ಅವರಪ್ಪನಿಗೆ ಹುಟ್ಟಿದ್ರೆ ಸೀಡಿ ಬಿಡುಗಡೆ ಮಾಡಲಿ. ಏನೇ ಮಾಡಿದರೂ ಯತ್ನಾಳ್ ನ ಕುಗ್ಗಿಸಲು ಸಾಧ್ಯವಿಲ್ಲ. ನನ್ನ ಬಾಯಿ ಬಂದ್ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ಅಶ್ಲೀಲ ಸೀಡಿ ಬಿಡುಗಡೆ ಊಹಾಪೋಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಜನ ಪರವಾಗಿ ಹೋರಾಟ ಮಾಡುವವನು. ಯಾವ ಭಯವೂ ಇಲ್ಲ. ನೀರಾವರಿ ಇಲಾಖೆಯಲ್ಲಿ ನಡೆದ ಕೋಟ್ಯಾಂತರ ಅವ್ಯವಹಾರ, 12 ಪರ್ಸೆಂಟ್ ವಿಷಯ ಹೇಳಿದ್ದೇ ನಾನು. ಅದನ್ನೇ ಈಗ ಇನಕಂ ಟ್ಯಾಕ್ಸ್ ನವರು ಒಪ್ಪಿಕೊಂಡಿದ್ದಾರೆ.
ಇಂತಹ ಭ್ರಷ್ಟಾಚಾರಗಳನ್ನು ಹೊರ ತೆಗೆದಿದ್ದಕ್ಕೆ ಭಯಪಟ್ಟು ಕೃತಕ ಸೀಡಿ ತಯಾರಿಸಿದ್ದಾರೆ. ಈ ಪಿತೂರಿಯಲ್ಲಿ ನಮ್ಮ ಪಕ್ಷದವರು ಸೇರಿದಂತೆ ಸರ್ವ ಪಕ್ಷದವರು ಇದ್ದಾರೆ. ಇದಕೆಲ್ಲ ನಾನು ಹೆದರಲ್ಲ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಟಿಪ್ಪರ ಮೂಲಕ ವೇಸ್ಟೇಜ್ ಕಟಿಂಗ್ ಡಾಂಬರನ್ನು ಅನಲೋಡ ಮಾಡುವಾಗ ವಿದ್ಯುತ್ ಸ್ಪರ್ಶವಾಗಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹಳೆ ರಸ್ತೆಯ ಡಾಂಬರನ್ನು ಕಿತ್ತು ಟಿಪ್ಪರ ಮೂಲಕ ಮಲಪ್ರಭಾ ನದಿಗೆ ಹೋಗುವ ಹಳೆ ಸೇತುವೆಯ ಬಳಿ ಅನಲೋಡ ಮಾಡುವಾಗ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ಟಿಪ್ಪರಗೆ ಸ್ಪರ್ಶವಾಗಿದ್ದು, ಚಾಲಕ ಮೋತಿಲಾಲ್ ನಾಮದೇವ ಲಮಾಣಿ (22) ಎಂಬಾತ ಮೃತಪಟ್ಟಿದ್ದಾನೆ.
ರಾಜದೀಪ ಕಂಪನಿಯು ಯಾವುದೇ ಮುನ್ನೆಚ್ಚರಿಕೆ ತಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜದೀಪ ಕಂಪನಿಯ ಸೂಪರ್ ವೈಸರ್ ಮೇಲೆ ಪ್ರಕರಣ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಹಾವೇರಿಯಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಗುತ್ತಲ ಸಮೀಪದ ನೆಗಳೂರು ಗ್ರಾಮದಲ್ಲಿ ತಡರಾತ್ರಿ ಸಿಡಿಲು ಬಡಿದು ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದ ಗೋಪುರ ಭಗ್ನಗೊಂಡಿದೆ. ಇದರಿಂದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೆಡ್ಲೇರಿ ಬೀರಪ್ಪ ದೇವರ ಪವಾಡ
ಧೋ… ಎಂದು ಸುರಿಯುತ್ತಿರುವ ಮಳೆಯಲ್ಲೂ ಕಟ್ಟಿಗೆಯ ಒಲೆ ಹೊತ್ತಿ ಉರಿಯುದನ್ನು ಕಂಡು ಜನರು ಮೂಕವಿಸ್ಮಿತರಾದರು. ಮೆಡ್ಲೇರಿ ಬೀರಪ್ಪ ದೇವರ ಪವಾಡ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಮೆಡ್ಲೇರಿಯಲ್ಲೂ ಧಾರಾಕಾರ ಮಳೆಯಾಗಿದೆ. ಆದರೆ, ಬೀರಪ್ಪ ದೇವರಿಗೆ ಪ್ರಸಾದ ಮಾಡಲು ದೇವಸ್ಥಾನದ ಮುಂದೆ ಹಚ್ಚಿದ ಸೌದೆ ಒಲೆ ಮಳೆಯ ನಡುವೆಯೂ ಹಾಗೆಯೇ ಉರಿಯುತ್ತಿತ್ತು. ಹೀಗಾಗಿ, ಇದೊಂದು ಪವಾಡವೆಂದು ಭಕ್ತರು ನಂಬಿದ್ದಾರೆ.
ಯಡಿಯೂರಪ್ಪರನ್ನು ಅವರ ಹುಟ್ಟುಹಬ್ಬದ ವೇಳೆ ಭೇಟಿ ಮಾಡಿದ್ದೆ. ನಂತರ ಭೇಟಿ ಮಾಡಿಯೇ ಇಲ್ಲ. ಭೇಟಿ ಮಾಡಿದ್ದು ಪ್ರೂವ್ ಮಾಡಿದ್ರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ಸಿಎಂ ಭೇಟಿ ಮಾಡಿಲ್ಲ. ಸಭೆ, ಸದನದಲ್ಲಿ ಭೇಟಿ ಬಿಟ್ಟರೆ ವೈಯಕ್ತಿಕವಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿಯೇ ಇಲ್ಲ.
ನಾನು ತಾಲೂಕು ಬೋರ್ಡ್ ಮೆಂಬರ್ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಸಹ ಅಧಿಕಾರದಲ್ಲಿದ್ದ ವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ಧಾಂತ. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲ ಅದು ಏನು ? ಆಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತಗೋಲಿಕ್ಕೆ ಹೋಗಿದ್ರಾ ಅಂತವರಿಂದ ಪಾಠ ಕಲಿಯಬೇಕಾಗಿ ಬಂದಿರೋದು ನಮ್ಮ ದುಃಸ್ಥಿತಿ ಎಂದರು.
ಪ್ರಧಾನಿ ಬಿಜೆಪಿಯವರು, ಯಡಿಯೂರಪ್ಪ ಸಹ ಬಿಜೆಪಿಯಲ್ಲಿದ್ದಾರೆ. ನನ್ನ ಮಾತು ಕೇಳಿ ಐಟಿ ರೇಡ್ ಮಾಡ್ತಾರಾ ಎಂದು ಪ್ರಶ್ನಿಸಿದರು.
ಟಿವಿಎಸ್ ಬೈಕ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಮುಂದೆ ಹೊರಟಿದ್ದ ಬೈಕ್ ಗೆ ಹಿಂದಿನಿಂದ ಕ್ಯಾಂಟರ್ ಗುದ್ದಿದಾಗ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಸವಾರ ಪುಟಿದು ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾನೆ.
ಡಿವೈಡರ್ ಗೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಲೀಕ್ ಆಗಿ ಬೈಕ್ ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ತುಮಕೂರು ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ ಎಸ್ ಎಸ್ ವಿರುದ್ಧ ಮಾತಾಡಿದ್ರೆ ಬೆಂಕಿ ಜೊತೆ ಸರಸ ಆಡಿದಂಗೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ, ಮಾಜಿ ಸಿಎಂ ಸಿದ್ರಾಮಯ್ಯ ತಿರುಗೇಟು ನೀಡಿದ್ದು, ನಾನು 20 ವರ್ಷದಿಂದ ಮಾತಾಡ್ತಾನೆ ಇದೀನಿ ಏನಾಗಿದೆ. ಬೆಂಕಿನೂ ಇಲ್ಲ, ಏನೂ ಇಲ್ಲ ಸುಮ್ನೆ ನಡೀರಿ ಎಂದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ನಾವೇನು ಬೈ ಎಲೆಕ್ಷನ್ ಬರಬೇಕು ಎಂದು ಬಯಸಿರಲಿಲ್ಲ. ಆದರೂ ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿ ಕೊಡುವ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಕಳೆದ ವಾರ ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷದ ವದಂತಿಯ ಬೆನ್ನಲ್ಲಿಯೇ ಈಗ ತಾಲೂಕಿನ ಮಾರನಬಸರಿ ಗ್ರಾಮದ ಹಳ್ಳದಲ್ಲಿ ಮುಂಜಾನೆ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಇದನ್ನು ನೋಡಿದ ವ್ಯಕ್ತಿ ಗ್ರಾಮಸ್ಥರಿಗೆ ಹೇಳಿದ್ದಾನೆ. ಇದರಿಂದಾಗಿ ಆತಂಕಗೊಂಡ ಜನ ಊರು ಬಿಟ್ಟು ಹೊರಗೆ ಬಾರದಂತಾಗಿದೆ. ಗ್ರಾಮದಲ್ಲಿ ಗುಂಪುಗೂಡಿ ಚರ್ಚೆ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ಕೊಡಲು ಒತ್ತಾಯಿಸಿದ್ದಾರೆ.
ಬೆಳಿಗ್ಗೆಯೇ ಜಮೀನುಗಳಿಗೆ ತೆರಳಿದ್ದ ಜನರು ವಾಪಾಸು ಊರಿಗೆ ಬರುವಂತೆ ಗ್ರಾಮ ಪಂಚಾಯತಿ ವತಿಯಿಂದ ಧ್ವನಿವರ್ಧಕದ ಮೂಲಕ ಸಾರಲಾಗಿದೆ.
ಕೇವಲ ಮಾರನಬಸರಿ ಗ್ರಾಮದಲ್ಲಿ ಅಷ್ಟೇ ಅಲ್ಲ ಅಕ್ಕಪಕ್ಕದ ಕಳಕಾಪೂರ, ನಿಡಗುಂದಿ ಗ್ರಾಮದ ಬಳಿಯೂ ಕಾಣಿಸಿಕೊಂಡಿತ್ತು. ಅದೀಗ ಮಾರನಬಸರಿ ಗ್ರಾಮದತ್ತ ತೆರಳಿದೆ ಎಂಬ ಗಾಳಿ ಸುದ್ದಿಯೂ ಹರದಾಡುತ್ತಿದೆ. ಹೀಗಾಗಿ ಈ ಮೂರು ಗ್ರಾಮದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸತ್ಯಾಸತ್ಯತೆ ಕುರಿತು ಜನರಿಗೆ ಮನವರಿಕೆ ಮಾಡಿ ಮುಂಜಾಗ್ರತೆ ಕೈಗೊಳ್ಳಲು ಮುಂದಾಗಬೇಕಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಮಾರನಬಸರಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿ ಹಲವು ಜನರ ಮೇಲೆ ದಾಳಿ ಮಾಡಿತ್ತು. ಆಕ್ರೋಶಗೊಂಡ ಜನ ಕರಡಿ ಥಳಿಸಿದ್ದರು. ನಂತರ ಅಸ್ವಸ್ಥಗೊಂಡಿದ್ದ ಕರಡಿ ಮೃತಪಟ್ಟಿತ್ತು.
ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಸೆಪ್ಟೆಂಬರ್29ರ ಮಧ್ಯರಾತ್ರಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆ ದೋಚಿದ್ದ ಮೂವರು ಅಂತರ್ ಜಿಲ್ಲಾ ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಐಷಾರಾಮಿ ಕಾರಲ್ಲಿ ಬಂದು ಕಳ್ಳತನ ಮಾಡಿದ್ದ ಹೊಸಪೇಟೆಯ ಚಪ್ಪರದಹಳ್ಳಿ ಎಸ್ ಆರ್ ನಗರದ ಬಯಲು ಆಂಜನೇಯ ದೇವಸ್ಥಾನದ ಬಳಿಯ ನಿವಾಸಿ, ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಡುವ ಗೋಣಿಬಸಪ್ಪ ಅಲಿಯಾಸ್ ಗೋಣಿ ಬಸವೇಶ್ವರ ತಂದೆ ಸೋಮಪ್ಪ ಬಾರಕೇರ, ದೇವಾಂಗಪೇಟೆಯ ಶಂಕ್ರಮ್ಮನ ಗುಡಿ ಬಳಿಯ ನಿವಾಸಿ ಬಿ ಸಾಗರ್ ತಂದೆ ಹುಲುಗಪ್ಪ ಹಾಗೂ ವೃತ್ತಿಯಲ್ಲಿ ಡ್ರೈವರ್ ಆಗಿರುವ ಐದನೇ ವಾರ್ಡ್ ನ ಹಂಪಿ ಇಂಟರ್‌ನ್ಯಾಷನಲ್ ಹೋಟೆಲ್ ಹತ್ತಿರದ ನಿವಾಸಿ ವೈ. ಲಕ್ಷ್ಮಣ್ಣ ಅಲಿಯಾಸ್ ಲಕ್ಕಿ ತಂದೆ ಟಿ. ಯಲ್ಲಪ್ಪ ಬಂಧಿತರು.
ಬಂಧಿತರಿಂದ ಐದು ಸಾವಿರ ನಗದು ಹಾಗೂ ಮೂರು ಸಾವಿರ ಮೌಲ್ಯದ ಟೈಟನ್ ವಾಚ್ ಬಿಟ್ಟು, ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆಯಲ್ಲಿ ಕಳ್ಳತನವಾಗಿದ್ದ ಎಲ್ಲಾ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ ಹುಂಡೈ ಕಾರು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಿದೆ.
ಎಸ್ಪಿ ಯತೀಶ್ ಎನ್, ಶಂಕರ್ ಎಂ. ರಾಗಿ, ಸಿಪಿಐ ಸುಧೀರಕುಮಾರ್ ಎಂ. ಬೆಂಕಿ ಅವರ ಮಾರ್ಗದರ್ಶನದಲ್ಲಿ, ರೋಣ ಪಿಎಸ್ಐ ವಿನೋದ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರ್ ತಿಗರಿ, ವೈ. ಎಚ್. ಬೇವಿನಗಿಡದ, ಎಚ್. ಎಸ್. ಶಂಕ್ರಿ, ವಿ.ವೈ. ಹಟ್ಟಿ, ಮುತ್ತಪ್ಪ ಭಾವಿ, ಎಸ್.ಎನ್. ಚಿಮ್ಮನಕಟ್ಟಿ, ಎಸ್.ಪಿ. ಭಗಲಿ, ಎಸ್.ಬಿ. ಗೂಳಪ್ಪನವರ್, ಹನಮಂತಪ್ಪ ಹುಲ್ಲೂರ ಹಾಗೂ ಬೆರಳು ಮುದ್ರೆ ಘಟಕದ ಪಿಎಸ್ಐ ವೈ. ಕೆ. ವಡಗೇರಿ, ಎಎಸ್ಐ ಡಿ.ಎಂ. ಮ್ಯಾಗೇರಿ, ಮುಖ್ಯ ಪೇದೆ ಅಬ್ದುಲ್ ಘನಿ, ಡಿಎಆರ್ ನ ಎಆರ್ ಎಸ್ ಐ ಗುರು ಬೂದಿಹಾಳ, ಸೈಬರ್ ಕ್ರೈಮ್ ನ ಆನಂದ್ ಸಿಂಗ್ ದೊಡ್ಡಮನಿ ಕಾರ್ಯಚರಣೆ ನಡೆಸಿ, ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾನು ತಪ್ಪು ಮಾಡಿದ್ದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆ ಎಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ. ಮುಂದೆಯೂ ಸಿಗಲ್ಲ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು.
ಜಿಲ್ಲೆಯ ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನತ್ತಾರೆ. ಅದಕ್ಕಾಗಿ ನಾನು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ಚಿಂಚನಸೂರು ಹೇಳಿದರು.
ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನೇ ನಿಮ್ಮ ಸೇವೆ ಮಾಡುತ್ತೇನೆ, ಎಲ್ಲಾ ಜಯಂತಿಗೂ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ ಎಂದು ಚಿಂಚನಸೂರು ನೋವು ತೋಡಿಕೊಂಡರು.
ಬಟ್ಟೆ ಹಾಕೊಳ್ಳದಿದ್ರೆ ಹುಚ್ಚ ಅನ್ತಾರೆ ಅದಕ್ಕೆ ಬಟ್ಟೆ ಹಾಕೊಳ್ತೇನೆ -ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಬುರಾವ್ ಚಿಂಚನಸೂರ ಬೇಸರದ ನುಡಿ ವಿಜಯಸಾಕ್ಷಿ ಸುದ್ದಿ ಯಾದಗಿರಿ ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನುತ್ತಾರೆ ಅದಕ್ಕೆ ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು. ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನು. ನಾನು ನಿಮ್ಮ ಸೇವೆ ಮಾಡುತ್ತೇನೆ. ನಾನು ಎಲ್ಲಾ ಜಯಂತಿಗೆ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ. ನಾನು ತಪ್ಪು ಮಾಡಿದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ ಮುಂದೆಯೂ ಸಿಗಲ್ಲ ಎಂದು ಹೇಳಿದರು.