ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 7 ಕೋಟಿ ದರೋಡೆ ಬೆನ್ನಲ್ಲೇ ಪೊಲೀಸ್ ಇಲಾಖೆ ಇದೀಗ ಅಲರ್ಟ್ ಆಗಿದ್ದು ಹೊಸ ಮಾರ್ಗಸೂಚಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಎಟಿಎಂ ವಾಹನವನ್ನ ಹೊತ್ತೊಯ್ದು, ಏಳು ಕೋಟಿ ದೋಚಿದ್ದ ಕೇಸ್ ಬೆಂಗಳೂರು ಪೊಲೀಸರ ನಿದ್ದೆ ಭಂಗ ಮಾಡಿತ್ತು. ಆದರೆ ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದರು. ಸದ್ಯ ಇದರಿಂದ ಎಚ್ಚೆತ್ತಿರುವ ಪೊಲೀಸರು ಇದೀಗ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಸಿದ್ದಾರೆ.
ಎಸ್, ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7.1 ಕೋಟಿ ರೂ. ದರೋಡೆ ಕೇಸ್ ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಅಲರ್ಟ್ ಆಗಿದೆ. ಸಿಎಂಎಸ್ ಸೆಕ್ಯೂರಿಟಿಯಿಂದ ಪದೇ ಪದೇ ಭದ್ರತಾ ಲೋಪ ಆಗುತ್ತಿರುವುದರಿಂದ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ಆರ್ಬಿಐ ಮೂಲಕವೇ ಬ್ಯಾಂಕ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಕರ್ನಾಟಕವನ್ನೇ ಎಟಿಎಂ ವಾಹನದ ರಾಬರಿ ಕೇಸ್ ತಾರ್ಕಿಕ ಅಂತ್ಯಕ್ಕೆ ಬಂದಿದೆ. 9 ಆರೋಪಿಗಳನ್ನ ಹೆಡೆಮುರಿ ಕಟ್ಟಿರುವ ಖಾಕಿ ಪಡೆ 98% ಹಣವನ್ನ ವಶಕ್ಕೆ ಪಡೆದಿದೆ. ಆದರೆ ಎಟಿಎಂ ವಾಹನಗಳ ಭದ್ರತಾ ಲೋಪ, ರಾಬರಿಗಳಲ್ಲಿ ಸಿಬ್ಬಂದಿಯೇ ಭಾಗಿ ಆಗುತ್ತಿರುವುದರಿಂದ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ.
CMS ಸೆಕ್ಯೂರಿಟಿ ಸಂಸ್ಥೆಯ ಭದ್ರತಾ ಲೋಪ ಕಂಡು ಬಂದ ಹಿನ್ನಲೆ ಈಗಾಗಲೇ ಸಂಸ್ಥೆಯ ವಿರುದ್ದ ಕ್ರಮಕ್ಕೆ ಕೋರಿ ಪತ್ರ ಪೊಲೀಸರು ಪತ್ರ ಬರೆದಿದ್ದಾರೆ. ಅಂತೆಯೇ ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿಗೂ ನಿರ್ಧರಿಸಲಾಗಿದೆ. ಇದಕ್ಕಾಗಿ ಆರ್ಬಿಐ ಮೂಲಕ ಎಟಿಎಂಗೆ ಹಣ ತುಂಬುವ ಬ್ಯಾಂಕ್ ಗಳು, ಸೆಕ್ಯೂರಿಟಿ ಸಂಸ್ಥೆಗಳ ಜೊತೆಗೆ ನಗರ ಪೊಲೀಸ್ ಆಯುಕ್ತರು ಸಭೆ ನಡೆಸಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯಾ ವಿಭಾಗಗಳ ಡಿಸಿಪಿಗಳು ಬ್ಯಾಂಕ್ಗಳ ಲಿಸ್ಟ್ ಕಲೆಕ್ಟ್ ಮಾಡ್ತಿದ್ದಾರೆ. ಲಿಸ್ಟ್ ರೆಡಿಯಾದ ಬಳಿಕ ಆರ್ಬಿಐಗೆ ಮಾರ್ಗಸೂಚಿಗಳ ಬಗ್ಗೆ ಪತ್ರ ಬರೆಯಲಿದ್ದಾರೆ. ಈ ಕುರಿತಾಗಿ ಈಗಾಗಲೇ ಆರ್ಬಿಐ ಅಧಿಕಾರಿಗಳ ಜೊತೆಯೂ ಕಮಿಷನರ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಬ್ಯಾಂಕ್ ಅಧಿಕಾರಿಗಳು, ಸೆಕ್ಯೂರಿಟಿ ಏಜೆನ್ಸಿಗಳ ಜೊತೆ ಈ ವಾರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯಲಿದೆ. ಈ ವೇಳೆ ಸಿಬ್ಬಂದಿ ನೇಮಕದಲ್ಲಿ ಎನ್ಒಸಿ ಪಡೆಯದಿರೋದು, ದಾಖಲೆ ಪಡೆಯದೆ ಕೆಲಸಕ್ಕೆ ಸಿಬ್ಬಂದಿ ನೇಮಕ ಬಗ್ಗೆ ತಿಳುವಳಿಕೆ ನೀಡಲಿರುವ ಪೊಲೀಸರು ಹೊಸ ಮಾರ್ಗಸೂಚಿ ಬಗ್ಗೆ ತಿಳಿಸಲಿದ್ದಾರೆ.


