Home Blog Page 3355

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟಕ್ಕಿಲ್ಲ ಬ್ರೇಕ್; ಸರಕಾರದ ಯೋಜನೆಗೆ ಮತ್ತೆ ಮತ್ತೆ ಕನ್ನ!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಅಲ್ಲಲ್ಲಿ ಅನ್ನ ಭಾಗ್ಯ ಅಕ್ಕಿ ಕಳ್ಳ ಸಾಗಾಟ ಎಗ್ಗಿಲ್ಲದೇ ನಡೆದಿದೆ. ಗದಗ ನಗರದಲ್ಲಂತೂ ಕಳೆದ ಹಲವು ದಿನಗಳಿಂದ ಅಕ್ಕಿ ದಂಧೆ ನಿರಂತರವಾಗಿ ನಡೆಯುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯಲ್ಲಿ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡುವಾಗ ನಗರ ಠಾಣೆಯ ಪೊಲೀಸರ ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡಿದ್ದರು.

ಹಾವೇರಿ ಪಾಸಿಂಗ್ ಹೊಂದಿದ್ದ ಕೆಎ-27-ಬಿ 9937 ವಾಹನದಲ್ಲಿ ಸುಮಾರು 94 ಸಾವಿರ ರೂ,. ಮೌಲ್ಯದ 41 ಕ್ವಿಂಟಲ್ ಅಕ್ಕಿ, ಹಾಗೂ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಗೂಡ್ಸ್ ವಾಹನದ ಮಾಲೀಕ ಹಾಗೂ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸರಕಾರದ ವಿವಿಧ ಯೋಜನೆಗಳಲ್ಲಿ ಬಡವರಿಗೆ ಕೊಟ್ಟ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡೋದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ದಂಧೆ ವ್ಯಾಪಕವಾಗಿ ನಡೆದಿತ್ತು.

ಬಹಿರಂಗವಾಗಿ ನಡೆಯುತ್ತಿದ್ದ ದಂದೆ ಈಗ ಕದ್ದು ಮುಚ್ಚಿ ನಡೆಯುತ್ತಿದೆ. ಬೊಲೆರೋ ಗೂಡ್ಸ್, ಟಂಟಂ, ಟಾಟಾಏಸ್ ವಾಹನಗಳ ಮೂಲಕ ಅಣ್ಣಿಗೇರಿಗೆ ಅಸುಂಡಿ, ಕುರ್ತಕೋಟಿ, ಸೈದಾಪೂರ ಮಾರ್ಗವಾಗಿ, ಮುಳಗುಂದದಿಂದ ಹುಬ್ಬಳ್ಳಿಗೆ, ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿಗೆ, ಹೀಗೆ ವಿವಿಧ ದಾರಿಗಳಲ್ಲಿ ಅಕ್ಕಿ ಸಾಗಾಟ ನಡೆಯುತ್ತಿದೆ ಎನ್ನಲಾಗಿದೆ.

ಈ ಕದ್ದು ಮುಚ್ಚಿ ನಡೆಯುತ್ತಿರುವ ದಂದೆಯನ್ನೇ ಕೆಲವು ಪುಡಾರಿಗಳು, ರೌಡಿ ಶೀಟರ್ಸ್ ಹಣ ಗಳಿಸುವ ಮಾರ್ಗವನ್ನಾಗಿ ರೂಪಿಸಿಕೊಂಡಿದ್ದಾರೆ. ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುವ ಈ ದಂಧೆಯ ಹಿಂದೆ ಬಿದ್ದಿರುವ ಈ ಪುಡಾರಿಗಳು ಅಕ್ಕಿ ಸಾಗಾಟದ ವಾಹನ ಹಿಡಿದು ಹಣಕ್ಕೆ ಬೇಡಿಕೆ ಇಡ್ತಾರೆ. ಅವರು ಕೇಳಿದಷ್ಟು ಹಣ ಕೊಡದಿದ್ದರೆ ತಮ್ಮ ಪರಾಮಾಪ್ತ ಪೊಲೀಸರಿಗೆ ಮಾಹಿತಿ ನೀಡ್ತಾರೆ. ಅದನ್ನೇ ಪರಮಾಪ್ತ ಪೊಲೀಸರು ಇಂತಹ ಲಾರಿ ಹಿಡಿದು ಹಿರಿಯ ಅಧಿಕಾರಿಗಳಿಂದ ಬೆನ್ನು ತಟ್ಟಿಸಿಕೊಳ್ಳೊದು ಸಾಮಾನ್ಯವಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಅನ್ನ ಭಾಗ್ಯದ ಅಕ್ಕಿ ಸಿಕ್ಕಿತ್ತು. ಆದರೆ ಪ್ರಕರಣ ದಾಖಲು ಆಗಲಿಲ್ಲ. ರಾಜೀಪಂಚಾಯಿತಿ ಮೂಲಕ ಅದಕ್ಕೆ ಎಳ್ಳು ನೀರು ಬಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಉನ್ನತ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬೀಳಲಿದೆ.

ಕೊರೋನಾ; ಶುಕ್ರವಾರ 74 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 23 ಶುಕ್ರವಾರ ಜಿಲ್ಲೆಯಲ್ಲಿ 74 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಗದಗ ನಗರ ಹಾಗೂ ತಾಲೂಕಿನಲ್ಲಿ 44 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 05, ನರಗುಂದದ 08, ರೋಣ ತಾಲೂಕಿನಲ್ಲಿ-11, ಹಾಗೂ ಶಿರಹಟ್ಟಿ ತಾಲೂಕಿನ-02, ಹೊರಜಿಲ್ಲೆಯ 04 ಜನರಿಗೆ ಸೋಂಕು ತಗುಲಿದೆ.

ಶುಕ್ರವಾರ 74 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11951 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 30 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11350 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 460 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 294 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 329294 ಮಾದರಿಗಳಲ್ಲಿ 317049 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾರಿಗೆ ಬಸ್ ಡಿಕ್ಕಿ; ಪತಿ ಸಾವು, ಪಿಡಿಒ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಸಂಸ್ಥೆಯ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತಪಟ್ಟು ಮಹಿಳೆ ಗಾಯಗೊಂಡ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ನಡೆದಿದೆ.

ಮೃತನನ್ನು ಗಜೇಂದ್ರಗಡದ ಕಳಕಪ್ಪ ಕೊಟಗಿ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಮಹಿಳೆಯನ್ನು ಸರ್ವಮಂಗಳಾ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗದಗನಿಂದ ಗಜೇಂದ್ರಗಡ ಕಡೆ ಹೊರಟಿದ್ದ ಕಾರಿಗೆ ಎದುರಿಗೆ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ನಂತರ ಕಾರು ನಜ್ಜುಗುಜ್ಜಾಗಿದೆ.

ಗಾಯಗೊಂಡ ಸರ್ವಮಂಗಳಾ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಸ್ಐ ಅಜಿತ ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಡ್ ಸಿಗದೇ ವೃದ್ಧೆಯ ಪರದಾಟ! ಗದಗ ಜಿಮ್ಸ್ ನಲ್ಲಿ ಬೆಡ್ ಕೊರತೆ ?

0

ವಿಜಯಸಾಕ್ಷಿ ಸುದ್ದಿ, ಗದಗ

ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೆ ಪರದಾಡುತ್ತಿರುವ ಸಂಗತಿಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಗದಗ ಜಿಮ್ಸ್ ನಲ್ಲಿಯೂ ಬೆಡ್ ಕೊರತೆ ಇರುವುದು ಸ್ಪಷ್ಟವಾಗುತ್ತಿದೆ.
ಕಾರಣ, ಶುಕ್ರವಾರ ಗದಗನ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್ ನಲ್ಲಿ ಸೋಂಕಿತ ವೃದ್ಧ ರೋಗಿಯೊಬ್ಬರು ಬೆಡ್ ಗಾಗಿ ಪರದಾಡಿದ್ದಾರೆ.

70 ವರ್ಷದ ವೃದ್ಧೆಯೊಬ್ಬರು ನಿನ್ನೆಯಿಂದ ಜಿಮ್ಸ್ ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಹೆಚ್ಚುವರಿ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ವೃದ್ಧೆಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಬೇಕಿತ್ತು. ಹೀಗಾಗಿ ವೈದ್ಯರು ವೃದ್ಧೆಯನ್ನ ಕೋವಿಡ್ ಸೆಂಟರ್ ಗೆ ಶಿಫಾರಸು ಮಾಡಿದರು.
ಆದರೆ ಕೋವಿಡ್ ಸೆಂಟರ್ ನಲ್ಲಿ ಬೆಡ್ ಇಲ್ಲದೇ ಸಿಬ್ಬಂದಿ ಅತ್ತಿಂದಿತ್ತ ಅಲೆದಾಡಿಸಿ ಪರದಾಡುವಂತೆ ಮಾಡಿದರು.

ಇದರಿಂದಾಗಿ ವೃದ್ಧೆಯ ಸಂಬಂಧಿಕರು ಕೋವಿಡ್ ಸೆಂಟರ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ವಿರುದ್ಧ ಹರಿಹಾಯ್ದ ನಂತರ ಕೊನೆಗೂ ಬೆಡ್ ಕಲ್ಪಿಸಿಕೊಟ್ಟು, ಚಿಕಿತ್ಸೆ ಮುಂದುವರಿಸಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡ ಜಿಲ್ಲೆಯಲ್ಲಿ ಬೆಡ್ ಸಿಗದೆ ವೃದ್ಧೆ ಎರಡು ಗಂಟೆಗೂ ಹೆಚ್ಚು ಪರಿತಪಿಸುವಂತಾಗಿದ್ದು, ವೈದ್ಯಕೀಯ ಸೌಲಭ್ಯದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ನೇಣಿಗೆ ಶರಣು

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರು ನೇಣಿಗೆ ಶರಣರಾಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಗುರುವಾರ ಸಂಜೆ ತಮ್ಮ ‌ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದು, ಮಾನಸಿಕ ಖಿನ್ನತೆಯಿಂದ ನೊಂದಿದ್ದರು. ಗುರುವಾರ ಬೆಳಗ್ಗೆ ಪುರಸಭೆ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಮನೆಗೆ ವಾಪಸ್ ಆಗಿದ್ದ ಅವರು ತಮ್ಮ ನಿವಾಸದಲ್ಲಿ ನೇಣಿಗೆ ಶರಣರಾಗಿದ್ದಾರೆ.ಕುಷ್ಟಗಿ ಪಟ್ಟಣದ 16ನೇ ವಾರ್ಡ್ ಪಕ್ಷೇತರ ಸದಸ್ಯೆಯಾಗಿ ಚುನಾಯಿತರಾಗಿದ್ದ ರಾಜೇಶ್ವರಿ ಆಡೂರು ಪುರಸಭೆ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸುತ್ತಿದ್ದರು.
ಇವರ ಪತಿ ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಪತಿ‌ ಹಾಗೂ ಮೂವರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ

ಕೊರೋನಾ; ಗದಗ ಜಿಲ್ಲೆಯಲ್ಲಿ ಗುರುವಾರವೂ 73 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 22 ಗುರುವಾರ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಗದಗನಲ್ಲಿ ಅತಿ ಹೆಚ್ಚು ಸೋಂಕು ವ್ಯಾಪಿಸುತ್ತದೆ. ಗದಗ ನಗರ ಹಾಗೂ ತಾಲೂಕಿನಲ್ಲಿ 61 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 01, ನರಗುಂದದ 01, ರೋಣ ತಾಲೂಕಿನಲ್ಲಿ-04, ಹಾಗೂ ಶಿರಹಟ್ಟಿ ತಾಲೂಕಿನ-04, ಹೊರಜಿಲ್ಲೆಯ 02 ಜನರಿಗೆ ಸೋಂಕು ತಗುಲಿದೆ.

ಗುರುವಾರ 73 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11877 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 30 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11320 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 416 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 305 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 327029 ಮಾದರಿಗಳಲ್ಲಿ 314847 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೋನಾ ಹಾವಳಿ; ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಾರ್ವಜನಿಕರಲ್ಲಿ ಸೈಯದ್ ಖಾಲಿದ ಕೊಪ್ಪಳ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ಸಾಮಾಜಿಕ ಅಂತರ ಕಾಪಾಡಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಬೆಂಬಲ ನೀಡಲು ಸಾರ್ವಜನಿಕರಲ್ಲಿ ಸಾಮಾಜಿಕ ಕಾರ್ಯಕರ್ತ ಸಯ್ಯದ್ ಖಾಲಿದ್ ಕೊಪ್ಪಳ ವಿನಂತಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಕೊಪ್ಪಳ, ದೇಶದಲ್ಲಿ ಕೊರೋನಾ ಎರಡನೇ ಅಲೆ ಬಂದಿದ್ದು ಸಾಮಾನ್ಯ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಂಪೂರ್ಣವಾಗಿ ಸಹಕಾರ ನೀಡಬೇಕು, ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಬೇಕು ಎಂದು ಸಯ್ಯದ್ ಖಾಲಿದ್ ಕೊಪ್ಪಳ ಮನವಿ ಮಾಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್; ಬ್ಯಾಂಕ್ ನೌಕರ ಸೇರಿ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಐಪಿಎಲ್ 20-20 ಪಂದ್ಯದ ಮೇಲೆ ಒಂದು ಸಾವಿರ ರೂಪಾಯಿಗೆ ಎರಡು ಸಾವಿರ ಕೊಡ್ತೀವಿ ಅಂತ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಕೆವಿಜಿ ಬ್ಯಾಂಕ್ ನೌಕರ ಹಾಗೂ ಬುಕ್ಕಿ ಸೇರಿದಂತೆ ನಾಲ್ವರನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

ರೋಣ ಪಟ್ಟಣದ ದೌಲತ್ ಗೌಡ ಪ್ಲಾಟ್ ನಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.

ದಾಳಿ ವೇಳೆ ನಗದು ಸೇರಿದಂತೆ 10 ಸಾವಿರ ರೂ ಮೌಲ್ಯದ ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬೆಟ್ಟಿಂಗ್ ನಲ್ಲಿ ತೊಡಗಿದ್ದ ಪ್ರಕಾಶ್ ದೇವೆಂದ್ರಪ್ಪ ಪತ್ತಾರ, ಬಸವರಾಜ್ ಶರಣಪ್ಪ ಗದುಗಿನ, ಅಶೋಕ ಬಸಪ್ಪ ಹುನಗುಂಡಿ ಹಾಗೂ ಗದಗನ ಮುಖ್ಯ ಬುಕ್ಕಿ ಜಗ್ಗು ಕುಂಬಾರ ಎಂಬುವವರನ್ನು ಬಂಧಿಸಲಾಗಿದೆ ಎಂದು ರೋಣ ಪೊಲೀಸರು ತಿಳಿಸಿದ್ದಾರೆ.

ಕೊರೋನಾ; ಜಿಲ್ಲೆಯಲ್ಲಿ ಬುಧವಾರವೂ ಮುಂದುವರೆದ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 21 ಬುಧವಾರ ಜಿಲ್ಲೆಯಲ್ಲಿ 72 ಜನರಿಗೆ ಸೋಂಕು ತಗುಲಿದ್ದು, ಸೋಂಕಿನ ತೀವ್ರತೆ ಮುಂದುವರೆದಿದೆ. ಗದಗ ನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಮ್ಮೆ ಹಾಫ್ ಸೆಂಚುರಿ ಬಾರಿಸಿದ್ದು, 52 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 01, ನರಗುಂದದ 06, ರೋಣ ತಾಲೂಕಿನಲ್ಲಿ-09, ಹಾಗೂ ಶಿರಹಟ್ಟಿ ತಾಲೂಕಿನ-02, ಹೊರಜಿಲ್ಲೆಯ 03 ಜನರಿಗೆ ಸೋಂಕು ತಗುಲಿದೆ.

ಬುಧವಾರ 72 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11804 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 25 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11290 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 373 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 313 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 325146 ಮಾದರಿಗಳಲ್ಲಿ 313029 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಯೋ ಮೊಬೈಲ್ ಟವರ್ ಸ್ಥಾಪನೆ ಹೆಸರಲ್ಲಿ ಲಕ್ಷಾಂತರ ರೂ ದೋಖಾ

ವಿಜಯಸಾಕ್ಷಿ ಸುದ್ದಿ, ಗದಗ

ನಾವು ಮುಂಬೈನಿಂದ ರಿಲಾಯನ್ಸ್ ಗ್ರೂಪ್ ನಿಂದ ಮಾತಾಡ್ತಾ ಇರೋದು…..ನಿಮ್ಮ ಪ್ಲಾಟ್ ನಲ್ಲಿ ರಿಲಾಯನ್ಸ್ ಜಿಯೋ ಟವರ್ ಹಾಕ್ತೀವಿ. ನಿಮಗೆ 60 ಲಕ್ಷ ರೂಪಾಯಿ ಹಣ ಕಂಪನಿಯಿಂದ ಕೊಡ್ತೀವಿ….ಹೀಗಂತ ಮೊಬೈಲ್ ಕರೆ ಮಾಡಿದ ಇಬ್ಬರು ಖದೀಮರು ಕಾರ್ಪೆಂಟರ್ ಒಬ್ಬನಿಂದ ಲಕ್ಷಾಂತರ ರೂ, ಹಣ ದೋಚಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.

ಅಬ್ಬಿಗೇರಿ ಗ್ರಾಮದ ಕಾರ್ಪೆಂಟರ್ ಮುತ್ತಪ್ಪ ಮಾರುತೆಪ್ಪ ಬಂಡಿವಡ್ಡರ ಎಂಬುವವರು ಮೋಸಕ್ಕೊಳಗಾಗಿ ದುಡ್ಡು ಕಳೆದುಕೊಂಡವರು.

ಮುಂಬೈ ರಿಲಾಯನ್ಸ್ ಕಂಪನಿಯ ಹೆಸರಿನಲ್ಲಿ ರಾಜಾರಾಮ್ ಹಾಗೂ ಸೋಮಶೇಖರ್ ಎಂಬುವವರು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ಹಂತಹಂತವಾಗಿ 2ಲಕ್ಷ, 20 ಸಾವಿರಕ್ಕೂ ಹೆಚ್ಚು ಹಣವನ್ನು ತಮ್ಮ ಅಕೌಂಟ್ ನಂಬರಿಗೆ ಹಾಕಿಸಿಕೊಂಡು ಜಿಯೋ ಮೊಬೈಲ್ ಟವರ್ ಹಾಕದೇ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ಮೋಸ ಹೋದ ಮುತ್ತಪ್ಪ ದೂರು ನೀಡಿದ್ದಾರೆ.

error: Content is protected !!