕಾರಿದರು.

ದೇಶಕ್ಕೆ ತೊಂದರೆ ಆದಾಗ ಆರ್‌ಎಸ್‌ಎಸ್ ಸಂಘಟನೆ ಏನು ಅಂತಾ ತೋರಿಸುತ್ತದೆ. ಸೈನಿಕರ ತರಹ ಆರ್‌ಎಸ್ಎಸ್ ಕೆಲಸ ಮಾಡ್ತಿದೆ. ಕುಮಾರಸ್ವಾಮಿ ನಾಲಿಗೆ ಇಲ್ಲದಂತೆ ಮಾತಾನಾಡುತ್ತಿದ್ದಾರೆ.
ಅವರಿಗೆ ನಾನು ಉತ್ತರ ಕೊಡಲ್ಲ ಎಂದು ರಾಮುಲು ಲೇವಡಿ ಮಾಡಿದರು.

ಭಯೋತ್ಪಾದಕರಿಂದ ದೇಶಕ್ಕೆ ಕುತ್ತು ಬಂದಾಗ ಆರ್‌ಎಸ್ಎಸ್ ಕೆಲಸ ಹೇಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರ್‌ಎಸ್ಎಸ್ ಅನ್ನೋದು ಸದಾ ಸ್ವಯಂ ಸೇವೆಗೆ ಸಿದ್ಧ ಎನ್ನುವ ಸಂಘಟನೆ ಎಂದು ಅವರು ಪ್ರತಿಪಾದಿಸಿದರು.

ರಾಜಕಾರಣಕ್ಕಾಗಿ ಅವರೆಲ್ಲ ಟೀಕೆ ಮಾಡ್ತಿದಾರೆ. ಸಂಘಟನೆ ಬಗ್ಗೆ ಟೀಕೆ ಮಾಡೋದು ಶೋಭೆ ತರೋ ಕೆಲಸ ಇಲ್ಲ..
ಕೆಲವರ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಲ್ಲ‌. ನಮ್ಮ ಪ್ರಧಾನ ಮಂತ್ರಿ ಬಗ್ಗೆನೂ ಅವರು ಮಾತಾಡೋದು ತಪ್ಪು ಎಂದು ರಾಮುಲು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರನ್ನು ಕುಟುಕಿದರು.

ಹೆಲ್ಪ್‌ಲೆಸ್ ಸರ್ವೀಸ್..!
ಆರ್‌ಎಸ್ಎಸ್ ಸಂಘಟನೆ ready for self service ಎಂದು ಹೇಳುವಾಗ ತಡಬಡಾಯಿಸಿದ ರಾಮುಲು ಮಾತಿನ ಭರದಲ್ಲಿ ಆರ್‌ಎಸ್ಎಸ್ ಸಂಘಟನೆಯದ್ದು helpless ಸರ್ವೀಸ್ ಎಂದು ಪೇಚಿಗೆ ಸಿಲುಕಿದರು.

ಕಟೀಲರಿಗೆ ಮಾನಸಿಕ ಸಮಸ್ಯೆ ಇದ್ದರೆ ನಾವೇ ಟ್ರೀಟ್ಮೆಂಟ್ ಕೊಡಿಸ್ತೇವೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಬಿಜೆಪಿ ಅಧ್ಯಕ್ಷರಾಗಿದ್ದರೂ ಪಕ್ಷ, ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳಲ್ಲಿ ಅವರ ಹೇಳಿಕೆ ಪ್ರಸಾರ ಆಗುತ್ತಿಲ್ಲ. ಕಟೀಲ್ ಗಿಂತಲೂ ಯತ್ನಾಳ ಸುದ್ದಿಗಳು ಹೆಚ್ಚು ಪ್ರಚಾರವಾಗುತ್ತಿವೆ.ಯಡಿಯೂರಪ್ಪ, ಬೊಮ್ಮಾಯಿ ಸೈಡ್ಲೈನ್ ಮಾಡಿದ್ದಾರೆ. ಇದರಿಂದ
ನಳೀನ್ ಕುಮಾರ್ ಕಟೀಲ್ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಹತಾಶರಾದಾಗ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಕೆಲವು ಜನ ಮದ್ಯಪಾನ, ಡ್ರಗ್ಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಇಂತಹ ರೀತಿ ಮಾತನಾಡುತ್ತಾರೆ. ಇವರು ನೋಡಿದರೆ ನನಗೆ ಅನುಮಾನ ಬರುತ್ತಿದೆ ಎಂದರು.

ಪುಕ್ಸಟ್ಟೆ ಪ್ರಚಾರಕ್ಕೊಸ್ಕರ ವೈಯಕ್ತಿಕವಾಗಿ ಮಾತಾಡಬೇಡಿ. ಮಾನಸಿಕ ಅಸ್ವಸ್ಥರಾಗಿದ್ದಾರೆ ನಮ್ಮಲ್ಲೇ ಡಾಕ್ಟರ್ ಗಳಿದ್ದಾರೆ. ಟ್ರಿಟ್ಮೆಂಟ್ ಕೊಡಿಸುತ್ತೇವೆ.‌ ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ ಇದರಿಂದ ಏನೂ ಸಮಸ್ಯೆ ಇಲ್ಲ. ನಾವು ಸಹಕಾರ ಕೊಟ್ಟು ನಿಮಗೆ ಟ್ರಿಂಟ್ ಮೆಂಟ್ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.

ನಮ್ಮ ಲೀಡರ್ ಬಗ್ಗೆ ಮಾತಾಡಿದರೆ ನಾವು ನಿಮ್ಮ ಲೀಡರ್ ಬಗ್ಗೆ ಮಾತಾಡಬೇಕಾಗುತ್ತೆ. ನೀವು ನಮ್ಮ ಲೀಡರ್ ಬಗ್ಗೆ ಸಾರ್ವಜನಿಕವಾಗಿ ಹೇಳೋಕೆ ರೇಡಿಯಿದ್ದರೆ, ನಿಮ್ಮ ಲೀಡರ್ ಗಳ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನು ಕೆಳೋಕೆ ರೆಡಿ ಇರಬೇಕು ಎಂದರು.

ಮೋದಿ ಹೆಬ್ಬೆಟ್ಟು ಗಿರಾಕಿ ಎಂಬ ಹೇಳಿಕೆ ಸಮರ್ಥನೆ ಮಾಡಿಕೊಂಡ ಪ್ರಿಯಾಂಕ, ಹೆಬ್ಬೆಟ್ಟು ಅಸಂವಿಧಾನಿಕ ಪದವಂತೂ ಅಲ್ಲ. ಮೋದಿ ಏನ್ ಓದಿದ್ದಾರೆ ಅನ್ನೋದು ಆರ್ ಟಿ ಐ ನಲ್ಲೇ ಕೊಟ್ಟಿಲ್ಲ. ಅವರ ಕ್ಲಾಸ್ ಮೇಟ್ ಯಾರು ಅನ್ನೋದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ‌ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿದೆ. ದೇಶ್ಯಾದ್ಯಂತ ಡ್ರಗ್ಸ್ ಸೇವನೆ ಕೇಸಲ್ಲಿ ಬಿಜೆಪಿ ನಾಯಕರೇ ಬಂಧಿತರಾಗಿದ್ದಾರೆ. ಕಟೀಲ್ ನಿಮಗೆ ನಿಜವಾಗಿಯೂ ಶಕ್ತಿ ಇದ್ದರೆ ರಾಹುಲ್ ಗಾಂಧಿಯರನ್ನು ಪ್ರಶ್ನೆ ಮಾಡಬೇಡಿ. ಅಮಿತ್ ಷಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ ಎಂದರು.

ಕಳೆದ ತಿಂಗಳು ಗುಜರಾತ್ ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್ ನಲ್ಲಿ 3 ಸಾವಿರ ಕೆಜಿ ಡ್ರಗ್ ಸಿಕ್ಕಿದೆ. 25 ಸಾವಿರ ಕೆ.ಜಿ. ಹೆರಾಯಿನ್ ಸಿಕ್ಕಿದೆ. ಇದು ಪಾಕಿಸ್ತಾನ ಮತ್ತು ಅಫಘಾನಿಸ್ಥಾನದಿಂದ ಬರುತ್ತಿದೆ. ಯುವಕರಿಗೆ ಉದ್ಯೋಗ ಕೊಡಿ ಎಂದರೆ ನಶೆ ಕೊಡುತ್ತಿದ್ದಾರೆ. ಮೋಹನ್ ಭಾಗವತ್ ಕೂಡ ಡ್ರಗ್ ಹಾವಳಿ ಹೆಚ್ಚಾಗ್ತಿದೆ ಎಂದು ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೆ ಸರ್ಕಾರ ಆಳ್ವಿಕೆಯಲ್ಲಿದೆ. ಇದಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಸಿಬಿಐ, ಇಡಿಗಳೆಲ್ಲ ಯಡಿಯೂರಪ್ಪ ಪಿಎಗಳಿಗೆ ತೊಂದರೆ ಕೊಡಲು ಬಿಟ್ಟಿದ್ದಾರೆ ಎಂದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದ ಬಿಎಸ್ವೈ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಮತದಾರರು ನಮ್ಮ ಜೊತೆಗಿದ್ದಾರೆ. ಮೋದಿ ಸಾಧನೆ, ನಾವಿದ್ದಾಗ ಕೊಟ್ಟ ಯೋಜನೆಗಳನ್ನು ಮತದಾರರಿಗೆ ತಿಳಿಸುತ್ತೇವೆ. ಸಿಂದಗಿಯ ಎರಡು ಸಮಾವೇಶ ಕಂಡು ಜೆಡಿಎಸ್, ಕಾಂಗ್ರೆಸ್ ಗೆ ಮನವರಿಕೆಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಆರೆಸ್ಸೆಸ್ ವಿರುದ್ಧ ಮುಗಿಬಿದ್ದಿರುವ
ಕುಮಾರಸ್ವಾಮಿ ನಡೆಗೆ ಆಕ್ರೋಶ ಹೊರಹಾಕಿದ ಬಿಎಸ್ ವೈ, ಆರೆಸ್ಸೆಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ.‌ ಮುಂದೆ‌ ಎಚ್ಡಿಕೆ ಪಶ್ಚಾತ್ತಾಪ ಪಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಬಹುತೇಕ ಮುಖ್ಯಮಂತ್ರಿಗಳು ಆರ್ ಎಸ್ ಎಸ್ ಮೂಲದವರು. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೆ ಆರೆಸ್ಸೆಸ್.

ಮುಸ್ಲಿಮರ ಓಲೈಕೆಗೆ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರೆ. ಆರೆಸ್ಸೆಸ್ ವಿರುದ್ಧ ಮಾತಾಡಿದರೆ ಮುಸ್ಲಿಮರ ವೋಟು ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.

ಉಪ‌ಚುನಾವಣೆ ಬಳಿಕ ರಾಜ್ಯ ಪ್ರವಾಸ

ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ಉಪ ಚುನಾವಣೆ ಬಳಿಕ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಪ್ರತಿ ಜಿಲ್ಲೆ ಜಿಲ್ಲೆಗೂ ಭೇಟಿ ನೀಡುವೆ. ಪ್ರಧಾನಿ ಮೋದಿ, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೇಜ್ ಪಕ್ಷಗಳು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ಇಬ್ಬರೂ ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದ ಜನತೆ ಎರಡೂ ಪಕ್ಷಗಳಿಗೆ ಪಾಠ ಕಲಿಸಲು ಮನಸ್ಸು ಮಾಡಬೇಕಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ಜೆಡಿಎಸ್- ಬಿಜೆಪಿ ಮಧ್ಯೆ ಹೋರಾಟ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಕಾಲು ಕೆರೆದುಕೊಂಡು ಬರೋಕೆ ನನಗೆ ಬೇರೆ ಕೆಲಸ ಇಲ್ವಾ ? ಅವರು ನನ್ನ ಸುದ್ದಿಗೆ ಬರದೆ ಇದ್ದರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ. ಕಾಂಗ್ರೆಸ್ ನಾಯಕರ ರೀತಿ ವೈಯಕ್ತಿಕವಾಗಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದರು.

ಪುಟಗೋಸಿ ವಿರೋಧ ಪಕ್ಷದ ಸ್ಥಾನ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಿಎಂ, ವಿರೋಧ ಪಕ್ಷದ ಸ್ಥಾನಕ್ಕೆ ಗೌರವ ಕೊಡುತ್ತೇನೆ. ಆದರೆ, ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆ ನಾನು ಮಾತಾಡಿದ್ದೇನೆ ಎಂದ ಅವರು, ಜಮೀರ್ ಬಗ್ಗೆ ನಾನು ಚರ್ಚೆ ಮಾಡಲ್ಲ. ದೇವರಿದ್ದಾನೆ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

ಸಾಯೋದರೊಳಗೆ ಪ್ರಾದೇಶಿಕ ಪಕ್ಷದ ಸರ್ಕಾರ ನೋಡುವ ಆಸೆ

  • ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ

ವಿಜಯಸಾಕ್ಷಿ ಸುದ್ದಿ, ಸಿಂದಗಿ

ನಾನು ಎಷ್ಟು ದಿನ ಬದುಕುತ್ತೇನೊ ಗೊತ್ತಿಲ್ಲ. ನಾನು ಸತ್ತರೂ ಪ್ರಾದೇಶಿಕ ಪಕ್ಷ ಜೀವಂತ ಇರಬೇಕು. ನನ್ನ ಆಯುಸ್ಸು ಮುಗಿವುದೊರಳಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿಯ ಚಟ್ಟರಕಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪರ ಮಾತಯಾಚಿಸಿ ಮಾತನಾಡಿದ ಅವರು, ನಿಮ್ಮಲ್ಲಿ ಮತಭಿಕ್ಷೆ ಬೇಡುತ್ತೇನೆ. ನನ್ನ ಕೊನೆಯ ಘಟ್ಟದಲ್ಲಿ ಕೇಳುತ್ತಿದ್ದೇನೆ. ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ಇನ್ನು ಎಷ್ಟು ದಿನ ಬದುಕುತ್ತೇನೋ ದೇವರು ಆಯುಷ್ಯ ಕೊಡಬೇಕಷ್ಟೆ ಎಂದು ಭಾವುಕರಾದರು.

ಕೋಟೆನಾಡಲ್ಲಿ ಮಾಜಿ – ಹಾಲಿ ಸಿಎಂಗಳ ಮುನಿಸು?

ವೇದಿಕೆ ಹಂಚಿಕೊಂಡರೂ ಪರಸ್ಪರರತ್ತ ತಿರುಗಿ ನೋಡದ ಮಾಜಿ ಸಿಎಂ ಬಿಎಸ್ ವೈ, ಹಾಲಿ ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಗುರು ಶಿಷ್ಯರಂತಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೋಟೆನಾಡಲ್ಲಿ ನಡೆದ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರರತ್ತ ತಿರುಗಿ ನೋಡದೆ ಅಂತರ ಕಾಯ್ದುಕೊಂಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಚಿತ್ರದುರ್ಗದ ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಸ್ ವೈ ಹಾಗೂ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಮುಗಿಯುವವರೆಗೂ ಪರಸ್ಪರ ಮಾತನಾಡುವುದು ದೂರದ ಮಾತು ಒಬ್ಬರು ಮತ್ತೊಬ್ಬರತ್ತ ತಿರುಗಿ ನೋಡದಿರುವುದು ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿಸಿದೆ.

ಬೊಮ್ಮಾಯಿ ಅವರು ಜನತಾ ಪರಿವಾರ ತೊರೆದು ಬಿಜೆಪಿ ಸೇರಿದಾಗಿನಿಂದ ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕವಂತೂ ಇಬ್ಬರ ನಡುವೆ ಅತ್ಯಂತ ಆತ್ಮೀಯ ಸಂಬಂಧ ಬೆಳೆದಿತ್ತು. ಸಿಎಂ ಬಳಿಕ ಸಂಪುಟದ ಎರಡನೇ ಸ್ಥಾನ ಹೊಂದಿರುವ ಗೃಹಖಾತೆ ನೀಡಿ ಬೊಮ್ಮಾಯಿ ಮೇಲೆ ಅಕ್ಕರೆ ತೋರಿಸಿದ್ದರು.

ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಸವರಾಜ ಬೊಮ್ಮಾಯಿ ಬಿಎಸ್ ವೈ ನೆರಳಿನಂತೆ ಗುರುತಿಸಿಕೊಂಡಿದ್ದರು.

ಆದರೆ, ಹೈಕಮಾಂಡ್ ಸೂಚನೆ ಪಾಲಿಸಿ ಬಿಎಸ್ ವೈ ಸಿಎಂ ಗದ್ದುಗೆಯಿಂದ ಕೆಳಗಿಳಿದ ಬಳಿಕ ಮೂಲ ಬಿಜೆಪಿಯ ಘಟಾನುಘಟಿ ಮುಖಂಡರನ್ನೇ ಹಿಂದಿಕ್ಕಿ ಬೊಮ್ಮಾಯಿ ಅವರು ಸಿಎಂ ಆಗಿದ್ದು, ಬಿಎಸ್ ವೈ ಕೃಪಾಶೀರ್ವಾದದಿಂದಲೇ ಎಂಬ ಮಾತುಗಳೂ ಸಹ ಕೇಳಿಬಂದಿದ್ದವು.

ಆದರೆ, ನಂತರ ನಡೆದ ಕೆಲ ಘಟನೆಗಳು ಇಬ್ಬರ ಮಧ್ಯೆ ಮುನಿಸು ಉಂಟಾಗಲು ಕಾರಣವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಮೊದಲನೆಯದಾಗಿ ಪುತ್ರ ವಿಜಯೇಂದ್ರನಿಗೆ ಸರ್ಕಾರದಲ್ಲೂ ಸ್ಥಾನ ಸಿಗದೆ ಪಕ್ಷದಲ್ಲೂ ಪ್ರಾಧಾನ್ಯತೆ ಕಡಿಮೆಯಾಗಿರುವುದು, ಈಚೆಗೆ ತಮ್ಮ ಆಪ್ತರ ಮೇಲೆ ನಡೆದ ಐಟಿ ರೇಡ್ ಬಿಎಸ್ ವೈ ರನ್ನು ಘಾಸಿಗೊಳಿಸಿದ್ದು, ಹೀಗಾಗಿಯೇ ಸಿಎಂ ಬೊಮ್ಮಾಯಿ ಜೊತೆಗೆ ಅಂತರ ಕಾಯ್ದುಕೊಂಡಿರಬಹುದು ಎಂಬ ಚರ್ಚೆಗಳು ಕೇಳಿಬಂದಿವೆ.

ಜೆಡಿಎಸ್ ಮುಖಂಡ ಅಕ್ತರ್‌ಗೆ ಆವಾಜ್ ಹಾಕಿದ ಮನಿಯಾರ್!

0

-ಅನ್ಸಾರಿಯವರನ್ನ ಮಂತ್ರಿ ಮಾಡಿದ್ದು ಅಲ್ಪಸಂಖ್ಯಾತರ ಮತಗಳಿಗಾಗಿ

-ದೇವೇಗೌಡರ ರಾಜಕೀಯ ತಂತ್ರಗಾರಿಕೆ

-ಅಕ್ತರ್‌ಸಾಬ್ ಯಾವ ಸೀಮೆ ದೊಣ್ಣೆನಾಯಕ

-ಕ್ಷೇತ್ರದ 63 ಸಾವಿರ ಜನ ಅನ್ಸಾರಿಯವರ ಜೊತೆಗಿದ್ದಾರೆ

ವಿಜಯಸಾಕ್ಷಿ ಸುದ್ದಿ, ಗಂಗಾವತಿ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಜೆಡಿಎಸ್‌‌ನ ಪಿ.ಅಕ್ತರ್ ಸಾಬ್ ಯಾವ ಸೀಮೆ ದೊಣ್ಣೆ ನಾಯಕ. ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಿದರೆ ಒಳ್ಳೇಯದು. ನಾವೇನಾದರೂ ಎರಡನೇ ನಾಲಿಗೆ ತೆರೆದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಗಂಗಾವತಿ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಆವಾಜ್ ಹಾಕಿದರು.

ಸೋಮವಾರ ಅನ್ಸಾರಿಯವರ ನಿವಾಸದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯನವರನ್ನು ನಮ್ಮ ನಾಯಕರಾಗಿ ಒಪ್ಪಲ್ಲ ಎಂಬ ಮುಸ್ಲಿಂ ಮುಖಂಡ ಅಕ್ತರ್‌ಸಾಬ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಅನ್ಸಾರಿ ಹಿಂದೆ 63 ಸಾವಿರ ಜನ ಕಾರ್ಯಕರ್ತರಿದ್ದೇವೆ…
ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡು ಎಂದು ಎಚ್ಚರಿಕೆ‌ ನೀಡಿದ ಅವರು,
ಮಸೀದಿಗಳು ಪ್ರಾರ್ಥನೆ ಮಾಡೋಕೆ ಇವೆ, ಆಣೆ ಮಾಡೋಕೆ ಅಲ್ಲ…
ರಾತ್ರಿ ಕುಡಿದು ಬರೋರಿಗೆ ಮಸೀದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀನ ಆಣೆ ಮಾಡೋಕೆ ಯಾವದರ ದರ್ಗಾಗೆ ಹೋಗು,ಮಠಕ್ಕೆ ಹೋಗು, ಆದ್ರೆ ಮಸೀದಿಗೆ ಬರಬೇಡ..
ದೇವೇಗೌಡ, ಕುಮಾರಸ್ವಾಮಿಯವರು ಅನ್ಸಾರಿಯನ್ನ ಮಂತ್ರಿ ಮಾಡಿಲ್ಲ..
ಅಲ್ಪ ಸಂಖ್ಯಾತರ ನಾಯಕ ಯಾರೂ ಇಲ್ಲ, ಮುಸ್ಲಿಂರ ಮತಕ್ಕಾಗಿ ಮಂತ್ರಿ ಮಾಡಿದ್ದಾರೆ. ಕೊಪ್ಪಳದಲ್ಲಿ ಜೆ.ಡಿ.ಎಸ್.ದ್ವಜ ಹಿಡಿಯೋರು ಯಾರೂ ಇರಲಿಲ್ಲ..
ಅನ್ಸಾರಿ ಬಂದ ಮೇಲೆ ಜೆ.ಡಿ.ಎಸ್ ಗೆ ಈ ಭಾಗದಲ್ಲಿ ಶಕ್ತಿ ಬಂದಿದೆ ಎಂದು ಶ್ಯಾಮಿದ್ ಕುಟುಕಿದರು.

ಅಲ್ಪಸಂಖ್ಯಾತರ ನಾಯಕ ಅನ್ಸಾರಿ ಸಾಹೇಬ್ರು. ಅನ್ಸಾರಿಯವರಿಗೆ ಸಿದ್ದರಾಮಯ್ಯನವರು ನಾಯಕ. ಸಿದ್ದರಾಮಯ್ಯನವರ ನಾಯಕತ್ವದಲ್ಲೇ ಅನ್ಸಾರಿ ಸಾಹೇಬ್ರು ಚುನಾವಣೆ ಎದುರಿಸಿ ಗೆದ್ದೇ ಗೆಲ್ಲುತ್ತಾರೆ. ಅನ್ಸಾರಿಯವರನ್ನು ಟೀಕಿಸುವವರು ತಾಕತ್ತಿದ್ದರೆ ಎಲೆಕ್ಷನ್‌ನಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಹಾಗೂ ಟಿ.ಎ.ಶರವಣ್ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಸಿದ್ದರಾಮಯ್ಯನವರು ಈಗಲೂ ಅಲ್ಪಸಂಖ್ಯಾತರ ಧ್ವನಿಯಾಗಿ ಘರ್ಜಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರ ನಾಯಕ ಎಂದು ಪುನರುಚ್ಛರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ದೇವರಮನಿ, ಮಹಮ್ಮದ್ ಹನೀಫ್, ಮೌಲಾಸಾಬ್, ಮೆಹಬೂಬ್ ಸಾಬ್ ಮತ್ತಿತರರು ಇದ್ದರು.

ಸರ್ಕಾರಿ ಇಲಾಖೆಗಳು, ಅಧಿಕಾರಿಗಳನ್ನೇ ಕೇಸರೀಕರಣ ಮಾಡೋದು ಎಷ್ಟು ಸರಿ ?

ವಿಜಯಸಾಕ್ಷಿ ಸುದ್ದಿ, ವಿಜಯಪುರ

ರಾಜ್ಯದ ಠಾಣೆಗಳಲ್ಲಿನ ಪೊಲೀಸರು ಕೇಸರಿ ಮಯಯಾಗುತ್ತಿದ್ದಾರೆ.‌ ಒಬ್ಬರೋ ಇಬ್ಬರೋ ಬೇಕಾದ್ರೆ ಕೇಸರಿ ವಸ್ತ್ರಗಳನ್ನು ಹಾಕಿಕೊಳ್ಳಲಿ. ಆದರೆ, ಠಾಣೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಕೇಸರಿಯಾಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಂದಗಿಯ ಮೊರಟಿಗಿಯಲ್ಲಿ ಪ್ರಚಾರದ ವೇಳೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಕೇಸರೀಕರಣ ಆರೋಪ ಸಮರ್ಥಿಸಿಕೊಂಡ ಮಾಜಿ ಸಿಎಂ, ಈ ವಿಚಾರವನ್ನು ನಾನು ಟ್ವೀಟ್ ಮೂಲಕ ಖಂಡಿಸಿದ್ದೇನೆ.

ಬಿಜೆಪಿ, ಆರ್.ಎಸ್.ಎಸ್. ಏನಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ಇಲಾಖೆಗಳು, ಅಧಿಕಾರಿಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ. ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಹೇಳಿದ್ದೆ ಎಂದು ಸಮರ್ಥಿಸಿಕೊಂಡರು.

ಸಾಣಾಪುರ ಕೆರೆಯಲ್ಲಿ ಇಬ್ಬರು ಐಟಿ ಉದ್ಯೋಗಿಗಳ ಸಾವು!

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ತಾಲೂಕಿನ ಸಾಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಹೈದರಾಬಾದ್ ಮೂಲದ ಇಬ್ಬರು ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.

ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ .

ಸಾಣಾಪುರ ಕೆರೆಯಲ್ಲಿ ಇಬ್ಬರು ಐಟಿ ಉದ್ಯೋಗಿಗಳ ಸಾವು!

0

ವಿಜಯಸಾಕ್ಷಿ ಸುದ್ದಿ,
ಗಂಗಾವತಿ: ತಾಲೂಕಿನ ಸಾಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಹೈದರಾಬಾದ್ ಮೂಲದ ಇಬ್ಬರು ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.

ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ .

error: Content is protected !!